ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 11 APRIL 2023
SHIMOGA : ಗನ್ ತೋರಿಸಿ ಬೈಕ್ ಡೀಲರ್ ಒಬ್ಬನಿಗೆ ಬೆದರಿಕೆ ಒಡ್ಡಿದ್ದ ಆರೋಪಿಯನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಆತನಿಂದ ಏರ್ ಗನ್ (Air Gun), ಪಿಸ್ತೂಲು, ಗುಂಡುಗಳು, ಡ್ರಗ್ ಮಿಶ್ರಿತ ಮೋನೋಕಾಫ್ ಪ್ಲಸ್ ಬಾಟಲಿಗಳನ್ನು ವಶಕ್ಕೆ ಪಡೆಯಲಾಗಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಇಲಿಯಾಜ್ ನಗರದ ಮೊಹಮ್ಮದ್ ಅಜರ್ ಅಲಿಯಾಸ್ ಅಜರ್ (25) ಬಂಧಿತ. ಅಣ್ಣಾನಗರದ ಮೊಹಮ್ಮದ್ ರಿಯಾಬ್ ಎಂಬುವವರು ದ್ವಿಚಕ್ರ ವಾಹನಗಳ ಡೀಲರ್. ರಿಯಾಬ್ ಬಳಿ ಅಜರ್ ದ್ವಿಚಕ್ರ ವಾಹನ ಖರೀದಿಸಿದ್ದು, ಹಣ ಕೊಟ್ಟಿರಲಿಲ್ಲ. ಹಣ ಕೇಳಿದ್ದಕ್ಕೆ ರಿಯಾಬ್‍ಗೆ ಅಜರ್ ಗನ್ ತೋರಿಸಿ ಬೆದರಿಸಿ, ಹಲ್ಲೆ ಮಾಡಿದ್ದ.
ಇದನ್ನೂ ಓದಿ – ಆಸ್ಪತ್ರೆಯ ಪಕ್ಕದ ಬೆಡ್ನಲ್ಲಿದ್ದವಳು ಸಾಮಾನ್ಯಳಲ್ಲ, ಬಣ್ಣದ ಮಾತಿಗೆ ಶಿವಮೊಗ್ಗದ ಮಹಿಳೆ ಕಳೆದುಕೊಂಡಳು ಲಕ್ಷ ಲಕ್ಷ
ವಿಶೇಷ ತಂಡ ರಚನೆ
ಗನ್ ತೋರಿಸಿ ಬೆದರಿಕೆ ಒಡ್ಡಿದ ವಿಚಾರ ತಿಳಿಯುತ್ತಿದ್ದಂತೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ಅಜರ್ ಬಂಧನಕ್ಕೆ ವಿಶೇಷ ತಂಡ ರಚಿಸಿದ್ದರು. ಡಿವೈಎಸ್‍ಪಿ ಬಾಲರಾಜ್ ಅವರ ಮೇಲ್ವಿಚಾರಣೆಯಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಅಂಜನ್ ಕುಮಾರ್, ಪಿಎಸ್‍ಐ ವಸಂತ ಅವರ ನೇತೃತ್ವದಲ್ಲಿ ಎಎಸ್‍ಐ ಮಂಜುನಾಥ್, ಎಎಸ್‍ಐ ಚೂಡಾಮಣಿ, ಸಿಬ್ಬಂದಿ ರಮೇಶ್, ರೌಡಿ ನಿಗ್ರಹ ದಳದ ಸಿಬ್ಬಂದಿ ಹಾಲಪ್ಪ, ಮನೋಹರ್, ಗುರುನಾಯ್ಕ, ನಾಗಪ್ಪ, ಹರೀಶ್ ನಾಯ್ಕ, ವಸಂತ, ರಮೇಶ್, ಆಕಾಶ್, ಶರತ್ ಮತ್ತು ತಮ್ಮಣ್ಣ ಅವರ ತಂಡ ರಚಿಸಲಾಗಿತ್ತು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ಹಾಡಹಗಲೆ ಗನ್ ತೋರಿಸಿ ಬೈಕ್ ಡೀಲರ್‌ಗೆ ಬೆದರಿಕೆ
ಏರ್ ಗನ್, ಕಂಟ್ರಿ ಪಿಸ್ತೂಲು
ತನಿಖಾ ತಂಡ ಅಜರ್ ಅಲಿಯಾಸ್ ಮೊಹಮ್ಮದ್ ಅಜರ್‍ನನ್ನು ಬಂಧಿಸಿದೆ. ವಿಚಾರಣೆ ಮಾಡಿದಾಗ ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿರುವುದನ್ನು ಬಾಯಿ ಬಿಟ್ಟಿದ್ದಾನೆ. ಆರೋಪಿಯಿಂದ ಒಂದು ಕಂಟ್ರಿ ಮೇಡ್ ಪಿಸ್ತೂಲು, ಏರ್ ಗನ್, ಏರ್ ಗನ್ (Air Gun) ಗುಂಡುಗಳು, 100 ಎಂಎಲ್‍ನ ಡ್ರಗ್ ಮಿಶ್ರಿತವಿರುವ ಮೋನೋಕಾಫ್ ಪ್ಲಸ್‍ನ ಒಟ್ಟು 156 ಬಾಟಲಿಗಳನ್ನು ವಶಕ್ಕೆ ಪಡೆಯಲಾಗಿದೆ.