ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 20 ಮಾರ್ಚ್ 2022
ಹಳೆ ದ್ವೇಷದ ಹಿನ್ನೆಲೆ ಶಿವಮೊಗ್ಗ ನಗರದಲ್ಲಿ ಯುವಕನೊಬ್ಬನ ಹತ್ಯೆ ಮಾಡಲಾಗಿದೆ. ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾಗಿದ್ದ ಯುವಕ ಮೃತಪಟ್ಟಿದ್ದಾನೆ.
ಟಿಪ್ಪುನಗರ ನಿವಾಸಿ ಜಿಕೃಲ್ಲಾ ಖಾನ್ (28) ಮೃತ ವ್ಯಕ್ತಿ. ಎನ್.ಟಿ.ರಸ್ತೆಯ ಫಲಕ್ ಶಾದಿ ಮಹಲ್ ಬಳಿ ಶನಿವಾರ ರಾತ್ರಿ ಘಟನೆ ಸಂಭವಿಸಿದೆ.
ಏನಿದು ಪ್ರಕರಣ?
ಫಲಕ್ ಶಾದಿ ಮಹಲ್ ಬಳಿ ಜಿಕೃಲ್ಲಾ ಖಾನ್ ಮೇಲೆ ಟ್ವಿಸ್ಟ್ ಇಮ್ರಾನ್, ಗ್ಯಾಸ್ ಇಮ್ರಾನ್, ವಸೀಮ್, ಶಹಬಾಜ್, ರುಮಾನ್, ವಸೀಮ್, ಕಾಲಾ ವಸೀಮ್ ಮತ್ತು ನಬೀಲ್ ಎಂಬುವವು ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಜಿಕೃಲ್ಲಾ ಖಾನ್’ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಬೆಳಗಿನ ಜಾವ ಚಿಕಿತ್ಸೆಗೆ ಸ್ಪಂದಿಸದೆ ಜಿಕೃಲ್ಲಾ ಖಾನ್ ಮೃತಪಟ್ಟಿದ್ದಾನೆ.
ಹಳೆ ದ್ವೇಷವೆ ಕಾರಣ
ಗ್ಯಾಸ್ ಇಮ್ರಾನ್ ಮತ್ತು ಜಿಕೃಲ್ಲಾ ಖಾನ್ ಮಧ್ಯೆ ಈ ಹಿಂದೆ ಕಾರು ಪಾರ್ಕಿಂಗ್ ವಿಚಾರವಾಗಿ ಜಗಳವಾಗಿತ್ತು. ನಂತರ ಜಿಕೃಲ್ಲಾ ಖಾನ್ ಗ್ಯಾಸ್ ಇಮ್ರಾನ್’ನ ತಂದೆ ಅಯೂಬ್ ಖಾನ್ ಅವರ ಅಂಗಡಿಗೆ ಬಂದ ಮೊಬೈಲ್ ಕಿತ್ತುಕೊಂಡು ಹೋಗಿದ್ದಾನೆ ಎಂದು ದೂರು ನೀಡಿದ್ದರು. ಈ ಸಂಬಂಧ ಪ್ರಕರಣ ದಾಖಲಾಗಿತ್ತು.
ಟ್ವಿಸ್ಟ್ ಇಮ್ರಾನ್ ಎಂಬಾತನೊಂದಿಗೂ ಜಿಕೃಲ್ಲಾ ಖಾನ್ ಸಣ್ಣಪುಟ್ಟ ವಿಚಾರವಾಗಿ ಜಗಳವಾಗಿದೆ.
ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ
ಈ ಮೇಲ್ – shivamoggalive@gmail.com
WhatsApp Number – 7411700200
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






