ಶಿವಮೊಗ್ಗ: ನಗರದ ಗೋಪಿ ವೃತ್ತದಲ್ಲಿ ವಾಹನ ದಟ್ಟಣೆ ಮತ್ತು ಟ್ರಾಫಿಕ್ ಜಾಮ್ ನಿಭಾಯಿಸಲು ಸಂಚಾರ ಪೊಲೀಸರು ಹಲವು ಬದಲಾವಣೆ (Traffic System) ಮಾಡಿದ್ದಾರೆ. ಎಲ್ಲ ದಿಕ್ಕುಗಳಿಂದ ಬರುವ ವಾಹನಗಳಿಗೆ ಸಿಗ್ನಲ್ ಲೈಟ್ ಅಳವಡಿಸಲಾಗಿದೆ. ಡಿವೈಡರ್ ತೆರವುಗೊಳಿಸಿ, ಗುಂಡಿ ಮುಚ್ಚಿಸಿ ವಾಹನಗಳ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ.
ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ." class="wp-image-70570"/>
ಗೋಪಿ ಸರ್ಕಲ್‌ನಲ್ಲಿ ಏನೇನಾಗಿದೆ? ಇಲ್ಲಿದೆ ಪಾಯಿಂಟ್ಸ್
1ಈ ಮೊದಲು ಗೋಪಿ ವೃತ್ತದಲ್ಲಿ ವಾಹನಗಳು ಅಡ್ಡಾದಿಡ್ಡಿ ಸಂಚರಿಸುತ್ತಿದ್ದವು. ಹಾಗಾಗಿ ಕೆಲವೊಮ್ಮೆ ಟ್ರಾಫಿಕ್ ಜಾಮ್ ಆಗುತ್ತಿತ್ತು. ಇನ್ನು ಕೆಲವು ಬಾರಿ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿದ್ದವು. ಇದೇ ಕಾರಣಕ್ಕೆ ಸಂಚಾರ ಪೊಲೀಸರು ಗೋಪಿ ವೃತ್ತದಲ್ಲಿ ವಾಹನ ಸಂಚಾರ ಸಂಬಂಧ ಮಹತ್ವದ ಬದಲಾವಣೆ ಮಾಡಿದ್ದಾರೆ.

2ಸ್ಮಾರ್ಟ್ ಸಿಟಿ ವತಿಯಿಂದ ಗೋಪಿ ವೃತ್ತದಲ್ಲಿ ಸಿಗ್ನಲ್ ಲೈಟುಗಳನ್ನು ಅಳವಡಿಸಲಾಗಿದೆ. ಈ ಮೊದಲು ಭಾನುವಾರ ಮಾತ್ರ ಸಿಗ್ನಲ್ ಲೈಟುಗಳು ಆನ್ ಆಗುತ್ತಿದ್ದವು. ಈಗ ಪ್ರತಿದಿನ ಸಿಗ್ನಲ್ ಲೈಟುಗಳು ಕಾರ್ಯನಿರ್ವಹಿಸುತ್ತಿವೆ.

3ಕಸ್ತೂರಬಾ ಕಾಲೇಜು ಕಡೆಯಿಂದ ಬರುವವರಿಗೆ ಸಿಗ್ನಲ್ ಲೈಟ್ ಕಾಣಿಸುತ್ತಿರಲಿಲ್ಲ. ಆದ್ದರಿಂದ ಅಂಬಿಕಾ ಬುಕ್ ಸ್ಟಾಲ್ ಸಮೀಪ ಸಿಗ್ನಲ್ ಲೈಟ್ ಅಳವಡಿಸಲಾಗಿದೆ. ಈ ರಸ್ತೆಯಿಂದ ಬರುವವರು ಈಗ ಸಿಗ್ನಲ್ ಫಾಲೋ ಮಾಡಬೇಕಿದೆ.
ಇದನ್ನೂ ಓದಿ » ಭದ್ರಾವತಿಯ ಮಹಿಳೆ ಸೇರಿ ಇಬ್ಬರಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ, ₹40,000 ದಂಡ, ಏನಿದು ಕೇಸ್?
4ಬಾಲರಾಜ ಅರಸ್ ರಸ್ತೆಯ ಡಿವೈಡರ್‌ನ ಆರಂಭದ ಭಾಗವನ್ನು ಸ್ವಲ್ಪ ತೆಗೆಯಲಾಗಿದೆ. ಇದರಿಂದ ಗುಂಡಿಯಾಗಿದ್ದ ಭಾಗವನ್ನು ಮುಚ್ಚಲಾಗಿದೆ. ಜೆಪಿಎನ್ ರಸ್ತೆ ಕಡೆಯಿಂದ ಬರುವ ವಾಹನಗಳು ಕಸ್ತೂರ ಬಾ ಕಾಲೇಜು ರಸ್ತೆಗೆ ಹೋಗಲು ಈ ಡಿವೈಡರ್ ಅಡ್ಡಿಯಾಗಿತ್ತು. ಮೂರು ದಿನದ ಹಿಂದೆ ಈ ಡಿವೈಡರ್ ತೆರವು ಮಾಡಿ, ಸಿಮೆಂಟ್ ಹಾಕಿ ಗುಂಡಿ ಮುಚ್ಚಿಸಲಾಗಿದೆ.
ಸಂಚಾರ ಠಾಣೆ ಇನ್ಸ್‌ಪೆಕ್ಟರ ಟಿ.ವಿ.ದೇವರಾಜ್ ಅವರ ನೇತೃತ್ವದಲ್ಲಿ ಟ್ರಾಫಿಕ್ ಪೊಲೀಸರು ಗೋಪಿ ಸರ್ಕಲ್‌ನಲ್ಲಿ ಬದಲಾವಣೆ ತಂದಿದ್ದಾರೆ. ಸದ್ಯ ಗೋಪಿ ವೃತ್ತದಲ್ಲಿ ಈಗ ಸಂಚಾರ ದಟ್ಟಣೆ ಮತ್ತು ಗೊಂದಲಕ್ಕೆ ತೆರೆ ಬಿದ್ದಿದೆ.