ಶಿವಮೊಗ್ಗದಲ್ಲಿ ಹೊಸ ವರ್ಷಕ್ಕೆ ಅದ್ಧೂರಿ ಸ್ವಾಗತ, ಎಲ್ಲೆಲ್ಲಿ ಹೇಗಿತ್ತು ಸಂಭ್ರಮ?

SHIVAMOGGA LIVE NEWS | 1 JANUARY 2023 (ಈ ಸುದ್ದಿಯನ್ನು ಇನ್ನು 72 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

SHIMOGA : ಜಿಲ್ಲೆಯಾದ್ಯಂತ ಹೊಸ ವರ್ಷವನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ವಿವಿಧೆಡೆ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನಡುರಾತ್ರಿ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.

ಎಲ್ಲೆಲ್ಲಿ ಹೇಗಿತ್ತು ಸಂಭ್ರಮಾಚರಣೆ?

ಕ್ಲಬ್‌, ಹೊಟೇಲ್‌ಗಳು : ಶಿವಮೊಗ್ಗ ನಗರದ ವಿವಿಧೆಡೆ ಕ್ಲಬ್‌, ಹೊಟೇಲ್‌ ಮತ್ತು ರೆಸಾರ್ಟ್‌ಗಳಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿತ್ತು. ನಗರದ ಕಂಟ್ರಿ ಕ್ಲಬ್‌, ಕಿಮ್ಮನೆ ಗಾಲ್ಫ್‌ ಕ್ಲಬ್‌, ರಾಯಲ್‌ ಆರ್ಕಿಡ್‌ ಹೊಟೇಲ್‌ ಸೇರಿದಂತೆ ವಿವಿಧೆಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕುಟುಂಬ ಸಹಿತ ಮತ್ತು ಸ್ನೇಹಿತರ ಜೊತೆಗೆ ಕ್ಲಬ್‌ ಸದಸ್ಯರು, ನಾಗರಿಕರು ಪಾರ್ಟಿಗಳಲ್ಲಿ ಭಾಗವಹಿಸಿದ್ದರು. ಹಾಡು, ನೃತ್ಯ, ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ತೋಟ, ಮನೆಗಳು : ನಗರದ ಹೊರ ವಲಯದ ತೋಟ, ತೋಟದ ಮನೆಗಳಲ್ಲೂ ಅದ್ಧೂರಿ ಪಾರ್ಟಿಗಳು ನಡೆದವು. ಮನೆಗಳಲ್ಲೂ ಕೂಡ ನಾಗರಿಕರು ನಡುರಾತ್ರಿವರೆಗೆ ಕಾದಿದ್ದು ಕೇಕ್‌ ಕತ್ತರಿಸಿ ಸಂಭ್ರಮಾಚರಣೆ ಮಾಡಲಾಯಿತು.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ

ಎಣ್ಣೆ ಕಿಕ್‌, ಕೇಕ್‌ ಕಟಿಂಗ್‌ : ಹೊಸ ವರ್ಷದ ಪಾರ್ಟಿಗಳ ಹಿನ್ನೆಲೆ ಮದ್ಯ ಮಾರಾಟ ಬಿರುಸಾಗಿತ್ತು. ಜಿಲ್ಲೆಯಾದ್ಯಂತ ಬಾರ್‌, ವೈನ್‌ ಶಾಪ್‌ಗಳಲ್ಲಿ ಮದ್ಯ ಖರೀದಿ ಜೋರಿತ್ತು. ಭಾನುವಾರ ಮಧ್ಯಾಹ್ನದಿಂದಲೆ ಮದ್ಯ, ಚಿಕನ್‌, ಮಟನ್‌ ಖರೀದಿ ನಡೆಯುತ್ತಿತ್ತು. ಇನ್ನು, ಸಂಜೆ ವೇಳೆಗೆ ಬೇಕರಿಗಳ ಮುಂದೆ ಜನರು ಸರತಿಯಲ್ಲಿ ನಿಂತು ಕೇಕ್‌ ಖರೀದಿಸಿದ್ದರು.

ನಡುರಾತ್ರಿವರೆಗೆ ಪಾರ್ಟಿ, ಸಂಭ್ರಮ : ತಡರಾತ್ರಿವರೆಗೆ ಪಾರ್ಟಿಗಳು, ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ರಾತ್ರಿ 12 ಗಂಟೆ ಹೊತ್ತಿಗೆ ಹಾಡು, ಕುಣಿತದ ಜೊತೆಗೆ ಹೊಸ ವರ್ಷವನ್ನು ಸ್ವಾಗತಿಸಲಾಯಿತು. ಪಟಾಕಿಗಳನ್ನು ಸಿಡಿಸಲಾಯಿತು.

ಹೊಸ ವರ್ಷಾಚರಣೆ ಹಿನ್ನೆಲೆ ಜಿಲ್ಲೆಯದ್ಯಂತ ಪೊಲೀಸ್‌ ಬಂದೋಬಸ್ತ್‌ ಬಿಗಿಗೊಳಿಸಲಾಯಿತು. ಇನ್ನು, ಬಂದೋಬಸ್ತ್‌ ನಡುವೆ ಅಮೀರ್‌ ಅಹಮದ್‌ ಸರ್ಕಲ್‌ನಲ್ಲಿ ಪೊಲೀಸರು ಕೇಕ್‌ ಕತ್ತರಿಸಿ ಹೊಸ ವರ್ಷಾಚರಣೆ ಮಾಡಿದರು. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌ ಕೇಕ್‌ ಕತ್ತರಿಸಿದರು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ವೈವಭದ ತೆಪ್ಪೋತ್ಸವ, ಕಣ್ತುಂಬಿಕೊಂಡ ಜನಸಾಗರ, ಇಲ್ಲಿದೆ 12 ಫೋಟೊಗಳು

JOB NEWS

Jnanasudha Institutions Jobs
ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

New-year-celebration-by-police-SP-IPS-Mihtun-Kumar.

Leave a Comment