ಯುವ ನಿಧಿಯ ಲಾಭ ಈಗ ಯಾರಿಗೂ ಸಿಗಲ್ಲ, ಸರ್ಕಾರದ ವಿರುದ್ಧ ಯುವ ಮೊರ್ಚಾ ಆರೋಪ

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

SHIVAMOGGA LIVE NEWS | 11 JANUARY 2024

SHIMOGA : ಚುನಾವಣೆ ಮೊದಲು ಎಲ್ಲ ನಿರುದ್ಯೋಗಿಗಳಿಗು ಯುವನಿಧಿ ನೀಡಲಾಗುತ್ತದೆ ಎಂದು ಕಾಂಗ್ರೆಸ್‌ ಪಕ್ಷ ಭರವಸೆ ನೀಡಿತ್ತು. ಈಗ ನಿಬಂಧನೆಗಳನ್ನು ವಿಧಿಸಿದೆ. ಅದರಂತೆ ಯಾರಿಗು ಯೋಜನೆಯ ಲಾಭ ದೊರೆಯುವುದಿಲ್ಲ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಎಂ.ಬಿ.ಹರಿಕೃಷ್ಣ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹರಿಕೃಷ್ಣ, ಎಲ್ಲ ನಿರುದ್ಯೋಗಿಗಳಿಗು ಯುವನಿಧಿ ನೀಡಲಾಗುವುದು ಎಂದು ಘೋಷಣೆ ಮಾಡಿದ್ದರು. ಈಗ ಪದವಿ ಪಡೆದು 6 ತಿಂಗಳು ಕಳೆದಿರಬೇಕು ಎಂಬ ಮಾನದಂಡ ವಿಧಿಸಿದ್ದಾರೆ. ಕುವೆಂಪು ವಿಶ್ವವಿದ್ಯಾಲಯವು ಕಳೆದ ಅಕ್ಟೋಬರ್‌ ತಿಂಗಳಲ್ಲಿ ಫಲಿತಾಂಶ ಪ್ರಕಟಿಸಿದೆ. ಈ ವಿವಿ ವ್ಯಾಪ್ತಿಯ ಯುವಕರು ಯುವನಿಧಿ  ಯೋಜನೆ ಲಾಭ ಪಡೆಯಲು ಇನ್ನೂ ಮೂರು ತಿಂಗಳು ಕಾಯಬೇಕಾಗುತ್ತದೆ ಎಂದು ಟೀಕಿಸಿದರು.

ಇದನ್ನೂ ಓದಿ – ಶಿವಮೊಗ್ಗದ ಜೈಲ್‌ ಸರ್ಕಲ್‌ನಿಂದ ಗೋಪಿ ಸರ್ಕಲ್‌ವರೆಗೆ ಪಂಜು ಹಿಡಿದು ಸಾಗಿದ ಮಿನಿಸ್ಟರ್‌ಗಳು

ಪ್ರಮುಖರಾದ ಸುಹಾಸ್‌ ಶಾಸ್ತ್ರಿ, ಗಣೇಶ್‌, ಸಂಗಯ್ಯ, ರಾಹುಲ್‌ ಬಿದರೆ ಸುದ್ದಿಗೋಷ್ಠಿಯಲ್ಲಿದ್ದರು.

Leave a Comment