SHIVAMOGGA LIVE NEWS | 26 FEBRURARY 2023
SHIMOGA : ವಿಮಾನ ನಿಲ್ದಾಣದ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆ ಜಿಲ್ಲಾಡಳಿತ ನಗರದ ಎಲ್ಲಾ ಲಾಡ್ಜ್ ಗಳನ್ನು ಬ್ಲಾಕ್ ಮಾಡಿದೆ. ಪ್ರವಾಸಿಗರು, ಸ್ಥಳೀಯರಾರಿಗೂ ರೂಮ್ ನೀಡದಂತೆ ಲಾಡ್ಜ್ (Lodges) ಮಾಲೀಕರಿಗೆ ಸೂಚನೆ ನೀಡಿದೆ.
ಫೆ.27ರಂದು ಶಿವಮೊಗ್ಗ ವಿಮಾನ ನಿಲ್ದಾಣದ ಉದ್ಘಾಟನಾ ಕಾರ್ಯಕ್ರಮವಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಶಿವಮೊಗ್ಗ ನಗರದ ಎಲ್ಲಾ ಲಾಡ್ಜ್, ಪ್ರವಾಸಿ ಮಂದಿರಗಳ ರೂಂಗಳನ್ನು ಬ್ಲಾಕ್ ಮಾಡಲಾಗಿದೆ.
ಲಾಡ್ಜ್ ಮಾಲೀಕರಿಗೆ ನೊಟೀಸ್
ಲಾಡ್ಜ್ (Lodges) ಮಾಲೀಕರಿಗೆ ಜಿಲ್ಲಾಡಳಿತ ನೊಟೀಸ್ ನೀಡಿದೆ. ತಮ್ಮ ಅನುಮತಿ ಇಲ್ಲದೆ ಯಾರಿಗೂ ರೂಂ ನೀಡಬಾರದು ಎಂದು ಸೂಚನೆ ನೀಡಿದೆ. ಫೆ.25, 26 ಮತ್ತು 27ರಂದು ಸಾರ್ವಜನಿಕರಿಗೆ ರೂಂ ನೀಡಬಾರದು. ರೂಂ ನೀಡಬೇಕಾದ ಅನಿವಾರ್ಯತೆ ಇದ್ದರೆ ಜಿಲ್ಲಾಡಳಿತದ ಅನುಮತಿ ಕಡ್ಡಾಯ ಎಂದು ತಿಳಿಸಿದೆ.
ಜಿಲ್ಲಾಡಳಿತದ ವತಿಯಿಂದ ಕಮಿಟಿ ರಚಿಸಲಾಗಿದೆ. ಅನಿವಾರ್ಯ ಸಂದರ್ಭ ಈ ಕಮಿಟಿಗೆ ಮಾಹಿತಿ ನೀಡಿ, ಲಾಡ್ಜ್ ಮಾಲೀಕರು ಗ್ರಾಹಕರಿಗೆ ರೂಂ ಒದಗಿಸಬಹುದಾಗಿದೆ.
ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಗೆ 50 ವರ್ಷದ ಹಿಂದೆಯೇ ವಿಮಾನ ಬರುತ್ತಿತ್ತು, ಎಲ್ಲಿ ಲ್ಯಾಂಡ್ ಆಗುತ್ತಿದ್ದವು ಗೊತ್ತಾ?
ರೂಂ ಕೊಡಬೇಡಿ ಅಂದಿದ್ದೇಕೆ?
ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮದ ಹಿನ್ನೆಲೆ ಅಕ್ಕಪಕ್ಕದ ತಾಲೂಕು, ನೆರೆ ಜಿಲ್ಲೆಗಳಿಂದ ಪೊಲೀಸರು, ಭದ್ರತಾ ಸಿಬ್ಬಂದಿ, ವಿವಿಧ ಇಲಾಖೆ ಅಧಿಕಾರಿಗಳು ಆಗಮಿಸಿದ್ದಾರೆ. ಅವರು ತಂಗಲು ಅನುಕೂಲವಾಗಲಿ ಎಂದು ಜಿಲ್ಲಾಡಳಿತ ರೂಂಗಳನ್ನು ಕಾಯ್ದಿರಿಸಿದೆ ಎಂದು ತಿಳಿದು ಬಂದಿದೆ.
ಶಿವಮೊಗ್ಗ ನಗರದಲ್ಲಿ ಸುಮಾರು 30 ಲಾಡ್ಜ್ ಗಳಿವೆ. 1800 ರೂಂಗಳು ಇದರಲ್ಲಿವೆ.
ಇದನ್ನೂ ಓದಿ – ವಿಮಾನ ನಿಲ್ದಾಣದ ರನ್ ವೇ ಪಕ್ಕದಲ್ಲಿ ಶಕ್ತಿಶಾಲಿ ಆಂಜನೇಯ, ಕೊನೆತನಕ ಉಳಿದಿದ್ದ ಗುಡಿ ದಿಢೀರ್ ತೆರವಾಗಿದ್ದೇಕೆ?