ಶಿವಮೊಗ್ಗದ ನೂತನ ರಕ್ಷಣಾಧಿಕಾರಿ ಅಧಿಕಾರ ಸ್ವೀಕಾರ, ಮಹತ್ವದ ಮೀಟಿಂಗ್‌

 ಶಿವಮೊಗ್ಗ  LIVE 

ಶಿವಮೊಗ್ಗ: ಜಿಲ್ಲೆಯ ನೂತನ ರಕ್ಷಣಾಧಿಕಾರಿಯಾಗಿ ಬಿ.ನಿಖಿಲ್‌ (Nikhil IPS) ಅಧಿಕಾರ ಸ್ವೀಕರಿಸಿದರು. ಹೆಚ್ಚುವರಿ ರಕ್ಷಣಾಧಿಕಾರಿ ಎ.ಜಿ.ಕಾರಿಯಪ್ಪ ಅವರು ಬಿ.ನಿಖಿಲ್‌ ಅವರಿಗೆ ಅಧಿಕಾರ ವಹಿಸಿಕೊಟ್ಟರು.

ಸಂಜೆ ಶಿವಮೊಗ್ಗಕ್ಕೆ ಆಗಮನ

ಐಪಿಎಸ್‌ ಅಧಿಕಾರಿ ಬಿ.ನಿಖಿಲ್‌ ಅವರು ಇಂದು ಸಂಜೆ ಶಿವಮೊಗ್ಗಕ್ಕೆ ಆಗಮಿಸಿದರು. ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ನೂತನ ರಕ್ಷಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಇದೇ ವೇಳೆ ಹೆಚ್ಚುವರಿ ರಕ್ಷಣಾಧಿಕಾರಿಗಳು, ಡಿವೈಎಸ್‌ಪಿಗಳು, ಇನ್ಸ್‌ಪೆಕ್ಟರ್‌ಗಳ ಪರಿಚಯ ಮಾಡಿಕೊಂಡರು.

ಮೊದಲ ಮಹತ್ವದ ಮೀಟಿಂಗ್‌

ಅಧಿಕಾರ ವಹಿಸಿಕೊಂಡ ಬಳಿಕ ಜಿಲ್ಲಾ ರಕ್ಷಣಾಧಿಕಾರಿ ಬಿ.ನಿಖಿಲ್‌ ಅವರು ಡಿವೈಎಸ್‌ಪಿಗಳು, ಇನ್ಸ್‌ಪೆಕ್ಟರ್‌ಗಳ ಜೊತೆಗೆ ಮಹತ್ವದ ಸಭೆ ನಡೆಸಿದರು. ಶಿವಮೊಗ್ಗದಲ್ಲಿನ ಅಪರಾಧ ಪ್ರಕರಣಗಳು, ಕಾನೂನು ಸುವ್ಯವಸ್ಥೆ, ಅಕ್ರಮ ಚಟುವಟಿಕೆಗಳ ನಿಯಂತ್ರಣ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.

Nikhil-IPS-takes-charge-as-New-SP-Shimoga

ಇದನ್ನೂ ಓದಿ » ಮೆಕಾನಿಕಲ್‌ ಇಂಜಿನಿಯರ್‌ ಇನ್ಮುಂದೆ ಶಿವಮೊಗ್ಗ ಪೊಲೀಸ್‌ ಇಲಾಖೆಯ ‘ಮೈಕ್‌ ಒನ್‌ʼ

ಪ್ರಭಾರ ಎಸ್‌ಪಿಯಾಗಿದ್ದ ಎಎಸ್‌ಪಿ

ಶಿವಮೊಗ್ಗ ರಕ್ಷಣಾಧಿಕಾರಿಯಾಗಿದ್ದ ಜಿ.ಕೆ.ಮಿಥುನ್‌ ಕುಮಾರ್‌ ಅವರು ಇಂದು ಬೆಂಗಳೂರಿನ ಈಶಾನ್ಯ ವಲಯದ ಡಿಸಿಪಿಯಾಗಿ ಅಧಿಕಾರ ಸ್ವೀಕರಿಸಬೇಕಿತ್ತು. ಹಾಗಾಗಿ ಬೆಂಗಳೂರಿಗೆ ತೆರಳಿದ್ದಾರೆ. ಈ ಹಿನ್ನೆಲೆ ಹೆಚ್ಚುವರಿ ರಕ್ಷಣಾಧಿಕಾರಿ ಎ.ಜಿ.ಕಾರಿಯಪ್ಪ ಅವರಿಗೆ ಮಿಥುನ್‌ ಕುಮಾರ್‌ ಅವರು ಅಧಿಕಾರ ಹಸ್ತಾಂತರ ಮಾಡಿದ್ದರು. ಎಎಸ್‌ಪಿ ಕಾರಿಯಪ್ಪ ಅವರು ಪ್ರಭಾರ ಎಸ್‌ಪಿಯಾಗಿ ಇಂದು ಜವಾಬ್ದಾರಿ ನಿಭಾಯಿಸಿದ್ದರು. ಹಾಗಾಗಿ ಎಎಸ್‌ಪಿ ಕಾರಿಯಪ್ಪ ಅವರು ನಿಖಿಲ್‌ ಅವರಿಗೆ ಅಧಿಕಾರ ಹಾಸ್ತಾಂತರ ಮಾಡಿದರು.

Nikhil-IPS-takes-charge-as-New-SP-Shimoga

Nikhil-IPS-takes-charge-as-New-SP-Shimoga

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment