ಶಿವಮೊಗ್ಗ ಲೈವ್
SHIVAMOGGA LIVE NEWS | 8 JUNE 2024 (ಈ ಸುದ್ದಿಯನ್ನು ಇನ್ನು 29 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
SHIMOGA : ಲೋಕಸಭೆ ಚುನಾವಣೆ ಬೆನ್ನಿಗೆ ಶಿವಮೊಗ್ಗ ಮಹಾನಗರ ಪಾಲಿಕೆ ಆಯುಕ್ತರನ್ನು (Commissioner) ಸರ್ಕಾರ ಬದಲಾಯಿಸಿದೆ. ನೂತನ ಆಯುಕ್ತರಾಗಿ ಡಾ. ಕವಿತಾ ಯೋಗಪ್ಪನವರ್ ಅವರನ್ನು ನೇಮಿಸಲಾಗಿದೆ. ಸದ್ಯ ಪಾಲಿಗೆ ಆಯುಕ್ತರಾಗಿ ಮಾಯಣ್ಣ ಗೌಡ ಅವರನ್ನು ಮಾತೃ ಇಲಾಖೆಗೆ ಬಂದು ವರದಿ ಮಾಡಿಕೊಳ್ಳುವಂತೆ ತಿಳಿಸಲಾಗಿದೆ.
ಡಾ. ಕವಿತಾ ಯೋಗಪ್ಪನವರ್ ಅವರು ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಡಾ. ಶಿವರಾಮಕಾರಂತ ಬಡಾವಣೆಯ ಭೂಸ್ವಾಧೀನಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ
ಇದನ್ನೂ ಓದಿ – ಈ ಮೇಲ್ ಚೆಕ್ ಮಾಡಿದ ಇಂಜಿನಿಯರ್ಗೆ ಕಾದಿತ್ತು ಆಘಾತ, ನೀವೂ ಆಗಬಹುದು ಇವರ ಮುಂದಿನ ಟಾರ್ಗೆಟ್
ಗೂಗಲ್ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:
