ಕರ್ನಾಟಕ ಸಂಘದಲ್ಲಿ ಕಾರು ತಡೆದ ಪೊಲೀಸ್‌, ಡ್ರೈವರ್‌ ತಂದೆಗೆ 25 ಸಾವಿರ ರೂ. ಫೈನ್‌, ಏನಿದು ಕೇಸ್?‌

SHIVAMOGGA LIVE NEWS | 12 SEPTEMBER 2023 (ಈ ಸುದ್ದಿಯನ್ನು ಇನ್ನು 54 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

SHIMOGA : ಚಾಲನಾ ಪರವಾನಗಿ (DRIVING LICENCE) ಇಲ್ಲದೇ ಓಮಿನಿ ಕಾರು ಚಲಾಯಿಸುತ್ತಿದ್ದ ಅಪ್ರಾಪ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಈ ಹಿನ್ನೆಲೆ ಆತನ ತಂದೆಗೆ ಇಲ್ಲಿನ ಮೂರನೇ ಎಸಿಜೆ ಹಾಗೂ ಜೆಎಂಎಫ್ ನ್ಯಾಯಾಲಯ 25 ಸಾವಿರ ರೂ. ದಂಡ ವಿಧಿಸಿದೆ.

ಚಿಕ್ಕಮಗಳೂರು ಜಿಲ್ಲೆ ಎನ್‌.ಆರ್‌.ಪುರದ ನಿವಾಸಿ ಇಲಿಯಾಸ್ (41) ಎಂಬುವವರಿಗೆ ದಂಡ ವಿಧಿಸಲಾಗಿದೆ. LIC-HOME-PRASHANTHಇಲಿಯಾಸ್ ಅವರ 17 ವರ್ಷದ ಮಗ ಸೆ.9ರಂದು ಶಿವಮೊಗ್ಗ ನಗರದಲ್ಲಿ ಓಮಿನಿ ಕಾರು ಚಲಾಯಿಸುತ್ತಿದ್ದ. ಕರ್ನಾಟಕ ಸಂಘದ ಬಳಿ ಬಿ.ಎಚ್.ರಸ್ತೆಯಲ್ಲಿ ಶಿವಮೊಗ್ಗ ಪೂರ್ವ ಸಂಚಾರ ಪೊಲೀಸ್ ಠಾಣೆಯ ಪಿಎಸ್‌ಐ ಎಚ್.ಎಸ್.ಶಿವಣ್ಣನವರ್ ವಾಹನ ತಪಾಸಣೆ ನಡೆಸಿದ್ದರು. ಈ ವೇಳೆ ಚಾಲಕನ ಬಳಿ ಡ್ರೈವಿಂಗ್‌ ಲೈಸೆನ್ಸ್‌ ಇಲ್ಲದಿರುವುದು ಮತ್ತು ಆತ ಅಪ್ರಾಪ್ತ ಎಂದು ಗೊತ್ತಾಗಿದೆ. ಈ ಹಿನ್ನೆಲೆ ಕಾರಿನ ಮಾಲೀನಾಗಿರುವ ಬಾಲಕನ ತಂದೆ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ – ಮುಖ್ಯ ರಸ್ತೆಯಲ್ಲಿ ಮಚ್ಚು ಹಿಡಿದು ಓಡಾಡಿ ಭಯ ಹುಟ್ಟಿಸಿದ ಯುವಕ, ಪೊಲೀಸ್‌ ದಾಳಿ

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ಪೂರ್ವ ಸಂಚಾರ ಪೊಲೀಸರು ಲಘು ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ದಂಡ ವಿಧಿಸಿ ಆದೇಶಿಸಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಕಾರಿನ ಚಕ್ರದ ಮೇಲೆ ಮೂತ್ರ ವಿಸರ್ಜಿಸಿದ ಬೀದಿ ನಾಯಿ, ಕೈ ಕೈ ಮಿಲಾಯಿಸಿದ ಎರಡು ಕುಟುಂಬ

JOB NEWS

Jnanasudha Institutions Jobs
ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

TRAFFIC-POLICE-JEEP-GENERAL-IMAGE

Leave a Comment