ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 24 ಸೆಪ್ಟೆಂಬರ್ 2019
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರೊಂದಿಗೆ ಇವತ್ತು ಶಿವಮೊಗ್ಗ ಪ್ರೆಸ್ ಟ್ರಸ್ಟ್ನಲ್ಲಿ ಸಂವಾದ ಏರ್ಪಡಿಸಲಾಗಿತ್ತು. ಈ ವೇಳೆ ಸಚಿವರು ಏನೆಲ್ಲ ಹೇಳಿದರು? ಇಲ್ಲಿದೆ ಡಿಟೇಲ್ಸ್
ದೊಡ್ಡ ಇಲಾಖೆ ಸಿಕ್ಕಿದೆ
ಗ್ರಾಮೀಣಾಭಿವೃದ್ಧಿ ಸಚಿವಾಲಯ ಅತ್ಯಂತ ವಿಸ್ತಾರವಾದ ಇಲಾಖೆ. ಅಧಿಕಾರಿಗಳು, ಎಕ್ಸ್ಪರ್ಟ್ಗಳ ಸಭೆ ನಡೆಸಲಾಯಿತು. ಜಿಲ್ಲಾ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ, ಸ್ಥಾಯಿ ಸಮಿತಿ ಸಭೆ ನಡೆಸಲಾಯಿತು.
ಬೆಳಗಾವಿ ಸುವರ್ಣ ಸೌಧದಲ್ಲು ಗ್ರಾಮೀಣಾಭಿವೃದ್ಧಿ ಇಲಾಖೆ ಕಚೇರಿ. ಆಡಳಿತಾತ್ಮಕ ಮತ್ತು ಆರ್ಥಿಕ ಸ್ವಾತಂತ್ರ್ಯ ನೀಡಲಾಗುತ್ತದೆ.
ಟಾಸ್ಕ್ ಫೋರ್ಸ್ ರಚಿಸಲಾಗುತ್ತದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸ್ಥಾಯಿ ಸಮಿತಿ ಸದಸ್ಯರು ಇರಲಿದ್ದಾರೆ. ಪ್ರತಿ ವರ್ಷಕ್ಕೆ ಒಂದು ಕೋಟಿ ರೂ. ನೀಡಲಾಗುತ್ತದೆ.
30 ಕೋಟಿ ವೆಚ್ಚದಲ್ಲಿ ಗುಂಡಿ ಮುಚ್ಚಿದ್ದೇವೆ
ಬಡವರಿಗೆ ಮನೆ ಕಟ್ಟಿಕೊಡಬೇಕು ಅನ್ನುವ ಯೋಚನೆ ಇತ್ತು. ಗೋಪಿಶೆಟ್ಟಿಕೊಪ್ಪದಲ್ಲಿ 2500 ಮನೆಗಳಿಗೆ ಗುದ್ದಲಿ ಪೂಜೆ ಹಂತಕ್ಕೆ ಬಂದಿದೆ. ಕಾರ್ಮಿಕರಿಗೆ ಆಶ್ರಯ ಮನೆ ಕಟ್ಟಿಕೊಡಲಾಗುತ್ತಿದೆ. ಸಿದ್ಲಿಪುರದಲ್ಲಿ ಜಮೀನಿದೆ. ಅದು ಈಗ ಆಶ್ರಯ ಇಲಾಖೆ ವ್ಯಾಪ್ತಿಗೆ ಬಂದಿದೆ. ಅರ್ಜಿ ಕರೆಯಲು ಅಧಿಕಾರಿಗಳಿಗೆ ಹೇಳಿದ್ದೇನೆ.
ಶಿವಮೊಗ್ಗ ನಗರದಲ್ಲಿ 38 ಪಾರ್ಕ್ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ನಗರದ ಎಲ್ಲ ಶಾಲೆಗಳ ರಿಪೇರಿಗೆ 13 ಕೋಟಿ ಸಂಗ್ರಹವಾಗಿದೆ. ವ್ಯವಸ್ಥಿತವಾಗಿ ಶೌಚಾಲಯ ನಿರ್ಮಿಸಲಾಗುತ್ತಿದೆ.
ಶಿವಮೊಗ್ಗ ನಗರದಲ್ಲಿ ರಸ್ತೆಗಳು ಗುಂಡಿ ಬಿದ್ದಿದ್ದವು. 30 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸವಾಗುತ್ತಿದೆ.
ವಿಮಾನ ನಿಲ್ದಾಣವಾದರೆ ನಿರುದ್ಯೋಗ ನಿವಾರಣೆ
ವಿಮಾನ ನಿಲ್ದಾಣ ಕುರಿತು ಕೇಂದ್ರ ಸಚಿವರ ಜೊತೆ ಮಾತನಾಡಿ್ದ್ದೇದ್ದೇವೆ. ಎರಡು ಸಭೆಗಳಾಗಿವೆ.
ವಿಮಾನ ನಿಲ್ದಾಣದ ನಿರೀಕ್ಷೆಯಲ್ಲಿ ಅನೇಕ ಉದ್ಯಮಿಗಳು ಕಾಯುತ್ತಿದ್ದಾರೆ. ಆದಷ್ಟು ಬೇಗ ವಿಮಾನ ನಿಲ್ದಾಣವಾದರೆ ಶಿವಮೊಗ್ಗದಲ್ಲಿ ಉದ್ಯಮಗಳು ಹೆಚ್ಚಾಗಲಿವೆ. ನಿರುದ್ಯೋಗ ಸಮಸ್ಯೆ ನಿವಾರಣೆ ಆಗಲಿದೆ.
ವರ್ಗಾವಣೆ ಅನಿವಾರ್ಯ, ಆದರೆ ದಂಧೆಯಾಗಬಾರದು
ಚುನಾವಣೆ ಪ್ರತಿನಿಧಿಗಳು ಅವರವರ ಇಲಾಖೆ ಅಭಿವೃದ್ಧಿ ಮಾಡಲು ವರ್ಗಾವಣೆ ನಡೆಯುತ್ತದೆ. ಎಲ್ಲಿಯವರೆಗೆ ಪ್ರಜಾಪ್ರಭುತ್ವ ವ್ಯವಸ್ಥೆ ಇರುತ್ತದೊ ಅಲ್ಲಿವರೆಗೆ ವರ್ಗಾವಣೆ ಇರುತ್ತದೆ. ಆದರೆ ಇದು ದಂಧೆ ಆಗಬಾರದು.
ಈ ಹಿಂದೆ ನನಗೊಬ್ಬರು ಸ್ಪೆಷಲ್ ಆಫೀಸರ್ ಇದ್ದರು. ಈಗಲು ಅವರು ಬೇಕು ಎಂದು ಹಾಕಿಸಿಕೊಂಡಿದ್ದೇನೆ. ತಪ್ಪು, ಒಪ್ಪುಗಳ ಕುರಿತು ತಿಳಿಸುತ್ತಾರೆ. ಅಭಿವೃದ್ಧಿ ದೃಷ್ಟಿಯಿಂದ ವರ್ಗಾವಣೆ ಮಾಡಿಸಿಕೊಳ್ಳಲಾಗಿದೆ.
ಟ್ರಸ್ಟ್ ಅಧ್ಯಕ್ಷ ಮಂಜುನಾಥ್, ಕಾರ್ಯದರ್ಶಿ ಶಿ.ವಿ.ಸಿದ್ದಪ್ಪ ಇದ್ದರು.