ವಾಸವಿ ಯುವಜನ ಸಂಘದ ಅಧ್ಯಕ್ಷರಾಗಿ ಶ್ರೀನಾಗ್‌, ಕನ್ನಿಕಾ ಸಖಿಯರ ಸಂಘದ ಅಧ್ಯಕ್ಷ ಶ್ವೇತಾ ಸಂದೀಪ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ನಗರದ ವಿನಾಯಕ ನಗರದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿ ವಾಸವಿ ಯುವಜನ ಸಂಘದ ನೂತನ ಪದಾಧಿಕಾರಿಗಳ (new president) ಪದಗ್ರಹಣ ಹಾಗೂ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕನ್ನಿಕಾ ಸಖಿಯರ ಸಂಘದ ಉದ್ಘಾಟನಾ ಸಮಾರಂಭವು ನಡೆಯಿತು.

ವಾಸವಿ ಯುವಜನ ಸಂಘದ ನಿಕಟಪೂರ್ವ ಅಧ್ಯಕ್ಷ ಸಿ.ಆರ್. ಶ್ರೀನಿವಾಸ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾದ ಮಾಜಿ ಅಧ್ಯಕ್ಷ ಎಸ್.ಎನ್. ಶಬರೀಶ್ ಉದ್ಘಾಟಿಸಿದರು. ಸಮಾರಂಭದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರಾದ ಸುನಿಲ್ ಕುಮಾರ್ ಟಿ.ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶಿವಮೊಗ್ಗದ ಶಾಸಕ ಎಸ್.ಎನ್. ಚನ್ನಬಸಪ್ಪ ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು.

Srinag-New-President-of-Vasavi-yuvajana-sanga.

ನೂತನ ಪದಾಧಿಕಾರಿಗಳ ಪದಗ್ರಹಣ

ವಾಸವಿ ಯುವಜನ ಸಂಘದ 2026-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಎಸ್.ಎನ್. ಶ್ರೀನಾಗ ಅಧಿಕಾರ ಸ್ವೀಕರಿಸಿದರು. ಇದೇ ವೇಳೆ ನೂತನವಾಗಿ ಆರಂಭವಾದ ಕನ್ನಿಕಾ ಸಖಿಯರ ಸಂಘದ ಸ್ಥಾಪಕ ಅಧ್ಯಕ್ಷ ಶ್ವೇತಾ ಸಂದೀಪ್ ಅವರು ಪದಗ್ರಹಣ ಮಾಡಿದರು. ಆರ್ಯವೈಶ್ಯ ವಾಸವಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಟಿ.ಆರ್. ಅಶ್ವತ್ ನಾರಾಯಣ್ ಶೆಟ್ಟಿ ಹಾಗೂ ಶಾರದಾ ಗೋಪಾಲ್ ಅವರು ಕನ್ನಿಕಾ ಸಖಿಯರ ಸಂಘದ ಬ್ಯಾನರ್ ಅನಾವರಣಗೊಳಿಸಿದರು.

ಇದನ್ನೂ ಓದಿ – ಸಿಎಂಗೆ ಡಿಸಿಎಂ ಪತ್ರ, ಶಿವಮೊಗ್ಗದ ಇಬ್ಬರ ಹೆಸರು ಪ್ರಸ್ತಾಪ, ಆಕಾಂಕ್ಷಿಗಳಿಗೆ ನಿರಾಸೆ, ಏನಿದೆ ಪತ್ರದಲ್ಲಿ?

ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಯುವಜನ ಮಹಾಸಭಾದ ಗಿರಿನಾಡು ವಿಭಾಗದ ಕಾರ್ಯದರ್ಶಿ ಡಿ.ಎಂ. ಅರ್ಜುನ್, ಮಹಾಸಭಾದ ನಿರ್ದೇಶಕ ನಿತಿನ್ ಕಸಲ್ ಸೇರಿದಂತೆ ಎರಡೂ ಸಂಘಗಳ ನೂತನ ಪದಾಧಿಕಾರಿಗಳು ಹಾಗೂ ಸಮುದಾಯದ ಪ್ರಮುಖರು ಉಪಸ್ಥಿತರಿದ್ದರು.

number-1-advt-copy-new.webp

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment