ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE | 13 JUNE 2023
SHIMOGA : ರಾಷ್ಟ್ರೀಯ ಹೆದ್ದಾರಿ (Highway) ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮತ್ತೊಂದು ಅಪಘಾತ ಸಂಭವಿಸಿದೆ. ಎರಡು ಲಾರಿಗಳು ಮುಖಾಮುಖಿ ಡಿಕ್ಕಿಯಾಗಿವೆ. ಇದರ ಸಿಸಿಟಿವಿ ದೃಶ್ಯ ಶಿವಮೊಗ್ಗ ಲೈವ್.ಕಾಂಗೆ ಲಭ್ಯವಾಗಿದೆ.
ಶಿವಮೊಗ್ಗ – ಸಾಗರ ಹೆದ್ದಾರಿಯಲ್ಲಿ (Highway) ಭಾನುವಾರ ಟಿಪ್ಪರ್ ಲಾರಿ ಮತ್ತು ಗೂಡ್ಸ್ ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದವು. ಆಯನೂರು ಕಡೆ ತೆರಳುತ್ತಿದ್ದ ಟಿಪ್ಪರ್ ಲಾರಿ ಮತ್ತು ಶಿವಮೊಗ್ಗ ಕಡೆಗೆ ಸಾಗುತ್ತಿದ್ದ ಗೂಡ್ಸ್ ಲಾರಿ ಅಪಘಾತಕ್ಕೀಡಾಗಿದ್ದವು. ಲಾರಿ ಚಾಲಕರಿಗೆ ಗಾಯವಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೇಗಾಯ್ತು ಘಟನೆ?
ಪಿಇಎಸ್ ಕಾಲೇಜು ಮುಂಭಾಗ ಲಾರಿಗಳು ಮುಖಾಮುಖಿ ಡಿಕ್ಕಿಯಾಗಿದ್ದವು. ತುಮಕೂರು – ಶಿವಮೊಗ್ಗ ಚತುಷ್ಪಥ ರಸ್ತೆ ಕಾಮಗಾರಿಯ ಹಿನ್ನೆಲೆ ಶ್ರೀರಾಮ ಪುರ ಬಳಿ ರಸ್ತೆಯ ಒಂದೆ ಬದಿಯಲ್ಲಿ ದ್ವಿಮುಖ ಸಂಚಾರ ಮಾಡಬೇಕಿದೆ. ಶಿವಮೊಗ್ಗ ಕಡೆಗೆ ತೆರಳುತ್ತಿದ್ದ ಲಾರಿ ಚಾಲಕನಿಗೆ ಮುಂದೆ ರಸ್ತೆಯ ಒಂದೇ ಬದಿಯಲ್ಲಿ ದ್ವಿಮುಖ ಸಂಚಾರವಿದೆ ಎಂಬುದು ಅರಿವಾಗದೆ ಎದುರಿನಿಂದ ಬಂದ ಟಿಪ್ಪರ್ಗೆ ಡಿಕ್ಕಿ ಹೊಡೆದಿದ್ದಾನೆ. ಘಟನೆಯ ಸಿಸಿಟಿವಿ ವಿಡಿಯೋ ಶಿವಮೊಗ್ಗ ಲೈವ್.ಕಾಂಗೆ ಲಭ್ಯವಾಗಿದೆ.
ಇನ್ನೆಷ್ಟು ಅಪಘಾತ ಸಂಭವಿಸಬೇಕು?
ಆಯನೂರು ಕಡೆಯಿಂದ ಬರುವ ವಾಹನಗಳ ಚಾಲಕರಿಗೆ ಮುಂದೆ ರಸ್ತೆ ಕಾಮಗಾರಿ ನಡೆಯುತ್ತಿದೆ, ರಸ್ತೆಯ ಒಂದೇ ಬದಿಯಲ್ಲಿ ದ್ವಿಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂಬ ಮಾಹಿತಿ ಇಲ್ಲದಿರುವುದೆ ಅಪಘಾತಕ್ಕೆ ಪ್ರಮುಖ ಕಾರಣ. ತಾತ್ಕಾಲಿಕ ಬ್ಯಾರಿಕೇಡ್, ಸೂಚನಾ ಫಲಕಗಳನ್ನು ಅಳವಡಿಸಿ ಚಾಲಕರಿಗೆ ಸೂಚನೆ ನೀಡಿದರೆ ವೇಗ ತಗ್ಗಿಸಿ ಅಪಘಾತ ತಪ್ಪಿಸಬಹುದಾಗಿದೆ. ಆದರೆ ಇಲ್ಲಿ ಸೂಚನಾ ಫಲಕಗಳೆ ಇಲ್ಲ.
ಶ್ರೀರಾಮಪುರದಿಂದ ಪಿಇಎಸ್ ಕಾಲೇಜಿನವರೆಗೆ ರಸ್ತೆಯಲ್ಲಿ ಪದೇ ಪದೆ ಅಪಘಾತ ಸಂಭವಿಸುತ್ತಿವೆ. ಶಾಲೆ, ಕಾಲೇಜು ವಿದ್ಯಾರ್ಥಿಗಳು ನಿತ್ಯ ಓಡಾಡುವ ರಸ್ತೆ. ಜಿಲ್ಲೆ, ಹೊರ ಜಿಲ್ಲೆಯ ಸಾವಿರಾರು ವಾಹನ ಸಂಚರಿಸುತ್ತವೆ. ಹಾಗಿದ್ದೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ಶಿವಮೊಗ್ಗ ಲೈವ್.ಕಾಂ ವರದಿ ಮಾಡಿತ್ತು. ಫೋಟೊ ಸಹಿತ ಸುದ್ದಿಗಾಗಿ ಕ್ಲಿಕ್ ಮಾಡಿ. ಶಿವಮೊಗ್ಗದ ಈ ಹೆದ್ದಾರಿಗೆ ಇನ್ನೆಷ್ಟು ಬಲಿ ಬೇಕು? ಇನ್ನಾದರೂ ಎಚ್ಚೆತ್ತುಕೊಳ್ತಾರಾ ಅಧಿಕಾರಿಗಳು?
ದೊಡ್ಡ ಅಪಘಾತ ಸಂಭವಿಸುವ ಮೊದಲೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422