ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ನಗರದ ಗೋಪಿ ವೃತ್ತದಲ್ಲಿ ವಾಹನ ದಟ್ಟಣೆ ಮತ್ತು ಟ್ರಾಫಿಕ್ ಜಾಮ್ ನಿಭಾಯಿಸಲು ಸಂಚಾರ ಪೊಲೀಸರು ಹಲವು ಬದಲಾವಣೆ (Traffic System) ಮಾಡಿದ್ದಾರೆ. ಎಲ್ಲ ದಿಕ್ಕುಗಳಿಂದ ಬರುವ ವಾಹನಗಳಿಗೆ ಸಿಗ್ನಲ್ ಲೈಟ್ ಅಳವಡಿಸಲಾಗಿದೆ. ಡಿವೈಡರ್ ತೆರವುಗೊಳಿಸಿ, ಗುಂಡಿ ಮುಚ್ಚಿಸಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

ಗೋಪಿ ಸರ್ಕಲ್ನಲ್ಲಿ ಏನೇನಾಗಿದೆ? ಇಲ್ಲಿದೆ ಪಾಯಿಂಟ್ಸ್
1ಈ ಮೊದಲು ಗೋಪಿ ವೃತ್ತದಲ್ಲಿ ವಾಹನಗಳು ಅಡ್ಡಾದಿಡ್ಡಿ ಸಂಚರಿಸುತ್ತಿದ್ದವು. ಹಾಗಾಗಿ ಕೆಲವೊಮ್ಮೆ ಟ್ರಾಫಿಕ್ ಜಾಮ್ ಆಗುತ್ತಿತ್ತು. ಇನ್ನು ಕೆಲವು ಬಾರಿ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿದ್ದವು. ಇದೇ ಕಾರಣಕ್ಕೆ ಸಂಚಾರ ಪೊಲೀಸರು ಗೋಪಿ ವೃತ್ತದಲ್ಲಿ ವಾಹನ ಸಂಚಾರ ಸಂಬಂಧ ಮಹತ್ವದ ಬದಲಾವಣೆ ಮಾಡಿದ್ದಾರೆ.2ಸ್ಮಾರ್ಟ್ ಸಿಟಿ ವತಿಯಿಂದ ಗೋಪಿ ವೃತ್ತದಲ್ಲಿ ಸಿಗ್ನಲ್ ಲೈಟುಗಳನ್ನು ಅಳವಡಿಸಲಾಗಿದೆ. ಈ ಮೊದಲು ಭಾನುವಾರ ಮಾತ್ರ ಸಿಗ್ನಲ್ ಲೈಟುಗಳು ಆನ್ ಆಗುತ್ತಿದ್ದವು. ಈಗ ಪ್ರತಿದಿನ ಸಿಗ್ನಲ್ ಲೈಟುಗಳು ಕಾರ್ಯನಿರ್ವಹಿಸುತ್ತಿವೆ.
ಇದನ್ನೂ ಓದಿ » ಭದ್ರಾವತಿಯ ಮಹಿಳೆ ಸೇರಿ ಇಬ್ಬರಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ, ₹40,000 ದಂಡ, ಏನಿದು ಕೇಸ್?
4ಬಾಲರಾಜ ಅರಸ್ ರಸ್ತೆಯ ಡಿವೈಡರ್ನ ಆರಂಭದ ಭಾಗವನ್ನು ಸ್ವಲ್ಪ ತೆಗೆಯಲಾಗಿದೆ. ಇದರಿಂದ ಗುಂಡಿಯಾಗಿದ್ದ ಭಾಗವನ್ನು ಮುಚ್ಚಲಾಗಿದೆ. ಜೆಪಿಎನ್ ರಸ್ತೆ ಕಡೆಯಿಂದ ಬರುವ ವಾಹನಗಳು ಕಸ್ತೂರ ಬಾ ಕಾಲೇಜು ರಸ್ತೆಗೆ ಹೋಗಲು ಈ ಡಿವೈಡರ್ ಅಡ್ಡಿಯಾಗಿತ್ತು. ಮೂರು ದಿನದ ಹಿಂದೆ ಈ ಡಿವೈಡರ್ ತೆರವು ಮಾಡಿ, ಸಿಮೆಂಟ್ ಹಾಕಿ ಗುಂಡಿ ಮುಚ್ಚಿಸಲಾಗಿದೆ.ಸಂಚಾರ ಠಾಣೆ ಇನ್ಸ್ಪೆಕ್ಟರ ಟಿ.ವಿ.ದೇವರಾಜ್ ಅವರ ನೇತೃತ್ವದಲ್ಲಿ ಟ್ರಾಫಿಕ್ ಪೊಲೀಸರು ಗೋಪಿ ಸರ್ಕಲ್ನಲ್ಲಿ ಬದಲಾವಣೆ ತಂದಿದ್ದಾರೆ. ಸದ್ಯ ಗೋಪಿ ವೃತ್ತದಲ್ಲಿ ಈಗ ಸಂಚಾರ ದಟ್ಟಣೆ ಮತ್ತು ಗೊಂದಲಕ್ಕೆ ತೆರೆ ಬಿದ್ದಿದೆ.
LATEST NEWS
- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

- ಸಿದ್ಲೀಪುರದಲ್ಲಿ ವೈಭವದ ಬ್ರಹ್ಮರಥೋತ್ಸವ, ಏನೇನೆಲ್ಲ ಪೂಜೆಗಳು ನೆರವೇರಿದವು?

- ಕೋಟೆ ಮಾರಿಕಾಂಬ ಜಾತ್ರೆ, ದರ್ಶನ ಮುಗಿಸಿ ಹೊರಬಂದ ವೃದ್ಧೆಗೆ ಕಾದಿತ್ತು ಆಘಾತ, ದಾಖಲಾಯ್ತು ಪ್ರಕರಣ

About The Editor
ನಿತಿನ್ ಆರ್.ಕೈದೊಟ್ಲು





