ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 20 JANUARY 2024
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಆನ್‌ಲೈನ್ ಟಾಸ್ಕ್ ಪೂರೈಸಿದರೆ ಹಣ ಗಳಿಸಬಹುದು ಎಂದು ಮೆಸೇಜ್ ಮತ್ತು ಫೋನ್ ಕರೆ ಮಾಡಿ ನಂಬಿಸಿ ಶಿವಮೊಗ್ಗದ ಗೃಹಿಣಿಯೊಬ್ಬರಿಗೆ 2.12 ಲಕ್ಷ ರೂ. ವಂಚಿಸಲಾಗಿದೆ. ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಆನ್‌ಲೈನ್ ಟಾಸ್ಕ್ ಕಂಪ್ಲೀಟ್ ಮಾಡಿದರೆ ಹಣ ನೀಡುವುದಾಗಿ ನಂಬಸಿ ವಿವಿಧ ಟಾಸ್ಕ್‌ಗಳನ್ನು ನೀಡಲಾಗಿದೆ. ಹೆಚ್ಚಿನ ಹಣದ ಆಮಿಷವೊಡ್ಡಿ ಗೃಹಿಣಿಯಿಂದ (ಹೆಸರು ಗೌಪ್ಯ) ವಿವಿಧ ಬ್ಯಾಂಕ್ ಖಾತೆ ಮತ್ತು ಯುಪಿಐ ಮೂಲಕ 2.12 ಲಕ್ಷ ರೂ. ಹಣ ಪಡೆಯಲಾಗಿದೆ. ಆದರೆ ಟಾಸ್ಕ್ ಪೂರೈಸಿದ ಹಣವನ್ನಾಗಲಿ, ಗೃಹಿಣಿಯಿಂದ ಪಡೆದ ಹಣವನ್ನಾಗಲಿ ಹಿಂತಿರುಗಿಸದ ಹಿನ್ನೆಲೆ ಅನುಮಾನಗೊಂಡಿದ್ದಾರೆ. ಘಟನೆ ಸಂಬಂಧ ದೂರು ನೀಡಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಟಾಸ್ಕ್ ಹೆಸರಲ್ಲಿ ವಂಚನೆ ಇದೇ ಮೊದಲಲ್ಲ
ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲಿ ಟಾಸ್ಕ್ ಪೂರೈಸಿ ಹಣ ಸಂಪಾದಿಸಬಹುದು ಎಂದು ಆಮಿಷವೊಡ್ಡಿ ವಂಚನೆ ಮಾಡಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಹಲವರು ಈ ವಂಚಕರ ಜಾಲಕ್ಕೆ ಸಿಲುಕಿ ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆ. ಆರಂಭದಲ್ಲಿ ಸಣ್ಣಪುಟ್ಟ ಟಾಸ್ಕ್ ನೀಡಿ, ಹಣವನ್ನು ವರ್ಗಾಯಿಸುತ್ತಾರೆ. ವಿಶ್ವಾಸ ಗಿಟ್ಟಿಸಿಕೊಂಡ ಬಳಿಕ ಹಣ ಹೂಡಿಕೆ ಮಾಡಿ ಹೆಚ್ಚುವರಿ ಸಂಪಾದಿಸಬಹುದು ಎಂದು ನಂಬಿಸುತ್ತಾರೆ. ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿಸಿಕೊಂಡು, ಟಾಸ್ಕ್ ನೀಡಿ, ಬಳಿಕ ಹಣವನ್ನು ಮರಳಿಸದೆ ವಂಚಿಸಲಾಗುತ್ತಿದೆ.
ಇದನ್ನೂ ಓದಿ – ಸಕ್ರೆಬೈಲು ಬಳಿ ಮರಕ್ಕೆ ಬೈಕ್ ಡಿಕ್ಕಿ, ಸ್ಥಳದಲ್ಲೇ ಸಾವನ್ನಪ್ಪಿದ ಶಿವಮೊಗ್ಗದ ಕಾಲೇಜು ವಿದ್ಯಾರ್ಥಿ