ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 9 ನವೆಂಬರ್ 2019
ಅಡಕೆಯಿಂದ ಮತ್ತೊಂದು ಉತ್ಪನ್ನವನ್ನು ಸಿದ್ಧಪಡಿಸಿದ್ದೇವೆ. ಸದ್ಯದಲ್ಲೇ ಇದನ್ನು ಲಾಂಚ್ ಮಾಡಲಿದ್ದೇವೆ. ಈ ಪ್ರಾಡೆಕ್ಟ್’ನಿಂದ ಅಡಕೆ ಮಾರುಕಟ್ಟೆ ಮತ್ತಷ್ಟು ಹಿಗ್ಗಲಿದೆ ಎಂದು ಅರೇಕಾ ಟೀ ಸಂಶೋಧಕ ನಿವೇದನ್ ನೆಂಪೆ ತಿಳಿಸಿದ್ದಾರೆ.
ಮ್ಯಾಮ್’ಕೋಸ್ ಮತ್ತು ಅಡಕೆ ಮಾರಾಟ ಸಹಕಾರ ಮಹಾಮಂಡಳದ ವತಿಯಿಂದ ಆಯೋಜಿಸಿದ್ದ, ಪ್ರಾದೇಶಿಕ ಆರ್ಥಿಕ ಸಹಭಾಗಿತ್ವ ಮತ್ತು ರಫ್ತು ಪ್ರವರ್ಧನೆ ಕುರಿತ ವಿಶೇಷ ಕಾರ್ಯಾಗಾರದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿವೇದನ್ ನೆಂಪೆ, ಅಡಕೆಯಿಂದ ಅರೇಕಾ ಟೀ ಮಾಡಿದ್ದೇವೆ. ಈಗ ಅದಕ್ಕಿಂತಲೂ ದೊಡ್ಡ ಮಟ್ಟದ ಪ್ರಾಡೆಕ್ಟ್ ಒಂದನ್ನು ಲಾಂಚ್ ಮಾಡುತ್ತಿದ್ದೇವೆ ಎಂದರು.
ಅಡಕೆ ಕ್ಯಾನ್ಸರ್’ಕಾರಕ ಎಂದು ಹೇಳುತ್ತಿದ್ದರು. ಆದರೆ ಯಾವುದೆ ಸಂಶೋಧನೆಯಲ್ಲು ಇದು ದೃಢಪಟ್ಟಿಲ್ಲ. ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದ ಲ್ಯಾಬ್’ನಲ್ಲು ಸಂಶೋಧನೆ ನಡೆಸಲಾಯಿತು. ಅಲ್ಲಿಯು ಕ್ಯಾನ್ಸರ್’ಕಾರಕ ಅಂಶವಿಲ್ಲ ಎಂದು ಸಾಬೀತಾಗಿದೆ. ಆದರೆ ಸಕ್ಕರೆ ಕಾಯಿಲೆಗೆ ಅಡಕೆ ಉತ್ತಮ ಔಷಧ ಎಂದು ತಿಳಿದು ಬಂದಿದೆ. ಈ ಕುರಿತು ಸುಪ್ರೀಂಕೋರ್ಟ್’ಗೆ ರಿಪೋರ್ಟ್ ಕೊಡಲಿದ್ದೇವೆ ಎಂದು ನಿವೇದನ್ ನೆಂಪೆ ತಿಳಿಸಿದರು.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ – 7411700200
ಸುದ್ದಿಗಾಗಿ ಕರೆ ಮಾಡಿ – 9964634494
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422