ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIMOGA, 28 AUGUST 2024 : ನಂಜಪ್ಪ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಫಿಜಿಯೋಥೆರಪಿ ಅಂಡ್ ಹೆಲ್ತ್ ಸೈನ್ಸ್ ಕಾಲೇಜಿನ ಸಹಯೋಗದಲ್ಲಿ ನಂಜಪ್ಪ ಎಜುಕೇಷನ್ ಅಕಾಡೆಮಿಯ ಮೊದಲ ವರ್ಷದ ಪದವಿ ಪ್ರದಾನ ಸಮಾರಂಭ (Convocation) ನಡೆಯಿತು. ಸುವರ್ಣ ಸಂಸ್ಕೃತಿ ಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರ‍್ಯಾಂಕ್ ವಿಜೇತರಿಗೆ ಪದಕ ಪ್ರದಾನ ಮಾಡಲಾಯಿತು.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಯಾರೆಲ್ಲ ಏನೆಲ್ಲ ಹೇಳಿದರು?
ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಡಾ.ಎನ್.ಸಾಯಿ ಕುಮಾರ್ ಮಾತನಾಡಿ, ನಂಜಪ್ಪ ಸಂಸ್ಥೆ ಅತ್ಯಾಧುನಿಕ ತಾಂತ್ರಿಕತೆ ಮೂಲಕ ಪ್ರಾಯೋಗಿಕವಾಗಿ ಶಿಕ್ಷಣ ನೀಡುತ್ತಿದೆ. ಮೆಟ್ರೋ ನಗರಗಳಿಗೆ ತಮ್ಮ ಮಕ್ಕಳನ್ನು ಅಧ್ಯಯನಕ್ಕೆ ಕಳುಹಿಸುವ ಬದಲು ಪೋಷಕರು ಇಲ್ಲಿಯೇ ದಾಖಲು ಮಾಡಬಹುದು. ಇನ್ನು, ಆರೋಗ್ಯ ಕ್ಷೇತ್ರ ಅತ್ಯಂತ ಭಿನ್ನ ಮತ್ತು ಇಲ್ಲಿ ನಿತ್ಯ ಹೊಸ ಸವಾಲುಗಳು ಎದುರಾಗುತ್ತವೆ. ಆದ್ದರಿಂದ ಚಿನ್ನದ ಪದಕ, ರ‍್ಯಾಂಕ್‌ಗಿಂತಲು ರೋಗಿಗಳಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬುದು ಮುಖ್ಯ. ಹೊಸ ಕಾಯಿಲೆ, ಚಿಕಿತ್ಸೆ ಕುರಿತು ಅಪ್‌ಡೇಟ್ ಆಗುತ್ತಿರಬೇಕು ಎಂದು ಸಲಹೆ ನೀಡಿದರು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ನಂಜಪ್ಪ ಎಜುಕೇಷನ್ ಅಕಾಡೆಮಿ ಅಧ್ಯಕ್ಷ ಡಾ.ಅವಿನಾಶ್ ಮಾತನಾಡಿ, ಸಹನೆ, ಸಮಾನತೆ, ಕಾಯಕ ತತ್ವಗಳನ್ನು ಅಳವಡಿಸಿಕೊಂಡರೆ ವೃತ್ತಿ ಜೀವನ ಮತ್ತು ಖಾಸಗಿ ಬದುಕಿನಲ್ಲಿ ಯಶಸ್ಸು ಕಾಣಬಹುದು. ಪರಿಶ್ರಮವು ಇರಬೇಕು. ಯಶಸ್ವಿ ವ್ಯಕ್ತಿಗಳು ನಿತ್ಯ 14 ರಿಂದ 15 ಗಂಟೆ ಕಾರ್ಯನಿರ್ವಹಿಸುತ್ತಾರೆ. ವೃತ್ತಿ ಮತ್ತು ಸಹೋದ್ಯೋಗಿಗಳನ್ನು ಗೌರವಿಸುವುದು ಅತಿ ಮುಖ್ಯ ಎಂದು ಸಲಹೆ ನೀಡಿದರು.
ನಂಜಪ್ಪ ಇನ್‌ಸ್ಟಿಟ್ಯೂಟ್ ಆಫ್ ಅಲೈಡ್ ಫಿಜಿಯೋಥೆರಪಿ ವಿಭಾಗದ ಪ್ರಾಚಾರ್ಯ ಡಾ. ಡೊನಿ ಜಾನ್ ಮಾತನಾಡಿ, ಪದವಿ ಪಡೆದವರಿಗೆ ಹೊಸ ಯುಗ ಆರಂಭವಾಗಿದೆ. ಹಣದ ಹಿಂದೆ ಓಡುವ ಬದಲು ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಉತ್ತಮ. ನಂಜಪ್ಪ ಎಜುಕೇಷನ್ ಅಕಾಡೆಮಿಯ ಮೊದಲ ಬ್ಯಾಚ್ ಹೊರ ಬಂದಿದೆ. ಮಲೆನಾಡು ಭಾಗದಲ್ಲಿ ನಂಜಪ್ಪ ಹೆಲ್ತ್ ಕೇರ್ ಅತ್ಯಂತ ಗುಣಮಟ್ಟದ ಚಿಕಿತ್ಸೆಗೆ ಖ್ಯಾತಿ ಪಡೆದಿದೆ. ಮೆಲ್ಟಿಸ್ಪೆಷಾಲಿಟಿ ಜೊತೆಗೆ ಅಂಕಾಲಜಿ, ಕ್ಯಾನ್ಸರ್ ಸ್ಪೆಷಾಲಿಟಿ, ಕಾರ್ಡಿಯಾಲಜಿ ವಿಭಾಗವು ಇದೆ. ಪುಸ್ತಕದ ಜೊತೆಗೆ ಪ್ರಾಯೋಗಿಕವಾಗಿಯು ಇಲ್ಲಿ ತಿಳಿಯಲು, ಕಲಿಯಲು ಅವಕಾಶವಿದೆ.» ಗುಣಮಟ್ಟದ ಚಿಕಿತ್ಸೆಗೆ ಖ್ಯಾತಿ
ಮೊದಲನೆ ಘಟಿಕೋತ್ಸವದಲ್ಲಿ ಸುಮಾರು 75 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ನಂಜಪ್ಪ ಟ್ರಸ್ಟ್‌ನ ಟ್ರಸ್ಟಿ ಅಮೃತ್, ನಂಜಪ್ಪ ಸಮೂಹ ಸಂಸ್ಥೆಗಳ ಸಿಬ್ಬಂದಿ, ವಿದ್ಯಾರ್ಥಿಗಳು, ಪೋಷಕರು ಇದ್ದರು.
ಇದನ್ನೂ ಓದಿ ⇒ ಬೆಳ್ಳಂಬೆಳಗ್ಗೆ ಪೊಲೀಸರ ದಾಳಿ, ಮೂಲೆ ಮೂಲೆ ಶೋಧಿಸಿದ ಖಾಕಿ