ಶಿವಮೊಗ್ಗದಲ್ಲಿ ಅಪಘಾತಕ್ಕೀಡಾದ ವ್ಯಕ್ತಿಗೆ ನೆರವಾದ ಸಚಿವ ಮಧು ಬಂಗಾರಪ್ಪ

ಶಿವಮೊಗ್ಗ: ನಗರದ ಗುಡ್ಡೆಕಲ್ ದೇವಸ್ಥಾನದ ಸಮೀಪ ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದಿದ್ದ ಸವಾರನಿಗೆ ಸಚಿವ ಮಧು ಬಂಗಾರಪ್ಪ ನೆರವಿಗೆ ಧಾವಿಸಿದರು. ತಕ್ಷಣ ಕಾರು ನಿಲ್ಲಿಸಿ ವ್ಯಕ್ತಿಯ ಆರೋಗ್ಯ ವಿಚಾರಿಸಿದರು. (ಈ ಸುದ್ದಿಯನ್ನು ಇನ್ನು 23 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಸಚಿವ ಮಧು ಬಂಗಾರಪ್ಪ ಅವರು ಕಾರಿನಲ್ಲಿ ತೆರಳುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಸವಾರ ರಸ್ತೆಗೆ ಬಿದ್ದಿರುವುದನ್ನು ಗಮನಿಸಿದರು. ತಕ್ಷಣವೇ ತಮ್ಮ ಕಾರು ನಿಲ್ಲಿಸಿ ಸವಾರನ ಬಳಿ ತೆರಳಿದ ಅವರು, ಆತನ ಕ್ಷೇಮ ವಿಚಾರಿಸಿ ಧೈರ್ಯ ತುಂಬಿದ್ದಾರೆ. ಸಚಿವ ಮಧು ಬಂಗಾರಪ್ಪ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.

Minister-Madhu-Bangarappa-helps-injured-person-in-Shivamogga