ಲಸಿಕೆಗಾಗಿ ವಾರದ ರಜೆಯನ್ನೂ ಕೈಬಿಟ್ಟ ಸಿಮ್ಸ್ ಸಿಬ್ಬಂದಿ

ಶಿವಮೊಗ್ಗ ಲೈವ್.ಕಾಂ | SHIMOGA NEWS | 31 MAY 2021

ಶಿವಮೊಗ್ಗ ಮೆಡಿಕಲ್ ಕಾಲೇಜು ಸಿಬ್ಬಂದಿಗಳು ಲಸಿಕೆಗಾಗಿ ವಾರದ ರಜೆಯನ್ನೆ ತೊರೆದಿದ್ದಾರೆ. ಜನರಿಗೆ ಲಸಿಕೆ ನೀಡಬೇಕು ಎಂದು ಕಳೆದ ಐದು ತಿಂಗಳಿಂದ ಭಾನುವಾರವು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮೇ 30ರಂದು ಭಾನುವಾರ ಸಿಬ್ಬಂದಿ ಕರ್ತವ್ಯ ನಿರ್ವಹಿಸಿ 480 ಮಂದಿಗೆ ಲಸಿಕೆ ನೀಡಿದ್ದಾರೆ. ಸರ್ಕಾರ ಒದಗಿಸಿದ್ದ 300 ಕೋವಿಶೀಲ್ಡ್ ಮತ್ತು 180 ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿದೆ. ಎಲ್ಲವೂ ಸಕೆಂಡ್ ಡೋಸ್ ಲಸಿಕೆಯಾಗಿದೆ.

ಲಸಿಕೆಗಾಗಿ ನೋಡಲ್ ಅಧಿಕಾರಿಯಾಗಿರುವ ಸಿಮ್ಸ್ ಕಾಲೇಜಿನ  ಡಾ.ಪ್ರವೀಣ್ ಕುಮಾರ್, ಒಬ್ಬರು ಅಸಿಸ್ಟೆಂಟ್ ಪ್ರೊಫೆಸರ್, ಇಬ್ಬರು ಮೆಡಿಕಲ್ ಸ್ನಾತಕೋತ್ತರ ವಿದ್ಯಾರ್ಥಿಗಳು, ನಾಲ್ವರು ಹೌಸ ಸರ್ಜನ್‍ಗಳು, ನಾಲ್ವರು ಡೇಟಾ ಎಂಟ್ರಿ ಆಪರೇಟರ್‍ಗಳು ವಾರದ ರಜೆಯನ್ನು ಕೈಬಿಟ್ಟು ಕೆಲಸ ಮಾಡುತ್ತಿದ್ದಾರೆ.

Kalleshwara-Enterprises.webp

ಜನವರಿ 16ರಿಂದ ಲಸಿಕೆ ನೀಡುವ ಕಾರ್ಯ ಶುರುವಾಗಿದೆ. ಅಂದಿನಿಂದ ಭಾನುವಾರವು ಇಲ್ಲಿ ಲಸಿಕೆ ನೀಡಲಾಗುತ್ತಿದೆ.

ಲಕ್ಷಣ ಕಂಡು ಬಂದ ಕೂಡಲೆ ಪರೀಕ್ಷೆ ಮಾಡಿಸಿಕೊಳ್ಳಿ. ಶಿವಮೊಗ್ಗದಲ್ಲಿ ಸುರಕ್ಷಿತವಾಗಿ ಕೋವಿಡ್ ಪರೀಕ್ಷೆಗೆ ಫೋನ್ ಮಾಡಿ, ರಿಜಿಸ್ಟರ್ ಮಾಡಿಕೊಳ್ಳಿ

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಮೇಲ್ shivamoggalive@gmail.com

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment