ಶಿವಮೊಗ್ಗದಲ್ಲಿ ಹೈಕೋರ್ಟ್‌ ಪೀಠ, ಸಿಎಂ ಭೇಟಿಯಾದ ನಿಯೋಗ, ಏನೆಲ್ಲ ಮಾನವಿ ಮಾಡಿದರು?

ಶಿವಮೊಗ್ಗ: ಜಿಲ್ಲೆಯಲ್ಲಿ ಕರ್ನಾಟಕ ಹೈಕೋರ್ಟ್ (Karnataka High Court) ಸಂಚಾರಿ ಪೀಠ (Circuit Bench) ಸ್ಥಾಪಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ (District In-charge Minister) ಎಸ್. ಮಧು ಬಂಗಾರಪ್ಪ ಅವರು ಮುಖ್ಯಮಂತ್ರಿ (Chief Minister) ಸಿದ್ದರಾಮಯ್ಯ ಅವರಿಗೆ ಅಧಿಕೃತವಾಗಿ ಮನವಿ ಪತ್ರ (Official memorandum) ಸಲ್ಲಿಸಿದರು.

ಈ ಭಾಗದ ಎಲ್ಲ ಚುನಾಯಿತ ಜನಪ್ರತಿನಿಧಿಗಳು (Elected representatives), ಸಾರ್ವಜನಿಕರು ಹಾಗೂ ವಿವಿಧ ಸಂಘ-ಸಂಸ್ಥೆಗಳು ಶಿವಮೊಗ್ಗದಲ್ಲಿ ಪೀಠ ಸ್ಥಾಪನೆಯಾಗಬೇಕೆಂದು ಒಮ್ಮತದ ಸಹಮತ (Unanimous consensus) ವ್ಯಕ್ತಪಡಿಸಿದ್ದಾರೆ. ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜನರ ಅನುಕೂಲಕ್ಕಾಗಿ ಈಗಾಗಲೇ ಧಾರವಾಡ ಮತ್ತು ಕಲಬುರಗಿಗಳಲ್ಲಿ ಹೈಕೋರ್ಟ್ ಸಂಚಾರಿ ಪೀಠಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದ್ದಾರೆ.

hivamogga-advocates-meet-CM-Siddaramaiah-for-high-court-circuit-bench.

ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಮಾದರಿ ಬೆಂಗಳೂರಿನಿಂದ ಸುಮಾರು 250ರಿಂದ 300 ಕಿ.ಮೀ ದೂರವಿರುವ ಮಧ್ಯ ಕರ್ನಾಟಕದ (Central Karnataka) ಜಿಲ್ಲೆಗಳಿಗೂ ಈ ಸೌಲಭ್ಯ ಸಿಗಬೇಕಿದೆ ಎಂದು ಸಚಿವ ಮಧು ಬಂಗಾರಪ್ಪ ಅವರು ಸಿಎಂ ಗಮನಕ್ಕೆ ತಂದರು.

ಈ ವೇಳೆ ವಕೀಲರಾದ (Advocates) ಕೆ. ಬಸಪ್ಪಗೌಡ, ಜಿ.ಆರ್.ರಾಘವೇಂದ್ರ, ಕೆ.ಪಿ. ಶ್ರೀಪಾಲ್, ಲಕ್ಷ್ಮಿ ಕಾಂತ್ ಚಿಮನೂರು, ಶ್ರೀನಿವಾಸ್, ಹೈ ಕೋರ್ಟ್ ವಕೀಲರಾದ ಹರೀಶ್, ಪ್ರಕಾಶ್, ಚಂದ್ರಕಾಂತ್ ಪಾಟೀಲ್, ಅನಿತಾ ಪಾಟೀಲ್‌ ಇತರರಿದ್ದರು.

Kalleshwara-Enterprises.webp
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp