ಶಿವಮೊಗ್ಗ: ರಕ್ತನಾಳದಲ್ಲಿ ರಂಧ್ರವಾಗಿ ರಕ್ತಸ್ರಾವವಾಗಿ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯಲ್ಲಿ ಸೂಜಿ ಗಾತ್ರದ ರಂಧ್ರದ ಮೂಲಕ ಶಸ್ತ್ರಚಿಕಿತ್ಸೆ (Operation) ನಡೆಸಲಾಗಿದೆ. ಒಂದೇ ದಿನದಲ್ಲಿ ಮಹಿಳೆ ಗುಣವಾಗಿ ಮನೆಗೆ ಮರಳಿದ್ದಾರೆ. ಇದೇ ಮೊದಲ ಬಾರಿಗೆ ಈ ಭಾಗದಲ್ಲಿ ಇಂತಹ ಚಿಕಿತ್ಸೆ ನೀಡಲಾಗಿದೆ.
ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಂಜಪ್ಪ ಲೈಫ್ ಕೇರ್ ಆಸ್ಪತ್ರೆ ವೈದ್ಯರು, ಗಾಡಿಕೊಪ್ಪದಲ್ಲಿರುವ ನಂಜಪ್ಪ ಲೈಫ್ ಕೇರ್ ಆಸ್ಪತ್ರೆಯಲ್ಲಿ ಆಧುನಿಕ ಇಂಟರ್‌ವೆನ್ಷನಲ್ ತಂತ್ರಜ್ಞಾನಿಂದ ಸ್ಪ್ಲೆನಿಕ್ ಆರ್ಟರಿ ಎಂಬೋಲೈಸೇಶನ್ ಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ತಿಳಿಸಿದರು.
ಆಹಾರ ಸೇವಿಸಲಾಗದೆ ಸಂಕಷ್ಟ
ಹಾವೇರಿಯ 57 ವರ್ಷದ ಶಾರದಾ ಎಂಬುವವರಿಗೆ ಆಹಾರ ನುಂಗಲು ಸಾಧ್ಯವಾಗದೆ ಸಂಕಷ್ಟಕ್ಕೀಡಾಗಿದ್ದರು. ಪರೀಕ್ಷಿಸಿದಾಗ ಅನ್ನನಾಳದ ಕ್ಯಾನ್ಸರ್ ಇರುವುದು ಗೊತ್ತಾಗಿತ್ತು. ಕ್ಯಾನ್ಸರ್ ಚಿಕಿತ್ಸಕರಾದ ಡಾ. ನಮ್ರತಾ ಉಡುಪ 4 ಸೈಕಲ್ ಕಿಮೋಥೆರಪಿ ಮಾಡಿ, ಕ್ಯಾನ್ಸರ್ ಗಡ್ಡೆ ಕುಗ್ಗಿಸಿದರು. ಬಳಿಕ 6 ತಾಸು ಶಸ್ತ್ರಚಿಕಿತ್ಸೆ ನೆರವೇರಿಸಿದ ಕ್ಯಾನ್ಸರ್ ಶಸ್ತ್ರಚಿಕಿತ್ಸಕರಾದ ಡಾ. ಗುರುಚನ್ನ, ಡಾ. ಅರವಿಂದನ್, ಅರವಳಿಕೆ ತಜ್ಞ ಡಾ. ಪ್ರವೀಣ್ ಕುಮಾರ್ ಅನ್ನನಾಳಕ್ಕೆ ಅಂಟಿಕೊಂಡಿದ್ದ ಅನ್ನನಾಳಕ್ಕೆ ಅಂಟಿಕೊಂಡಿದ್ದ ಶ್ವಾಸಕೋಶ ಭಾಗವನ್ನು ತೆಗೆದು ಎದೆಯ ಭಾಗಕ್ಕೆ ಜೋಡಿಸಿದ್ದರು.
ಶಸ್ತ್ರಚಿಕಿತ್ಸೆ ಇಲ್ಲದೆ ತೊಡೆಯ ರಕ್ತನಾಳದ ಮೂಲಕ ಸೂಜಿ ಗಾತ್ರದ ಸಾಧನ ಬಳಸಿ ರಕ್ತಸ್ರಾವವಾಗುತ್ತಿರುವ ನಾಳ ಮುಚ್ಚುವುದು ಆಧುನಿಕ ಮತ್ತು ಅಪಾಯ ಕಡಿಮೆ ಇರುವ ಚಿಕಿತ್ಸೆಯಾಗಿದೆ. ಆಸ್ಪತ್ರೆಯ ಡಾ.ನಿಶಿತಾ ಈ ಚಿಕಿತ್ಸಾ ವಿಧಾನದಲ್ಲಿ ಪರಿಣತರಿದ್ದು, ಕಾಯ್ಲಿಂಗ್, ಎಂಬೋಲೈಸ್ ವಿಧಾನದ ಮೂಲಕ ರಕ್ತಸ್ರಾವ ಸ್ಥಗಿತಗೊಳಿಸಿದರು. ಆಗ ರೋಗಿಯ ಹೊಟ್ಟೆನೋವು ಕಡಿಮೆಯಾಯಿತು. ಮರುದಿನ ರೋಗಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದರು. ಅವರಿಗೆ ವಿಕಿರಣ ಚಿಕಿತ್ಸೆ ಮುಂದುವರೆಸಲಾಗುವುದು ಎಂದರು.ಸೂಜಿ ಗಾತ್ರದ ರಂಧ್ರದಲ್ಲಿ ಶಸ್ತ್ರಚಿಕಿತ್ಸೆ
ಆಸ್ಪತ್ರೆಗೆ ಬಂದಾಗ ಮಹಿಳೆಯ ಹಿಮೊಗ್ಲೋಬಿನ್ ಪ್ರಮಾಣ 5ರಷ್ಟಿತ್ತು. ಸಿ.ಟಿ ಸ್ಕ್ಯಾನ್ ಮಾಡಿದಾಗ ಸ್ಪ್ಲೀನ್‌ಗೆ ಸಂಚರಿಸುವ ರಕ್ತನಾಳದಲ್ಲಿ ಸಣ್ಣ ರಂಧ್ರವಾಗಿ, ತೀವ್ರ ರಕ್ತಸ್ರಾವವಾಗಿರುವುದು ಕಂಡು ಬಂದಿತ್ತು. ಈಗಾಗಲೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಿಳೆಗೆ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಿದರೆ ಅದನ್ನು ತಡೆದುಕೊಳ್ಳುವ ಶಕ್ತಿ ಇರಲಿಲ್ಲ. ತಕ್ಷಣ ಅವರಿಗೆ ರಕ್ತ ನೀಡಲಾಯಿತು ಎಂದು ಡಾ. ಅರವಿಂದನ್ ತಿಳಿಸಿದರು.
ರೇಡಿಯಾಲಜಿಸ್ಟ್ ಡಾ.ಶರತ್ ಚಂದ್ರ, ಅರಿವಳಿಕೆ ತಜ್ಞ ಡಾ. ಪ್ರವೀಣ್ ಕುಮಾರ್, ಕ್ಯಾನ್ಸರ್ ಚಿಕಿತ್ಸಕಿ ಡಾ.ನಮ್ರತಾ ಉಡುಪ ಮತ್ತಿತರರಿದ್ದರು.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಬಿ.ಫಾರ್ಮಾ, ಡಿ.ಫಾರ್ಮಾ, ಪದವಿ ಮಾಡಿದವರಿಗೆ ಉದ್ಯೋಗವಕಾಶ

ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200