ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 01 MARCH 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ನಗರದಲ್ಲಿ ನಂಬರ್ ಪ್ಲೇಟ್ ರಹಿತ ವಾಹನಗಳ ಹಾವಳಿ ಹೆಚ್ಚಾಗಿದೆ. ಸವಾರರು ನಂಬರ್ ಪ್ಲೇಟ್ ಇಲ್ಲದೆ, ಹೆಲ್ಮೆಟ್ ಧರಿಸದೆ ಸಂಚಾರ ನಿಯಮ ಉಲ್ಲಂಘಿಸಿ ಪೊಲೀಸರ ಕಣ್ತಪ್ಪಿಸಿ ಸಂಚರಿಸುತ್ತಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಶಿವಮೊಗ್ಗ ನಗರದಲ್ಲಿ ಸಂಚಾರ ನಿಯಮ ಕಡ್ಡಾಯ ಪಾಲನೆಗೆ ಪೊಲೀಸರು ಒತ್ತು ನೀಡಿದ್ದಾರೆ. ವಿವಿಧ ಸಂಚಾರ ನಿಯಮ ಉಲ್ಲಂಘಿಸಿದವರಿಗೆ ಸ್ಮಾರ್ಟ್ ಕ್ಯಾಮರಾಗಳನ್ನು ಬಳಸಿ ದಂಡ ವಿಧಿಸಲಾಗುತ್ತಿದೆ. ದಂಡ ಪವಾತಿಸದವರನ್ನು ಪತ್ತೆ ಹಚ್ಚಿ ಉದ್ದದ ರಶೀದಿ ನೀಡಿ, ದಂಡ ಕಟ್ಟಿಸಿಕೊಳ್ಳಲಾಗಿದೆ. ಹಾಗಿದ್ದೂ ಸಿಟಿಯಲ್ಲಿ ನಂಬರ್ ಪ್ಲೇಟ್ ರಹಿತ ವಾಹನಗಳು ರಾಜಾರೋಷವಾಗಿ ಮುಖ್ಯ ರಸ್ತೆಗಳಲ್ಲೆ ಸಂಚರಿಸುತ್ತಿವೆ.
ಇಲ್ಲಿದೆ ಕೆಲ ಉದಾಹರಣೆ
ನಗರದ ಕುವೆಂಪು ರಸ್ತೆಯಲ್ಲಿ ನಂಬರ್ ಪ್ಲೇಟ್ ಇಲ್ಲದೆ ಸವಾರನೊಬ್ಬ ಪಲ್ಸರ್ ಬೈಕ್ ಚಲಿಸುತ್ತಿದ್ದ. ಇನ್ನು, ನಂಬರ್ ಪ್ಲೇಟ್ ಇಲ್ಲದೆ ಯುವಕನೊಬ್ಬ ಮೊಪೆಡ್ ವಾಹನ ಚಲಸುತ್ತಿದ್ದ. ಹೆಲ್ಮೆಟ್ ಧರಿಸದೆ, ಮೊಬೈಲ್ನಲ್ಲಿ ಮಾತನಾಡುತ್ತ ವಾಹನ ಚಲಿಸುತ್ತಿದ್ದ.
ಕರ್ನಾಟಕ ಸರ್ಕಾರ ಮತ್ತು ಅರಣ್ಯ ಇಲಾಖೆ ಎಂಬ ಸ್ಟಿಕ್ಕರ್ ಅಂಟಿಸಿದ್ದ ಬೊಲೇರೋ ವಾಹನವೊಂದು ನಂಬರ್ ಪ್ಲೇಟ್ ಇಲ್ಲದೆ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲೇ ಸಂಚರಿಸಿತು.
ಅಪರಾಧ ಅಂತಾ ಗೊತ್ತಿದ್ದರು
ವಾಹನಗಳಿಗೆ ನಂಬರ್ ಪ್ಲೇಟ್ ಕಡ್ಡಾಯ. ಇದನ್ನು ಉಲ್ಲಂಘಿಸುವುದು ಅಪರಾಧ. ಹಾಗಿದ್ದೂ ಹಲವರು ನಂಬರ್ ಪ್ಲೇಟ್ ಇಲ್ಲದೆ ವಾಹನ ಚಲಾಯಿಸುತ್ತಿದ್ದಾರೆ. ಕೆಲವರು ನಂಬರ್ ಪ್ಲೇಟ್ ಇದ್ದರೂ ಆರ್ಟಿಒ ನಿಯಮಗಳನ್ನು ಗಾಳಿಗೆ ತೂರಿ ವಾಹನಗಳನ್ನು ಮಾರ್ಪಾಡು ಮಾಡಿ, ನಂಬರ್ ಪ್ಲೇಟ್ ಕಾಣದಂತೆ ಮರೆಮಾಚುತ್ತಿದ್ದಾರೆ. ಸಂಚಾರ ನಿಯಮ ಉಲ್ಲಂಘಿಸಿದರೂ ಸಿಸಿಟಿವಿಗಳಲ್ಲಿ ನಂಬರ್ ದಾಖಲಾಗದಂತೆ ತಡೆಯಲು ಈ ಕ್ರಮ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಸರ್ಕಾರ ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯಗೊಳಿಸಿದೆ. ಇನ್ನು, ವಾಹನಗಳನ್ನು ಖರೀದಿಸುತ್ತಿದ್ದಂತೆ ಈಗ ನೋಂದಣಿ ಸಂಖ್ಯೆ ನೀಡಲಾಗುತ್ತಿದೆ. ಆದರೆ ಕಲವರು ಉದ್ದೇಶಪೂರ್ವಕವಾಗಿ ನಂಬರ್ ಪ್ಲೇಟ್ ಮರೆ ಮಾಚುತ್ತಿದ್ದಾರೆ. ಇದು ಹಲವು ಅನುಮಾನಕ್ಕು ಕಾರಣವಾಗಿವೆ. ಇಂತಹ ಸವಾರರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ವಹಿಸಬೇಕಿದೆ.
ಇದನ್ನೂ ಓದಿ – ನಿಲ್ದಾಣದ ಗೇಟ್ನಲ್ಲೆ ಮಹಿಳೆ ಕಾಲ ಮೇಲೆ ಹತ್ತಿದ KSRTC ಬಸ್, CCTVಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ