ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 11 APRIL 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಓಂ ಶಕ್ತಿ ಭಕ್ತರು ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂದು ಓಂ ಶಕ್ತಿ ದೇಗುಲ ಟ್ರಸ್ಟಿ ತಿಳಿಸಿದ್ದಾರೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
‘ವಹಿವಾಟಿನ ತನಿಖೆ ಆಗಬೇಕಿದೆ’
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಓಂ ಶಕ್ತಿ ದೇವಸ್ಥಾನದ ಟ್ರಸ್ಟ್ನ ಟ್ರಸ್ಟಿ ಸುಬ್ರಹ್ಮಣಿ, ಕೆ.ಈ. ಕಾಂತೇಶ್ ಅಧ್ಯಕ್ಷರಾಗಿರುವ ಟ್ರಸ್ಟ್ನಲ್ಲಿ ಅನೇಕ ವಿವಾದಗಳಿವೆ. ಕಳೆದ 13 ವರ್ಷಗಳಿಂದ ಲೆಕ್ಕಪತ್ರಗಳ ಆಡಿಟ್ ಮಾಡಿಸಿಲ್ಲ. ನಾವೇ ಖರ್ಚು ಕೊಟ್ಟು ಓಂ ಶಕ್ತಿ ಯಾತ್ರೆಗೆ ಮಹಿಳೆಯರನ್ನು ಕರೆದುಕೊಂಡು ಹೋಗುತ್ತೇವೆ ಎಂದು ಬಿಂಬಿಸಲಾಗಿದೆ. ವಾಸ್ತವವಾಗಿ ಪ್ರತಿ ಮಹಿಳೆಯರಿಂದ 2 ಸಾವಿರ ರೂ. ಹಣ ಪಡೆದುಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ – ಬಸ್ ಹತ್ತಿ ಕುಟುಂಬದವರಿಗೆ ಕರೆ ಮಾಡಲು ಮುಂದಾದ ಮಹಿಳೆಗೆ ಕಾದಿತ್ತು ದೊಡ್ಡ ಆಘಾತ, ಆಗಿದ್ದೇನು?
ಬಿಜೆಪಿ ಮುಖಂಡರು ಸಹಾಯ ಮಾಡಿದ್ದಾರೆ
ಇನ್ನು, ಹಲವು ವರ್ಷಗಳಿಂದ ತಮಿಳು ಸಮಾಜದ ಮಹಿಳೆಯರನ್ನು ಓಂ ಶಕ್ತಿ ಯಾತ್ರೆಗೆ ಕರೆದುಕೊಂಡು ಹೋಗುತ್ತಿರುವುದು ನಿಜ. ಈಶ್ವರಪ್ಪ ಮತ್ತು ಅವರ ಪುತ್ರ ಕಾಂತೇಶ್ ಅವರು ಯಾತ್ರೆಯನ್ನು ಬಿಜೆಪಿ ಹೆಸರಿನಲ್ಲಿಯೆ ಮಾಡುತ್ತಿದ್ದರು. ರಾಜಕೀಯ ಮುಖಂಡರು ವಿಶೇಷವಾಗಿ ಬಿಜೆಪಿ ಮುಖಂಡರು ದೇವಸ್ಥಾನಕ್ಕೆ ಧನಸಹಾಯ ಮಾಡಿದ್ದಾರೆ. ಆದ್ದರಿಂದ ಬಿಜೆಪಿಗೆ ತಮ್ಮ ಬೆಂಬಲ ಎಂದು ಸುಬ್ರಹ್ಮಣಿ ತಿಳಿಸಿದರು.
ಕುಮಾರ್, ಮಣಿಕಂಠ, ಮುರುಗನ್, ದಿನೇಶ್, ಸೆಲ್ವಂ, ವೆಂಕಟೇಶ್ ಸುದ್ದಿಗೋಷ್ಠಿಯಲ್ಲಿದ್ದರು.
ಇದನ್ನೂ ಓದಿ – ತುಂಗಾ – ಭದ್ರ ಸಂಗಮದಲ್ಲಿ ಹೊಳೆ ಜಾತ್ರೆ, ಸಾವಿರ ಸಾವಿರ ಭಕ್ತರು ಭಾಗಿ, ಹೇಗಿತ್ತು ವೈಭವ?