ಶಿವಮೊಗ್ಗದಲ್ಲಿ 22 ವರ್ಷದ ಬಳಿಕ ಸಮ್ಮೇಳನ, ಭಾಗಿಯಾಗ್ತಾರೆ ಸಾವಿರ ಸಾವಿರ ತಜ್ಞ ವೈದ್ಯರು, ಎಲ್ಲಿ?

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

ಶಿವಮೊಗ್ಗ: 22 ವರ್ಷದ ಬಳಿಕ ಶಿವಮೊಗ್ಗದಲ್ಲಿ ರಾಜ್ಯಮಟ್ಟದ ತಜ್ಞ ವೈದ್ಯರ ಬೃಹತ್ ಸಮ್ಮೇಳನ (medical conference) KAPICON-2026 ಆಯೋಜಿಸಲಾಗಿದೆ. ಮೇ 8 ರಿಂದ 10ರವರೆಗೆ ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದ ಆಡಿಟೋರಿಯಂನಲ್ಲಿ ಸಮ್ಮೇಳನ ನಡೆಯಲಿದೆ ಎಂದು ಅಸೋಸಿಯೇಷನ್ ಆಫ್ ಫಿಸಿಶಿಯನ್ಸ್ ಆಫ್ ಇಂಡಿಯಾದ ಶಿವಮೊಗ್ಗ ಶಾಖೆಯ ಸಂಘಟನಾ ಕಾರ್ಯದರ್ಶಿ ಡಾ. ಪೃಥ್ವಿ.ಬಿ.ಸಿ ತಿಳಿಸಿದ್ದಾರೆ.

ಸಿಮ್ಸ್‌ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, API ಕರ್ನಾಟಕ ಘಟಕದ ಈ 43ನೇ ವಾರ್ಷಿಕ ಸಮ್ಮೇಳನಕ್ಕೆ ಶಿವಮೊಗ್ಗದ ಸಿಮ್ಸ್ (SIMS) ಮತ್ತು ಸುಬಯ್ಯ ವೈದ್ಯಕೀಯ ಮಹಾವಿದ್ಯಾಲಯಗಳು ಆತಿಥ್ಯ ವಹಿಸಲಿವೆ ಎಂದು ತಿಳಿಸಿದರು.

Dr-Pruthvi-of-Metro-Hospital-in-Shimoga-Addresses-the-media

Dr-Pruthvi-of-Metro-Hospital-in-Shimoga-Addresses-the-media

ಡಾ. ಪೃಥ್ವಿ ಏನೆಲ್ಲ ಹೇಳಿದರು? ಇಲ್ಲಿದೆ ಹೈಲೈಟ್‌ ಪಾಯಿಂಟ್ಸ್‌

  • ಮೇ 8ರ ಸಂಜೆ 5:15ಕ್ಕೆ ಹೃದಯರೋಗ ತಜ್ಞ, ಪದ್ಮಶ್ರೀ ಪುರಸ್ಕೃತ ಡಾ. ಸಿ.ಎನ್. ಮಂಜುನಾಥ್ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ.
  • ಉದ್ಘಾಟನಾ ಸಮಾರಂಭದಲ್ಲಿ ಡಾ. ಮಹಾಲಿಂಗಪ್ಪ ಬಿ., ಡಾ. ಜಿ. ನರಸಿಮುಲು, ಡಾ. ಜ್ಯೋತಿರ್ಮೋಯ್ ಪಾಲ್, ಡಾ. ನಂದಿನಿ ಚಟರ್ಜಿ, ಡಾ. ವಿರೂಪಾಕ್ಷಪ್ಪ ವಿ., ಡಾ. ನಾಗೇಂದ್ರಪ್ಪ ಎಸ್. ಭಾಗವಹಿಸಲಿದ್ದಾರೆ.
  • ರಾಜ್ಯಾದ್ಯಂತ ಸುಮಾರು 2000ಕ್ಕೂ ಹೆಚ್ಚು ತಜ್ಞ ವೈದ್ಯರು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ.
  • ವೈದ್ಯಕೀಯ ಕ್ಷೇತ್ರದ ನೂತನ ಆವಿಷ್ಕಾರಗಳು, ಚಿಕಿತ್ಸಾ ವಿಧಾನಗಳ ಕುರಿತು 1000ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು ಮಂಡನೆ ಆಗಲಿವೆ. 120ಕ್ಕೂ ಹೆಚ್ಚು ಉಪನ್ಯಾಸಗಳು ನಡೆಯಲಿವೆ.
  • ಮೊದಲ ಬಾರಿಗೆ 45 ವರ್ಷದೊಳಗಿನ ಯುವ ವೈದ್ಯರಿಗಾಗಿ ಯುವ ಕಾಪಿಕಾನ್ (Yuva KAPICON) ಎಂಬ ವಿಶೇಷ ಸೆಷನ್ ಆಯೋಜಿಸಲಾಗಿದೆ.

ಸಾರ್ವಜನಿಕರಿಗೆ ಉಚಿತ ಸಿಪಿಆರ್‌ ತರಬೇತಿ

ಸಮ್ಮೇಳನದ ಅಂಗವಾಗಿ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗಾಗಿ ಜೀವರಕ್ಷಕ ತರಬೇತಿ (CPR Workshop) ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಯಾವುದೇ ನೋಂದಣಿ ಶುಲ್ಕವಿಲ್ಲದೆ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬಹುದು. ಮೇ 8 ರಂದು ಬೆಳಿಗ್ಗೆ 9 ಗಂಟೆಯಿಂದ 11 ಗಂಟೆಯವರೆಗೆ ಸಿಮ್ಸ್‌ನ ಕಮ್ಯುನಿಟಿ ಮೆಡಿಸಿನ್ ಹಾಲ್‌ನಲ್ಲಿ ಈ ತರಬೇತಿ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ವೈದ್ಯರು ತಿಳಿಸಿದರು.

doctors press meet about medical conference

ವೈದ್ಯಕೀಯ ಕ್ಷೇತ್ರದ ಇತ್ತೀಚಿನ ಆವಿಷ್ಕಾರಗಳು ಮತ್ತು ಚಿಕಿತ್ಸಾ ಪದ್ಧತಿಗಳನ್ನು ಪರಸ್ಪರ ಹಂಚಿಕೊಳ್ಳಲು ಈ ಸಮ್ಮೇಳನ ಒಂದು ವೇದಿಕೆಯಾಗಲಿದೆ. ಕೇವಲ ವೈದ್ಯರಿಗಷ್ಟೇ ಅಲ್ಲದೆ, ಸಾರ್ವಜನಿಕರಿಗೂ ಜೀವರಕ್ಷಕ ತರಬೇತಿ ನೀಡುವ ಮೂಲಕ ಸಾಮಾಜಿಕ ಕಳಕಳಿಯನ್ನೂ ಮೆರೆಯುತ್ತಿದ್ದೇವೆ.

ಡಾ. ಎಸ್‌.ಬಿ.ಹೆಗಡೆ, ಎಪಿಐ ಶಿವಮೊಗ್ಗ ಅಧ್ಯಕ್ಷ

ಸುದ್ದಿಗೋಷ್ಠಿಯಲ್ಲಿ ಖಜಾಂಚಿ ಡಾ. ಮಹೇಶ್ ಮೂರ್ತಿ ಬಿ.ಆರ್., ಡಾ. ಶ್ರೀಕಾಂತ್ ಎನ್.ಹೆಗಡೆ, ಡಾ. ರವೀಶ್ ಕೆ.ಆರ್., ಡಾ. ಪರಮೇಶ್ವರ್ ಎಸ್., ಡಾ. ಅರವಿಂದ ಸಿ.ಎಲ್., ಡಾ. ಪ್ರವೀಣ್ ದೇವರಬಾವಿ, ಡಾ. ರತ್ನಾಕರ್, ಡಾ. ಪಿ.ಕೆ.ಪೈ, ಡಾ. ಡಿ.ಜಿ.ಶಿವಕುಮಾರ್, ಡಾ. ಈಶ್ವರಪ್ಪ ಸೇರಿ ಹಲವರು ಇದ್ದರು.  

ಇದನ್ನೂ ಓದಿ : ಕೇಂದ್ರ ಸರ್ಕಾರದ ಸಮಿತಿಗೆ ಸಂಸದ ರಾಘವೇಂದ್ರ ಮರು ನೇಮಕ

ಹೆಚ್ಚಿನ Shimoga News, Shivamogga News ಮತ್ತು SHIVAMOGGA CITY ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.

© ಶಿವಮೊಗ್ಗ ಲೈವ್‌ : ಮೇ 5, 2026