ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 03 FEBRUARY 2021
ನಗರದ ನಂಜಪ್ಪ ಆಸ್ಪತ್ರೆ ಹಾಗೂ ನಂಜಪ್ಪ ಲೈಫ್ ಕೇರ್ ವತಿಯಿಂದ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಸಾರ್ವಜನಿಕರಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಫೆ.4ರ ಬೆಳಗ್ಗೆ 7.30ಕ್ಕೆ ಸೈಕಲ್ ಜಾಥಾ ಹಾಗೂ ಬೆಳಗ್ಗೆ 11ಕ್ಕೆ ಕ್ಯಾನ್ಸರ್‌ನಿಂದ ಗುಣಮುಖರಾದವರೊಂದಿಗೆ ಸಂವಾದ ಹಮ್ಮಿಕೊಳ್ಳಲಾಗಿದೆ.
ಫೆ.4ರ ಬೆಳಗ್ಗೆ 7.30ಕ್ಕೆ ನಂಜಪ್ಪ ಆಸ್ಪತ್ರೆ ವೈದ್ಯರು, ಸಿಬ್ಬಂದಿ, ಶಿವಮೊಗ ಸೈಕಲ್ ಕ್ಲಬ್‌ನ ಸದಸ್ಯರು ಈ ವರ್ಷದ ವಿಶ್ವ ಕ್ಯಾನ್ಸರ್ ದಿನಾಚರಣೆ ‘ ಐ ಯಾಮ್ ಅಂಡ್ ಐ ವಿಲ್’ ಘೋಷಣೆಯೊಂದಿಗೆ ನಂಜಪ್ಪ ಆಸ್ಪತ್ರೆಯಿಂದ, ಗೋಪಿ ವೃತ್ತ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಆಲ್ಕೊಳ, ನಂಜಪ್ಪ ಲೈಫ್ ಕೇರ್ ಅಲ್ಲಿಂದ ನಂಜಪ್ಪ ಆಸ್ಪತ್ರೆವರೆಗೆ ಸೈಕಲ್ ಜಾಥಾ ನಡೆಸಲಿದ್ದಾರೆ.
ವೈದ್ಯಕೀಯ ಕ್ಷೇತ್ರದಲ್ಲಿ ನಂಜಪ್ಪ ಸಾಧನೆ
1987ರಲ್ಲಿ ಆರಂಭವಾದ ಶಿವಮೊಗ್ಗ ನಂಜಪ್ಪ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಶಿವಮೊಗ್ಗ ಜಿಲ್ಲೆಗೆ ಸೀಮಿತವಾಗದೇ ಚಿಕ್ಕಮಗಳೂರು, ದಾವಣಗೆರೆ, ಉತ್ತರ ಕರ್ನಾಟಕ, ಹಾವೇರಿ, ಚಿತ್ರದುರ್ಗ ಮುಂತಾದ ಜಿಲ್ಲೆಗ ಜನರಿಗೆ ಆರೋಗ್ಯ ಸೇವೆ ನೀಡುತ್ತಿದೆ. ಅಪಘಾತ, ತುರ್ತು ಚಿಕಿತ್ಸೆ, ಪ್ರಸೂತಿ ಹಾಗೂ ಸ್ತ್ರೀರೋಗ, ಸಾಮಾನ್ಯ ಶಸ್ತ್ರ ಚಿಕಿತ್ಸೆ, ಹೃದಯ ಸಂಬಂಧಿ, ಕ್ಯಾನ್ಸರ್ ರೋಗಿಗಳಿಗೆ ಸಂಜೀವಿನಿಯಾಗಿದೆ.
ಅತ್ಯಾಧುನಿಕ ವೈದ್ಯಕೀಯ ಉಪಕರಣದ ಮೂಲಕ ಒಂದೇ ಸೂರಿನಡಿ ಸಮಾಜಕ್ಕೆ ಚಿಕಿತ್ಸೆ ಒದಗಿಸುವುದು ನಂಜಪ್ಪ ಆಸ್ಪತ್ರೆ ಧ್ಯೇಯ. ಈ ನಿಟ್ಟಿನಲ್ಲಿ ನಂಜಪ್ಪ ಲೈಫ್ ಕೇರ್‌ನಲ್ಲಿ 18 ತಿಂಗಳ ಹಿಂದೆ ಆರಂಭವಾದ ಕ್ಯಾನ್ಸರ್ ವಿಭಾಗದಲ್ಲಿ ಪರಿಣಿತ ಸರ್ಜಿಕಲ್ ಆಂಕೋಲಜಿಸ್ಟ್, ಮೆಡಿಕಲ್ ಆಂಕೋಲಜಿಸ್ಟ್, ರೇಡಿಯೇಷನ್ ಆಂಕೋಲಜಿಸ್ಟ್, ನ್ಯೂಕ್ಲಿಯರ್ ಮೆಡಿಸಿನ್ ತಜ್ಞರು, ಆಂಕೋಪಾಥಾಲಿಜಿಸ್ಟ್, ಇಂಟರ್‌ವೆಂಷನ್ ರೇಡಿಯೋಲಜಿಸ್ಟ್, ಪ್ಲಾಸ್ಟಿಕ್ ಮತ್ತು ರಿಕನ್ಸ್‌ಟ್ರಕ್ಟಿವ್ ಸರ್ಜನ್ ಹಾಗೂ ರಿಹ್ಯಾಬಿಟೇಷನ್ ತಂಡವಿದೆ.
ಇದನ್ನೂ ಓದಿ | ಇದು ಸಣ್ಣ ಸಾಧನೆಯಲ್ಲ, ಇದಕ್ಕೆಲ್ಲ ನೀವೆ ಕಾರಣ, ಧನ್ಯವಾದ ಶಿವಮೊಗ್ಗ
ಅತ್ಯಾಧುನಿಕ ಉಪಕರಣ
ಕ್ಯಾನ್ಸರ್ ಪತ್ತೆಗೆ ಆಧುನಿಕ ಉಪಕರಣಗಳಾದ ಪೆಟ್‌ಸಿಟಿ ಇಮೇಜಿಂಗ್, ಪಿಎಸ್‌ಎಂಎ ಇಮೇಜಿಂಗ್, ಗಾಮಾ ಕ್ಯಾಮೆರಾ ಸೌಲಭ್ಯಗಳು ನಂಜಪ್ಪ ಲೈಫ್‌ಕೇರ್‌ನಲ್ಲಿವೆ. ಮಧ್ಯ ಕರ್ನಾಟಕದಲ್ಲಿ ಪ್ರಪ್ರಥಮ ಬಾರಿಗೆ ಇ-ಇಮೇಜಿಂಗ್ ಸೌಲಭ್ಯ ಇಲ್ಲಿದೆ. ಪೆಟ್‌ಸಿಟಿ ಪರೀಕ್ಷೆಗೆ ಜನರು ಬೆಂಗಳೂರು, ಮಂಗಳೂರಿಗೆ ತೆರಳಬೇಕಿತ್ತು. ಈಗ ನಂಜಪ್ಪ ಆಸ್ಪತ್ರೆಯಲ್ಲೇ ಈ ಸೌಲಭ್ಯ ಇರುವುದರಿಂದ ಜನರಿಗೆ ಅನುಕೂಲವಾಗಿದೆ.
ಇದುವರೆಗೆ 300ಕ್ಕೂ ಹೆಚ್ಚು ಪೆಟ್‌ಸಿಟಿ ಹಾಗೂ ಪಿಎಸ್‌ಎಂಎ ಇಮೇಜಿಂಗ್‌ನ್ನು ಮಾಡಿರುವುದು, 250ಕ್ಕೂ ಪ್ರಮುಖ ಹಾಗೂ ಕ್ಲಿಷ್ಟಕರ ಶಸ್ತ್ರಚಿಕಿತ್ಸೆಗಳನ್ನು ಮಾಡಿರುವುದು ನಂಜಪ್ಪ ಲೈಫ್ ಕೇರ್ ಹೆಗ್ಗಳಿಕೆ. ಅನ್ನನಾಳ, ಶಿವಮೊಗ್ಗದಲ್ಲಿ ಮೊದಲ ಬಾರಿಗೆ ಶ್ವಾಸಕೋಶ(ವಿಎಟಿಎಸ್), ಮೇದೋಜ್ಜೀರಕ ಗ್ರಂಥಿ, ಕೊಲೊರೆಕ್ಟಲ್, ತಲೆ-ಬಾಯಿ-ಕತ್ತಿನ ಕ್ಯಾನ್ಸರ್‌ಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಲಾಗಿದೆ.
ಸಂವಾದ-ಉಚಿತ ಸಮಾಲೋಚನೆ
ಕ್ಯಾನ್ಸರ್‌ನಿಂದ ಗುಣಮುಖರಾದವರು ಹಾಗೂ ಆಸ್ಪತ್ರೆಯ ಕ್ಯಾನ್ಸರ್‌ವಿಭಾಗದ ವೈದ್ಯರು ಫೆ.4ರ ಬೆಳಗ್ಗೆ 11ಕ್ಕೆ ನಂಜಪ್ಪ ಆಸ್ಪತ್ರೆಯಲ್ಲಿ ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಅಂದು ಮಧ್ಯಾಹ್ನ 12 ರಿಂದ ಸಂಜೆ 4ರವರೆಗೆ ಕ್ಯಾನ್ಸರ್ ವಿಭಾಗದಿಂದ ಹೊರರೋಗಿಗಳಿಗೆ ಉಚಿತ ಸಮಾಲೋಚನಾ ಸೌಲಭ್ಯವಿರುತ್ತದೆ.
ನಂಜಪ್ಪ ಆಸ್ಪತ್ರೆ ಕ್ಯಾನ್ಸರ್ ವಿಭಾಗದ ವೈದ್ಯರ ಸಮೂಹ
ಡಾ.ಅಪರ್ಣಾ ಶ್ರೀವತ್ಸ , ಎಂಡಿ, ಪೆಡಿಯಾಟ್ರಿಕ್ಸ್ (ಪಿಜಿಐ, ಸಿಎಚ್‌ಡಿ), ಮೆಡಿಕಲ್ ಅಂಕೋಲಜಿಸ್ಟ್.
ಡಾ.ವೆಂಕಟೇಶ್ವರಲು, ಎಂಬಿಬಿಎಸ್. ಎಂಡಿ (ಪ್ಯಾಥೋಲಜಿ), ಆಂಕೋಪ್ಯಾಥಾಲಜಿಸ್ಟ್.
ಡಾ.ಅರವಿಂದನ್, ಎಂಎಸ್ (ಜನರಲ್ ಸರ್ಜರಿ) ಡಿಎನ್‌ಬಿ(ಸರ್ಜಿಕಲ್ ಆಂಕೋಲಜಿ), ಕ್ಯಾನ್ಸರ್ ಶಸ್ತ್ರಚಿಕಿತ್ಸಕರು.
ಡಾ.ವಿಜಯ ರಾಘವನ್, ಡಿಎನ್‌ಬಿ(ನ್ಯೂಕ್ಲಿಯರ್ ಮೆಡಿಸಿನ್ ತಜ್ಞರು).
ಡಾ.ಈರಪ್ಪ ಮದಬಾವಿ. ಎಂಡಿ, ಡಿಎಂ(ಮೆಡಿಕಲ್ ಆಂಕೋಲಜಿಸ್ಟ್).
ಡಾ.ಗುರುಚನ್ನ, ಎಂಎಸ್, ಎಂಸಿಎಚ್(ಟಿಎಂಎಚ್ ಮುಂಬೈ) ಎಫ್‌ಎಂಎಎಸ್, ಕ್ಯಾನ್ಸರ್ ಶಸ್ತ್ರಚಿಕಿತ್ಸಕರು.
ಡಾ.ನಡಹಳ್ಳಿ ರವಿ, ಎಂಬಿಬಿಎಸ್, ಎಂಡಿ, ಆರ್‌ಟಿ, ರೇಡಿಯೇಷನ್ ಕ್ಯಾನ್ಸರ್ ಚಿಕಿತ್ಸಕರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422