ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA NEWS | 31 MAY 2021
ಚಿಕಿತ್ಸೆ ಪಡೆಯುತ್ತಿರುವ ಕರೋನ ಸೋಂಕಿತರಲ್ಲಿ ಚೈತನ್ಯ ತುಂಬಲು ಶಿವಮೊಗ್ಗದ ನಂಜಪ್ಪ ಆಸ್ಪತ್ರೆ ಸಿಬ್ಬಂದಿ ವಿಭಿನ್ನ ಪ್ರಯತ್ನ ಮಾಡಿದ್ದಾರೆ. ಸೋಂಕಿತರೊಂದಿಗೆ ಹಾಡು ಹೇಳಿ, ಡಾನ್ಸ್ ಮಾಡಿ ಉತ್ಸಾಹ ಮೂಡಿಸಿದ್ದಾರೆ.
ಕುವೆಂಪು ರಸ್ತೆಯಲ್ಲಿರುವ ನಂಜಪ್ಪ ಆಸ್ಪತ್ರೆಯಲ್ಲಿ ಕೋವಿಡ್ ಚಿಕಿತ್ಸೆ ನಡೆಯುತ್ತಿದೆ. ಐಸೊಲೇಷನ್ ವಾರ್ಡ್ ಆಗಿರುವುದರಿಂದ ಕುಟುಂಬದವರು, ಸ್ನೇಹಿತರಾರೂ ಸೋಂಕಿತರನ್ನು ಭೇಟಿಯಾಗುವಂತಿಲ್ಲ. ಇದರಿಂದ ಸೋಂಕಿತರಲ್ಲಿ ಒಂಟಿತನ, ಏಕತಾನತೆ ಕಾಡುತ್ತದೆ. ಈ ಸಮಸ್ಯೆ ನೀಗಿಸಲು ಆಸ್ಪತ್ರೆ ಸಿಬ್ಬಂದಿ ವಿನೂತನ ಪ್ರಯೋಗ ಮಾಡಿದ್ದಾರೆ.
ಐಸೊಲೇಷನ್ ವಾರ್ಡ್ನಲ್ಲಿ ಡಾನ್ಸ್
ಪಿಪಿಇ ಕಿಟ್ ಧರಿಸಿ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ಸಿಬ್ಬಂದಿಗಳು, ಚಿಕಿತ್ಸೆ ನಡುವೆ ವಾರ್ಡ್ನಲ್ಲಿ ಹಾಡು ಹಾಕಿ, ಡಾನ್ಸ್ ಮಾಡಿದ್ದಾರೆ. ಅಲ್ಲದೆ ಕಿರು ನಾಟಕವನ್ನು ಮಾಡಿ ಆತ್ಮವಿಶ್ವಾಸ ತುಂಬಿದರು.
ಕಳೆದ ಕೆಲವು ದಿನದಿಂದ ಐಸೊಲೇಷನ್ ವಾರ್ಡ್ನ ನಾಲ್ಕು ಗೋಡೆಯ ಮಧ್ಯದಲ್ಲೇ ಇರುವ ಸೋಂಕಿತರಿಗೆ ಈ ಪ್ರಯೋಗ ಉತ್ಸಾಹ ಮೂಡಿಸಿದೆ. ಐಸೊಲೇಷನ್ ವಾರ್ಡ್ನಲ್ಲಿ ಮನೆ ವಾತಾವರಣವಿರಲಿ ಎಂಬ ಕಾರಣಕ್ಕೆ ಈ ಪ್ರಯತ್ನ ಮಾಡಲಾಗಿದೆ ಎಂದು ನಂಜಪ್ಪ ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ.
ಐಸೊಲೇಷನ್ ವಾರ್ಡ್ನಲ್ಲಿನ ಹಾಡು, ಡಾನ್ಸಿನ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ಲಕ್ಷಣ ಕಂಡು ಬಂದ ಕೂಡಲೆ ಪರೀಕ್ಷೆ ಮಾಡಿಸಿಕೊಳ್ಳಿ. ಶಿವಮೊಗ್ಗದಲ್ಲಿ ಸುರಕ್ಷಿತವಾಗಿ ಕೋವಿಡ್ ಪರೀಕ್ಷೆಗೆ ಫೋನ್ ಮಾಡಿ, ರಿಜಿಸ್ಟರ್ ಮಾಡಿಕೊಳ್ಳಿ
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422