ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಹೆಚ್ಚು ಖರ್ಚು, ಮಿನಿಸ್ಟರ್‌, ಸಂಸದರ ಮಧ್ಯೆ ಸವಾಲು, ಪ್ರತಿ ಸವಾಲು

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 16 JANUARY 2024

SHIMOGA : ವಿಮಾನ ನಿಲ್ದಾಣದ ಕಾಮಗಾರಿ ವೆಚ್ಚದ ಕುರಿತು ಸಚಿವ ಮಧು ಬಂಗಾರಪ್ಪ ಮತ್ತು ಸಂಸದ ರಾಘವೇಂದ್ರ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ. ಪ್ರತ್ಯೇಕ ಪತ್ರಿಕಾಗೋಷ್ಠಿಯಲ್ಲಿ ಇಬ್ಬರು ಆರೋಪ, ಪ್ರತ್ಯಾರೋಪ ಮತ್ತು ಸವಾಲು ಹಾಕಿದ್ದಾರೆ.

Madhu Bangarappa

ಶಿವಮೊಗ್ಗ ವಿಮಾನ ನಿಲ್ದಾಣದ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಮಾತು ಕೇಳಿ ಬಂದಿದೆ. ಈ ಹಿನ್ನೆಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದೇನೆ. ವಿಮಾನ ನಿಲ್ದಾಣದ ಕ್ರಿಯಾಯೋಜನೆ 249 ಕೋಟಿ ರೂ. ಇತ್ತು. ವರ್ಷದಿಂದ ವರ್ಷಕ್ಕೆ ಏರಿಕೆ ಮಾಡಿ 450 ಕೋಟಿ ರೂ.ಗೆ ಹೆಚ್ಚಳವಾಗಿತ್ತು. ಕಾಮಗಾರಿ ವಿಳಂಬ ಆಗಿದ್ದೇಕೆ? ಬಜೆಟ್‌ ಹೆಚ್ಚಳವಾಗಿದ್ದೇಕೆ? ಎಂಬುದರ ಕುರಿತು ಸಮಗ್ರ ತನಿಖೆ ಆಗಬೇಕು. ಕಲಬುರಗಿಯಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ವಿಮಾನ ನಿಲ್ದಾಣ ನಿರ್ಮಿಸಲಾಗಿದೆ. ಆದರೆ ಇಲ್ಲಿ ಅಧಿಕವಾಗಿದ್ದು ಏಕೆ ಎಂದು ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದರು.

BY Raghavendra

ವಿಮಾನ ನಿಲ್ದಾಣದ ರನ್‌ವೇ ಮೊದಲು 1100 ಮೀಟರ್‌ ಇತ್ತು. ಆಗ 150 ಕೋಟಿ ರೂ. ಅನುದಾನ ನೀಡಲಾಗಿತ್ತು. ಬಳಿಕ ರನ್‌ ವೇ 3600 ಮೀಟರ್‌ಗೆ ವಿಸ್ತರಿಸಲಾಯಿತು. ಇದರಿಂದ ವೆಚ್ಚ 450 ಕೋಟಿ ರೂ.ಗೆ ತಲುಪಿತು. ಕಳೆದ ಆರು ತಿಂಗಳಿಂದ ತನಿಖೆ ವಿಮಾನ ನಿಲ್ದಾಣದ ವೆಚ್ಚದ ಕುರಿತು ತನಿಖೆ ನಡೆಸುವುದಾಗಿ ಸಚಿವ ಮಧು ಬಂಗಾರಪ್ಪ ಅವರು ಹೇಳುತ್ತಿದ್ದಾರೆ. ಪ್ರತಿ ದಿನ ಸಚಿವರೇ ವಿಮಾನದಲ್ಲಿ ಓಡಾಡುತ್ತಿದ್ದಾರೆ. ನಿತ್ಯ ಪತ್ರಿಕಾಗೋಷ್ಠಿ ನಡೆಸಿ ತನಿಖೆ ಮಾಡುವುದಾಗಿ ಯಾರನ್ನೂ ಹೆದರಿಸುವುದು ಬೇಡ. ಸಾಧ್ಯವಾದರೆ ತನಿಖೆ ಮಾಡಿಸಲಿ.

ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಕಾರು ಅಡ್ಡಗಟ್ಟಿ ಚಾಲಕನಿಗೆ ಹಲ್ಲೆ, ಜೀವ ಬೆದರಿಕೆ

 

Leave a Comment