ಶಿವಮೊಗ್ಗದಲ್ಲಿ ನೋನಿ ಟೀ ಉದ್ಘಾಟಿಸಿದ ಸಿಎಂ, ತಂತ್ರಜ್ಞಾನ ವರ್ಗಾವಣೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

147011183 1327318294296254 3834645892722110036 o.jpg? nc cat=105&ccb=3& nc sid=8bfeb9& nc ohc=ZNUWIDTXgPcAX9FSFBC& nc ht=scontent.fixe1 2

ಶಿವಮೊಗ್ಗ ಲೈವ್.ಕಾಂ | SHIMOGA NEWS | 17 FEBRUARY 2021

ರೈತರ ಬದುಕು ಹಸನಾಗಲು, ಕೃಷಿ ವಿಶ್ವವಿದ್ಯಾಲಯಗಳ ಸಂಶೋಧನೆಗಳ ಲಾಭ ರೈತರಿಗೆ ದೊರೆಯಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಲಾಗಿದ್ದ ಸಹ್ಯಾದ್ರಿ ನೋನಿ ಚಹಾದ ತಂತ್ರಜ್ಞಾನ ವರ್ಗಾವಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸ್ಥಳೀಯವಾಗಿ ದೊರಕುವ ಉತ್ಪನ್ನಗಳ ಮೌಲ್ಯವರ್ಧನೆಯಿಂದ ಸ್ಥಳೀಯ ಯುವ ಉದ್ಯಮಿಗಳ ಏಳಿಗೆ ಸಾಧ್ಯ. ಇದರಿಂದ ಸ್ಥಳೀಯ ಉದ್ಯೋಗ ಸೃಷ್ಟಿಗೂ ಪೂರಕ ವಾತಾವರಣ ಸೃಷ್ಟಿಯಾಗುತ್ತದೆ. ಕೃಷಿ ಆಧಾರಿತ ಉದ್ಯಮಗಳ ಸ್ಥಾಪನೆಗೆ ನಮ್ಮ ಸರ್ಕಾರ ಹೆಚ್ಚಿನ ಮಹತ್ವ ನೀಡುತ್ತಿದೆ ಎಂದು ಹೇಳಿದರು.

ಜಿಲ್ಲೆಯ ಹತ್ತು ನವೋದ್ಯಮಿಗಳಿಗೆ ನೆರವು

ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಸ್ಥಳೀಯವಾಗಿ ಆದಾಗ ಮಾತ್ರ ರೈತರಿಗೆ ಹೆಚ್ಚಿನ ಲಾಭ ದೊರೆಯುವುದು. ಇಂತಹ ಸಂಸ್ಕರಣೆಯ ಉದ್ದಿಮೆಗಳು ಹೆಚ್ಚಾದರೆ ಮಾತ್ರ ಕೃಷಿ ಲಾಭದಾಯಕವಾಗಲಿದೆ. ಸರ್ಕಾರ ಈ ಹಿನ್ನೆಲೆಯಲ್ಲಿ ಎಲ್ಲಾ ನೆರವು ನೀಡಲಿದೆ. ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಸ್ಥಾಪಿಸಿರುವ ನವೋದ್ಯಮ ಕೇಂದ್ರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಜಿಲ್ಲೆಯ 10 ನವೋದ್ಯಮಿಗಳಿಗೆ ಕೇಂದ್ರ ಸರ್ಕಾರದ ಅನುದಾನ ದೊರೆಯಲು ನೆರವಾಗಿದೆ ಎಂದು ಹೇಳಿದರು.

ನೋನಿ ಚಹಾ ವಿಶಿಷ್ಟ ಉತ್ಪನ್ನ

ಅಡಕೆ ಸಿಪ್ಪೆಯಿಂದ ಗೊಬ್ಬರ ತಯಾರಿಕೆ, ಅಡಿಕೆ ಹಾಳೆಯನ್ನು ಚರ್ಮದಂತೆ ಪರಿವರ್ತಿಸಿ ಉತ್ಪನ್ನ ತಯಾರಿಕೆ, ಅಂಗಾಂಶ ಕೃಷಿಯಲ್ಲಿ ಬಾಳೆ ಉತ್ಪಾದನೆ, ಮಲೆನಾಡಿನ ವಿಶೇಷ ಹಣ್ಣುಗಳಿಂದ ಆರೋಗ್ಯ ಪೂರ್ಣ ವೈನ್ ತಯಾರಿಕೆಯಂತಹ ಯೋಜನೆಗಳಿಂದ ವಿಶ್ವವಿದ್ಯಾಲಯ ನವೋದ್ಯಮಿಗಳಿಗೆ ನೆರವಾಗುತ್ತಿರುವುದು ಶ್ಲಾಘನೀಯ. ಇದೀಗ ನೋನಿ ಅಥವಾ ಇಂಡಿಯನ್ ಮಲ್ಬರಿ ಹಣ್ಣಿನಿಂದ ತಯಾರಿಸಿರುವ ನೋನಿ ಚಹಾ ವಿಶಿಷ್ಟ ಉತ್ಪನ್ನವಾಗಿದ್ದು, ಇದರಿಂದ ಈ ಭಾಗದಲ್ಲಿ ನೋನಿ ಬೆಳೆಯುವ ರೈತರಿಗೆ ಅನುಕೂಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಕೋವಿಡ್ ಹಿನ್ನೆಯಲ್ಲಿ ಆರ್ಥಿಕ ಸಂಕಷ್ಟದ ನಡುವೆಯೂ, ರೈತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ , ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿ ಡಾ.ಎಂ.ಕೆ.ನಾಯಕ್,  ವ್ಯಾಲ್ಯೂ ಪ್ರಾಡೆಕ್ಟ್ಸ್‍ ಪ್ರೈವೇಟ್ ಲಿಮಿಟೆಡ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಡಾ.ಶ್ರೀನಿವಾಸ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

150575331 1330177017343715 4898305611510871545 n.jpg? nc cat=101&ccb=3& nc sid=8bfeb9& nc ohc=AVHlWwUXaPsAX NIQTI& nc ht=scontent.fblr4 1

151527289 1330176890677061 541823975676244022 n.jpg? nc cat=110&ccb=3& nc sid=8bfeb9& nc ohc=MV Oo27yDJkAX8DppDz& nc ht=scontent.fblr4 1

ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494

ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200

ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment