ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 24 OCTOBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಈ ಬಾರಿ ದಸರಾದಲ್ಲಿ ಆನೆ ಮೇಲೆ ಅಂಬಾರಿ ಹೊರಿಸುವ ನಿರ್ಧಾರವನ್ನು ಕೊನೆ ಕ್ಷಣದಲ್ಲಿ ಬದಲಾವಣೆ ಮಾಡಲಾಗಿದೆ. ಕುಮ್ಕಿ ಆನೆ ನೇತ್ರಾವತಿ ಮರಿ ಹಾಕಿದ್ದರಿಂದ ದಿಢೀರ್ ಸಭೆ ನಡೆಸಿದ ಪಾಲಿಕೆ ಆಡಳಿತ ನಿರ್ಧಾರ ಪ್ರಕಟಿಸಿದೆ. ಪಾಲಿಕೆ ವಾಹನದಲ್ಲಿ ನಾಡದೇವಿ ಚಾಮುಂಡೇಶ್ವರಿ ಮೂರ್ತಿಯ ಮೆರವಣಿಗೆ ನಡೆಯಲಿದೆ.
ಶಿವಮೊಗ್ಗ ದಸರಾದಲ್ಲಿ ಆನೆ ಅಂಬಾರಿ ಹೊರದಿರುವ ಬೆಳವಣಿಗೆ ಈ ಹಿಂದೆಯು ನಡೆದಿದೆ. ಒಮ್ಮೆಯಂತು ಆನೆ ಅಂಬಾರಿ ಹೊರಲಿದೆಯೋ ಇಲ್ಲವೊ ಎಂಬುದರ ಕುರಿತು ಕೊನೆ ಕ್ಷಣದವರೆಗೆ ಕುತೂಹಲ ಮತ್ತು ಆತಂಕ ಮೂಡಿತ್ತು.
ಯಾವಾಗ? ಏನೇನಾಗಿತ್ತು?
2019ರಲ್ಲಿ ವಿಜಯದಶಮಿ ದಿನ ಅಂಬಾರಿ ಹೊರಬೇಕಿದ್ದ ಸಾಗರ ಆನೆ ದಿಢೀರ್ ಅಸ್ವಸ್ಥಗೊಂಡಿತ್ತು. ಭೇದಿ ಶುರುವಾಗಿತ್ತು. ವನ್ಯಜೀವಿ ವಿಭಾಗದ ವೈದ್ಯ ಡಾ. ವಿನಯ್ ಆನೆಗೆ ಚಿಕಿತ್ಸೆ ನೀಡಿದರು. ಸಾಗರ್ ಆನೆ ಅಸ್ವಸ್ಥಗೊಂಡಿದ್ದರಿಂದ ಅಂಬಾರಿ ಮೆರವಣಿಗೆ ನಡೆಯಲಿದೆಯೋ ಇಲ್ಲವೊ ಎಂಬ ಅನುಮಾನ ಮೂಡಿತ್ತು. ಕೊನೆ ಕ್ಷಣದಲ್ಲಿ ಪಾಲಿಕೆ ಲಾರಿಯಲ್ಲಿ ಮೆರವಣಿಗೆಗೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಚೇತರಿಸಿಕೊಂಡ ಸಾಗರ್ ಆನೆ ಮೆರವಣಿಗೆಯ ಅಂಬಾರಿ ಹೊತು ಸಾಗಿತ್ತು.
ತಾಲೀಮು ಇಲ್ಲದೆ ಮೆರವಣಿಗೆಗೆ
2021ರ ದಸರಾ ಸಂದರ್ಭ ಸಕ್ರೆಬೈಲು ಬಿಡಾರದ ಆನೆಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು ಅಂಬಾರಿ ಹೊತ್ತಿರಲಿಲ್ಲ. ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಕಡೆ ಕ್ಷಣದಲ್ಲಿ ಅನುಮತಿ ನೀಡಲಾಗಿತ್ತು. ಹಾಗಾಗಿ ಆನೆಗಳಿಗೆ ತಾಲೀಮು ನಡೆಸಿರಲಿಲ್ಲ. ಕೊನೆ ಘಳಿಗೆಯಲ್ಲಿ ಅಂಬಾರಿ ಹೊರಿಸುವುದು ಸರಿಯಲ್ಲ ಎಂದು ಪಾಲಿಕೆಯ ಲಾರಿಯಲ್ಲಿ ಮೆರವಣಿಗೆ ನಡೆಸಲಾಗಿತ್ತು. ಸಾಗರ್ ನೇತೃತ್ವದ ಗಜಪಡೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಇದನ್ನೂ ಓದಿ – ಶಿವಮೊಗ್ಗ ದಸರಾ, ಕೊನೆ ಕ್ಷಣದಲ್ಲಿ ಅಂಬಾರಿ ಮೆರವಣಿಗೆಯ ಪ್ಲಾನ್ ಬದಲು, ಏನದು?