ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 APRIL 2021
ಒಂದು ವಾರದ ಗಡುವು. ಅಷ್ಟರಲ್ಲಿ ರಸ್ತೆ ಮೇಲಿರುವ ಗುಜರಿ ವಸ್ತುಗಳೆಲ್ಲ ತೆರವಾಗಬೇಕು. ಇಲ್ಲವಾದಲ್ಲಿ ಪಾಲಿಕೆ ವಾಹನ ಬರಲಿದೆ..! ಇದು ಶಿವಮೊಗ ಮಹಾನಗರ ಪಾಲಿಕೆ ಮೇಯರ್ ಸುನೀತಾ ಅಣ್ಣಪ್ಪ ಅವರ ಖಡಕ್ ಎಚ್ಚರಿಕೆ.

ನಗರದ ಮಾರ್ಡನ್ ಟಾಕೀಸ್ ಹಿಂಭಾಗ ಹಳೆ ತೀರ್ಥಹಳ್ಳಿ ರಸ್ತೆಗೆ (ಒ.ಟಿ.ರಸ್ತೆ) ಹೊಂದಿಕೊಂಡಂತೆ ಇರುವ ಪ್ಯಾರಲಲ್ ರಸ್ತೆಗೆ ಇವತ್ತು ಮೇಯರ್ ಸುನೀತಾ ಅಣ್ಣಪ್ಪ, ಉಪ ಮೇಯರ್ ಶಂಕರ್ ಗನ್ನಿ, ಸ್ಥಾಯಿ ಸಮಿತಿ ಅಧ್ಯಕ್ಷ ಧೀರರಾಜ್ ಹೊನ್ನವಿಲೆ ಭೇಟಿ ನೀಡಿದ್ದರು.
ರಸ್ತೆ ತುಂಬೆಲ್ಲ ಗುಜರಿ ವಸ್ತುಗಳು
ಒ.ಟಿ.ರಸ್ತೆಯಿಂದ ಪಂಚವಟಿ ಕಾಲೋನಿಗೆ ಸಂಪರ್ಕ ಕಲ್ಪಿಸುವ ಪ್ಯಾರಲಲ್ ರಸ್ತೆ ಇದು. ಬಹು ವರ್ಷದಿಂದ ಇಲ್ಲಿ ಗುಜರಿ ವ್ಯಾಪಾರ ನಡೆಯುತ್ತಿದೆ. ಆದರೆ ಗುಜರಿ ವಸ್ತುಗಳನ್ನು ರಸ್ತೆ ಮೇಲೆಲ್ಲ ಹರಡಲಾಗಿದೆ. ಈ ಸಂಬಂಧ ಮೇಯರ್‍ಗೆ ದೂರು ಬಂದಿದ್ದರಿಂದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಒಂದು ವಾರದೊಳಗೆ ಗುಜರಿ ವಸ್ತುಗಳನ್ನು ತೆರವು ಮಾಡಬೇಕು ಎಂದು ಸೂಚಿಸಿದರು.
ಇಲ್ಲಿರುವವರ ವ್ಯಾಪಾರ, ವಹಿವಾಟಿಗೆ ತೊಂದರೆ ಕೊಡುವುದು ನಮ್ಮ ಉದ್ದೇಶವಲ್ಲ. ರಸ್ತೆ ಮೇಲೆ ಗುಜರಿ ವಸ್ತುಗಳನ್ನು ಹರಡುವುದು ಬೇಡ. ಅದನ್ನೆಲ್ಲ ತೆರವು ಮಾಡಲಿ ಎಂದು ಜಾಗೃತಿ ಮೂಡಿಸಲಾಗಿದೆ. ತೆರವು ಮಾಡಲು ಒಂದು ವಾರ ಕಾಲವಕಾಶ ನೀಡಲಾಗಿದೆ ಎಂದು ಮೇಯರ್ ಸುನೀತಾ ಅಣ್ಣಪ್ಪ ಮಾಧ್ಯಮಗಳಿಗೆ ತಿಳಿಸಿದರು.
ಬದಲಿ ವ್ಯವಸ್ಥೆ ಕುರಿತು ಚರ್ಚೆ
ಗುಜರಿ ವ್ಯಾಪಾರಿಗಳಿಗೆ ಪರ್ಯಾಯ ಜಾಗ ನೀಡುವಂತೆ ಇಲ್ಲಿನ ವ್ಯಾಪಾರಿಗಳು ಮನವಿ ಮಾಡಿದ್ದರು. ಈ ಕುರಿತು ವ್ಯಾಪಾರಿಗಳ ಜೊತೆಗೆ ಮಾತನಾಡಿದ ಮೇಯರ್ ಸುನೀತಾ ಅಣ್ಣಪ್ಪ, ನಗರದ ಹೊರ ಭಾಗದಲ್ಲಿ ಬದಲಿ ವ್ಯವಸ್ಥೆ ಮಾಡಿಕೊಡಲು ಪಾಲಿಕೆ ಸಿದ್ಧವಿದೆ. ಈ ಕುರಿತು ಪಾಲಿಕೆಯಲ್ಲಿ ಚರ್ಚೆ ನಡೆಸಿ, ಜಿಲ್ಲಾಧಿಕಾರಿ ಅವರೊಂದಿಗೆ ಮಾತನಾಡಿ ಒಳ್ಳೆ ಕಡೆ ವ್ಯಾಪಾರಕ್ಕೆ ತೊಂದರೆ ಆಗದಂತೆ ವ್ಯವಸ್ಥೆ ಮಾಡಿಕೊಡುವುದಾಗಿ ತಿಳಿಸಿದರು.
ಮೇಯರ್ ಭೇಟಿಯ ವಿಡಿಯೋ ರಿಪೋರ್ಟ್
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com
LATEST NEWS
- ಊರಗಡೂರಿನ ಸಂಕೇತ್ ಸಮಾಧಿ ಒಡೆದ ದುಷ್ಕರ್ಮಿಗಳು, ಪೋಷಕರ ಆಕ್ರೋಶ

- ಶಿವಮೊಗ್ಗದಲ್ಲಿ ನಡುರಾತ್ರಿ ಮಳೆ ಅಬ್ಬರ, ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ತಾಪಮಾನ? ಇಂದಿನ ಹಾವಾಮಾನ ವರದಿ

- ಶಿವಮೊಗ್ಗದಲ್ಲಿ ದಾರುಣ ಘಟನೆ, ಶಾಲಾ ಬಸ್‌ಗೆ ಒಂದೂವರೆ ವರ್ಷದ ಮಗು ಬಲಿ

- ಪೊಲೀಸರನ್ನು ಕಂಡು ಲಾರಿ ಬಿಟ್ಟು ಪರಾರಿಯಾದ ಚಾಲಕ, ಪರಿಶೀಲನೆ ಬಳಿಕ ಲಾರಿ ಸೀಜ್, ದಾಖಲಾಯ್ತು ಕೇಸ್

- ಗುಡ್ಡೇಕಲ್ ಬಾಲಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ರಥೋತ್ಸವ, ಯಾವಾಗ?

About The Editor
ನಿತಿನ್ ಆರ್.ಕೈದೊಟ್ಲು
















