ಶಿವಮೊಗ್ಗದಲ್ಲಿ ಸಂಸದ ರಾಘವೇಂದ್ರಗೆ ಮೈತುಂಬ ಬಣ್ಣ ಬಳಿದ ಯುವಕರು

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 26 MARCH 2024

SHIMOGA : ಚನಾವಣಾ ಪ್ರಚಾರದ ಒತ್ತಡದ ನಡುವೆ ಸಂಸದ ಬಿ.ವೈ.ರಾಘವೇಂದ್ರ ಶಿವಮೊಗ್ಗದಲ್ಲಿ ಹೋಳಿ ಆಚರಣೆಯಲ್ಲಿ ಪಾಲ್ಗೊಂಡರು. ಮೈ ತುಂಬ ಬಣ್ಣ ಹಚ್ಚಿಸಿಕೊಂಡು ಯುವಕರ ಜೊತೆಗೆ ಡಾನ್ಸ್‌ ಮಾಡಿದರು.

ಗೋಪಿ ಸರ್ಕಲ್‌ನಲ್ಲಿ ಹಿಂದೂ ಕೇಸರಿ ಅಲಂಕಾರ ಸಮಿತಿ ಆಯೋಜಿಸಿದ್ದ ರೈನ್‌ ಡಾನ್ಸ್‌ ಮತ್ತು ಡಿಜೆ ಸಂಭ್ರಮದಲ್ಲಿ ಸಂಸದ ರಾಘವೇಂದ್ರ ಭಾಗವಹಿಸಿದ್ದರು. ಇದೇ ವೇಳೆ ಅಲ್ಲಿ ಸೇರಿದ್ದವರು ಸಂಸದ ರಾಘವೇಂದ್ರ ಅವರಿಗೆ ಬಣ್ಣ ಹಚ್ಚಿ ಸಂಭ್ರಮಿಸಿದರು.

ಕಾಲೇಜು ದಿನಗಳು ನೆನಪಾದವು

ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಂಸದ ರಾಘವೇಂದ್ರ, ಸಂಭ್ರಮದಿಂದ ಹೋಳಿ ಆಚರಣೆ ಮಾಡಲಾಗುತ್ತಿದೆ. ಶಿವನ ತಪಸ್ಸು ಭಂಗ ಮಾಡಲು ಹೋದ ಕಾಮನ ದಹನವಾಗಿತ್ತು. ಅದೇ ರೀತಿ ಈ ದೇಶದ ಸಮಸ್ಯೆಗಳು ದೂರಾಗಿ ದೇಶಕ್ಕೆ ಒಳಿತಾಗಬೇಕಿದೆ. ಇವತ್ತಿನ ಆಚರಣೆ ಗಮನಿಸಿ ನನ್ನ ಕಾಲೇಜು ಜೀವನ ನೆನಪಾಯಿತು. ಆಗೆಲ್ಲ ಸ್ನೇಹಿತರ ಜೊತೆಗೆ ಆಚರಣೆ ಮಾಡುತ್ತಿದ್ದೆ. ಇವತ್ತು ಯುವಕರ ಜೊತೆ ಹಬ್ಬ ಆಚರಿಸಿ ಖುಷಿಯಾಯಿತು ಎಂದರು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಅದ್ಧೂರಿ ಹೋಳಿ ಆಚರಣೆ, ಡಿಜೆಗೆ ಭರ್ಜರಿ ರೈನ್‌ ಡಾನ್ಸ್‌, ಹೇಗಿತ್ತು? ಇಲ್ಲಿವೆ ಫೋಟೊಗಳು

Leave a Comment