ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 18 NOVEMBER 2023
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
SHIMOGA : ದೇಗುಲ ಆಡಳಿತ ಮಂಡಳಿ, ಪಾಲಿಕೆ ಸದಸ್ಯೆ, ಸ್ಥಳೀಯರು ಮತ್ತು ಭಕ್ತರ ವಿರೋಧದ ನಡುವೆ ಹೊಸಮನೆಯ ಅಂತರಘಟ್ಟಮ್ಮ ದೇವಸ್ಥಾನಕ್ಕೆ ಸೇರಿದ ಕೆಂಡಾರ್ಚನೆ ಜಾಗದಲ್ಲಿ ಸಮುದಾಯ ಭವನ (Community hall) ನಿರ್ಮಾಣಕ್ಕೆ ಯೋಜಿಸಲಾಗಿದೆ. ಇದಕ್ಕೆ ಪಾಲಿಕೆ ವತಿಯಿಂದ ಅವಕಾಶ ನೀಡಬಾರದು ಎಂದು ಹೊಸಮನೆ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎನ್.ಮಂಜುನಾಥ್ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯ 32ನೇ ವಾರ್ಡ್ ಹೊಸಮನೆ ಬಡಾವಣೆ ಹಳೆಯ ನಗರವಾಗಿದ್ದು, ಅತ್ಯಂತ ಕಿರಿದಾದ ರಸ್ತೆ ಮತ್ತು ಹೆಚ್ಚು ಜನರಿರುವ ವಸತಿ ಪ್ರದೇಶವಾಗಿದೆ. ಈ ಬಡಾವಣೆಯ 3ನೇ ತಿರುವಿನಲ್ಲಿ ದೊಡ್ಡಮ್ಮ – ಜಲದುರ್ಗಮ್ಮ ದೇವಸ್ಥಾನ ಸಮಿತಿ ವತಿಯಿಂದ ಸಮುದಾಯ ಭವನ ನಿರ್ಮಿಸಲು ಅನುಮತಿಗಾಗಿ ನಗರ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದಾರೆ. ಈ ಜಾಗ ಅಂತರಘಟ್ಟಮ್ಮ – ದೊಡ್ಡಮ್ಮ ದೇವಸ್ಥಾನಕ್ಕೆ ಸೇರಿದ ಕೆಂಡದಾರ್ಚನೆ ಜಾಗವಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ- ಇನ್ಸ್ಪೆಕ್ಟರ್ಗಳ ವರ್ಗಾವಣೆ, ಜಯನಗರಕ್ಕೆ ಸಿದ್ದೇಗೌಡ, ರಿಲೀವ್ ಆಗ್ತಾರಾ ಅಂಜನ್ ಕುಮಾರ್?
ಈ ಜಾಗದಲ್ಲಿ ಸಮುದಾಯ ಭವನ (Community Hall) ನಿರ್ಮಿಸಿದರೆ ಕೆಂಡಾರ್ಚನೆಗೆ ಜಾಗ ಇರುವುದಿಲ್ಲ. ಇನ್ನು, ಪಾಲಿಕೆ ಸದಸ್ಯೆ ರೇಖಾ ರಂಗನಾಥ್ ಅವರು ಸ್ಥಾಯಿ ಸಮಿತಿ ಸಭೆಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ವಿರೋಧ ಮಾಡಿದ್ದಾರೆ. ಇನ್ನು, ದಾಖಲೆಗಳಲ್ಲಿ ನಕ್ಷೆಯನ್ನು ಕೂಡ ತಿದ್ದಲಾಗಿದೆ. ಹಾಗಾಗಿ ಸಮುದಾಯ ಭವನ ನಿರ್ಮಾಣ ಯೋಜನೆಯನ್ನು ಪುನರ್ ಪರಿಶೀಲಿಸಬೇಕು. ಇಲ್ಲವಾದಲ್ಲಿ ಹೋರಾಟ ನಡೆಸಲಾಗುತ್ತದೆ. ಅಲ್ಲದೆ ನ್ಯಾಯಾಲಯದ ಮೊರೆ ಹೋಗಲಾಗುತ್ತದೆ ಎಂದು ಮಂಜುನಾಥ್ ಎಚ್ಚರಿಸಿದರು.
ಸಮಿತಿಯ ಮುಖಂಡರಾದ ಎನ್.ರಮೇಶ್ ಬಾಬು, ಶಿವಮೂರ್ತಿ, ಕೆ.ಶ್ರೀನಿವಾಸ್, ಕೆ.ಫಕೀರಪ್ಪ ಇತರರಿದ್ದರು.