SHIVAMOGGA LIVE NEWS | 1 FEBRUARY 2023
SHIMOGA | ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು ಅಧಿಕಾರಿಗಳ ವರ್ಗಾವಣೆ (officer transfer) ಮಾಡಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಮತ್ತು ಮೂರು ತಾಲೂಕುಗಳ ತಹಶೀಲ್ದಾರ್ ಗಳ ವರ್ಗಾವಣೆಯಾಗಿದೆ.
ಅಪರ ಜಿಲ್ಲಾಧಿಕಾರಿ ಡಾ. ನಾಗೇಂದ್ರ ಎಫ್.ಹೊನ್ನಳ್ಳಿ ಅವರನ್ನು ವರ್ಗಾಯಿಸಲಾಗಿದೆ. ನೂತನ ಅಪರ ಜಿಲ್ಲಾಧಿಕಾರಿಯಾಗಿ ಎಸ್.ಎಸ್.ಬಿರಾದರ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಮೂವರು ತಹಶೀಲ್ದಾರ್ ವರ್ಗಾವಣೆ
ಜಿಲ್ಲೆಯ ಮೂವರು ತಹಶೀಲ್ದಾರ್ ಗಳ ವರ್ಗಾವಣೆ (officer transfer) ಮಾಡಲಾಗಿದೆ. ಶಿವಮೊಗ್ಗ, ಭದ್ರಾವತಿ ಮತ್ತು ಹೊಸನಗರ ತಾಲೂಕು ತಹಶೀಲ್ದಾರ್ ಗಳ ವರ್ಗ ಮಾಡಲಾಗಿದೆ. ಶಿವಮೊಗ್ಗ ತಾಲೂಕು ತಹಶೀಲ್ದಾರ್ ಎನ್.ಜೆ.ನಾಗರಾಜಪ್ಪ ಮಂಡ್ಯ ಚುನಾವಣೆ ತಹಶೀಲ್ದಾರ್ ಆಗಿ ವರ್ಗವಾಗಿದ್ದಾರೆ.
ಇದನ್ನೂ ಓದಿ – ‘ವರ್ಗಾವಣೆಯಾಗಿರುವ 14 ತಹಶೀಲ್ದಾರ್ ಗಳ ಪಟ್ಟಿ ಕೊಡಿ’, ಮಿನಿಸ್ಟರ್ ಎದುರಲ್ಲೇ ಎಂಎಲ್ಎ ಗರಂ
ಭದ್ರಾವತಿಯ ಪ್ರದೀಪ್ ನಿಕ್ಕಿಂ ಉಡುಪಿ ಚುನಾವಣೆ ತಹಶೀಲ್ದಾರ್ ಆಗಿ ವರ್ಗವಾಗಿದ್ದಾರೆ. ಹೊಸನಗರ ತಹಶೀಲ್ದಾರ್ ವಿ.ಎಸ್.ರಾಜೀವ್ ಕೊಡಗು ಚುನಾವಣೆ ತಹಶೀಲ್ದಾರ್ ಆಗಿ ವರ್ಗಾಯಿಸಲಾಗಿದೆ. ಈ ಮೂವರು ತಹಶೀಲ್ದಾರ್ ಗಳ ಸ್ಥಾನಗಳಿಗೆ ಯಾರನ್ನೂ ನಿಯೋಜನೆ ಮಾಡಿಲ್ಲ.