SHIVAMOGGA LIVE NEWS | 17 FEBRURARY 2023
SHIMOGA : ವಿಮಾನ ನಿಲ್ದಾಣ ಉದ್ಘಾಟನೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ ನಾಮಕರಣದ (airport name) ಕುರಿತ ಚರ್ಚೆ, ಆಗ್ರಹಗಳು ಹೆಚ್ಚಾಗುತ್ತಿವೆ. ವಿಮಾನ ನಿಲ್ದಾಣದ ಹೆಸರಿನ ಸಂಬಂಧ ಶಿವಮೊಗ್ಗದಲ್ಲಿ ಒಂದಿಲ್ಲೊಂದು ಪ್ರತಿಭಟನೆ, ಸಭೆಗಳು ನಡೆಯುತ್ತಿವೆ. ಯಾರೆಲ್ಲರ ಹೆಸರು ಇಡಬೇಕು ಎಂಬ ಒತ್ತಾಯ ಕೇಳಿ ಬರುತ್ತಿವೆ ಎಂಬುದರ ಸಂಪೂರ್ಣ ಡಿಟೇಲ್ಸ್ ಇಲ್ಲಿದೆ.
ಮಾಜಿ ಸಿಎಂ ಯಡಿಯೂರಪ್ಪ
ವಿಮಾನ ನಿಲ್ದಾಣ ನಿರ್ಮಾಣದ ರೂವಾರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ. ಆದ್ದರಿಂದ ಅವರ ಹೆಸರು ಇಡಬೇಕು ಎಂಬ ಆಗ್ರಹವಿದೆ. ಇತ್ತೀಚೆಗೆ ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಯಡಿಯೂರಪ್ಪ ಅವರ ಹೆಸರನ್ನೆ (airport name) ಕೇಂದ್ರಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ತಿಳಿಸಿದ್ದರು. ಇದು ಯಡಿಯೂರಪ್ಪ ಅವರ ಅಭಿಮಾನಿಗಳಲ್ಲಿ ಸಂತಸ ಮೂಡಿಸಿತ್ತು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ರಾಷ್ಟ್ರಕವಿ ಕುವೆಂಪು
ಕನ್ನಡಕ್ಕೆ ಮೊದಲ ಜ್ಞಾನಪೀಠ ತಂದು ಕೊಟ್ಟ ಕೀರ್ತಿ ರಾಷ್ಟ್ರಕವಿ ಕುವೆಂಪು ಅವರದ್ದು. ಶಿವಮೊಗ್ಗ ಜಿಲ್ಲೆಯವರೆ ಆದ್ದರಿಂದ ಅವರ ಹೆಸರಿಡುವ ಒತ್ತಾಯವಿದೆ. ಮಾಜಿ ಸಿಎಂ ಯಡಿಯೂರಪ್ಪ ಅವರು ವಿಮಾನ ನಿಲ್ದಾಣಕ್ಕೆ ತಮ್ಮ ಹೆಸರು ಇಡುವುದು ಬೇಡ. ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನೆ (airport name) ಕೇಂದ್ರಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ಈಚೆಗೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದರು. ಆದರೆ ಸಮೀಪದಲ್ಲೆ ಕುವೆಂಪು ವಿವಿ ಇದೆ. ಹಲವು ರಸ್ತೆಗಳು, ಪ್ರಮುಖ ಸ್ಥಳಗಳಿಗೆ ಕುವೆಂಪು ಅವರ ಹೆಸರನ್ನು ಇಡಲಾಗಿದೆ. ಇದೆ ಕಾರಣಕ್ಕೆ ವಿಮಾನ ನಿಲ್ದಾಣಕ್ಕೆ ಅವರ ಹೆಸರಿಡುವ ಕುರಿತು ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.
ಸಾಲು ಸಾಲು ಸಭೆ, ಪ್ರತಿಭಟನೆ
ಅಲ್ಲಮ ಪ್ರಭು : ಜಗತ್ತಿನ ಮೊದಲ ಸಂಸತ್ತಿನ ಅಧ್ಯಕ್ಷರಾಗಿದ್ದ ಅಲ್ಲಮ ಪ್ರಭು ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಬೇಕು. ಅಲ್ಲಮ ಪ್ರಭು ಅವರ ಜನ್ಮಸ್ಥಳ ಶಿವಮೊಗ್ಗ. ಅವರ ಹೆಸರನ್ನು ಇಟ್ಟರೆ ಪ್ರಜಾಪ್ರಭುತ್ವದ ಆಶಯಗಳಿಗೆ ಜೀವ ತುಂಬಿದಂತೆ ಆಗಲಿದೆ ಎಂದು ರಾಷ್ಟ್ರೀಯ ಬಸವದಳ ಆಗ್ರಹಿಸಿದೆ.
ಕೆಳದಿ ಅರಸರು, ಶರಣರು : ವಿಮಾನ ನಿಲ್ದಾಣಕ್ಕೆ ಕೆಳದಿ ಅರಸರು ಅಥವಾ ಜಿಲ್ಲೆಯ ಶರಣರ ಹೆಸರನ್ನು ಇಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್ ಆಗ್ರಹಿಸಿದ್ದಾರೆ.
ಯಡಿಯೂರಪ್ಪ : ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕಾರಣೀಭೂತರು. ಅವರ ಹೆಸರು (airport name) ಇಡುವುದೆ ಸೂಕ್ತ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಾರ್ಯದರ್ಶಿ ಕೆ.ದಿವಾಕರ್ ಆಗ್ರಹಿಸಿದ್ದಾರೆ. ಪಕ್ಷದಲ್ಲಿ ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡುವ ಸಲುವಾಗಿ ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡದಿರಲು ಪ್ರಯತ್ನಿಸಲಾಗುತ್ತಿದೆ ಎಂದು ಆಪಾದಿಸಿದರು.
ಕೆಳದಿ ಚನ್ನಮ್ಮ : 300 ವರ್ಷ ಕೆಳದಿ ಅರಸರು ಆಳ್ವಿಕೆ ಮಾಡಿದ್ದರು. ರಾಣಿ ಚನ್ನಮ್ಮ ಕೆಳದಿ ಸಂಸ್ಥಾನದ ಪ್ರಮುಖ ರಾಣಿ. ಆದ್ದರಿಂದ ರಾಣಿ ಚನ್ನಮ್ಮ ಅವರ ಹೆಸರನ್ನೆ ಇಡಬೇಕು ಎಂದು ರಾಜ್ಯ ಮಲ್ಲವ ಸಮಾಜ ಹಾಗೂ ಮಲೆನಾಡು ವನ್ಯಜೀವಿ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಆಗ್ರಹಿಸಿದೆ.
ಕುವೆಂಪು : ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೆ ರಾಷ್ಟ್ರಕವಿ ಕುವೆಂಪು ಅವರ ಹೆಸರು ಇಡುವಂತೆ ತಿಳಿಸಿದ್ದಾರೆ. ಅದರಂತೆ ಯಾವುದೆ ವಿವಾದ ಮಾಡದೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನೆ ಇಡಬೇಕು ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ 2 ವಾರ ಅತ್ಯಂತ ಮಹತ್ವದ್ದು, ಕಾರಣವೇನು? ಮೊದಲು ಲ್ಯಾಂಡ್ ಆಗುವ ವಿಮಾನ ಯಾವುದು?
ಶಿವಮೊಗ್ಗ : ಹೆಸರಿನ ವಿವಾದವೆ ಬೇಡ. ವಿಮಾನ ನಿಲ್ದಾಣಕ್ಕೆ ಶಿವಮೊಗ್ಗದ ಹೆಸರೆ ಇರಲಿ ಎಂದು ಹಲವರು ಆಗ್ರಹಿಸಿದ್ದಾರೆ. ಈ ನಡುವೆ ಬಸವಕೇಂದ್ರದಲ್ಲಿ ಸಭೆ ನಡೆಸಿದ ವೀರಶೈವ ಲಿಂಗಾಯತ ಸಮಾಜ, ವಿಮಾನ ನಿಲ್ದಾಣಕ್ಕೆ ಯಡಿಯೂರಪ್ಪ ಅವರ ಹೆಸರನ್ನು ಇಡಬೇಕು. ಇಲ್ಲವಾದಲ್ಲಿ ಯಾವ ಹೆಸರು ಇಡದೆ ಶಿವಮೊಗ್ಗ ವಿಮಾನ ನಿಲ್ದಾಣ ಎಂದಷ್ಟೆ ನಾಮಕರಣ ಮಾಡುವುದು ಸೂಕ್ತ ಎಂದು ನಿರ್ಣಯ ಕೈಗೊಂಡಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗ ರೈಲ್ವೆ ನಿಲ್ದಾಣದ ಸೈನ್ ಬೋರ್ಡ್ ಗೆ ನಾಲ್ಕನೆ ಭಾಷೆ ಸೇರ್ಪಡೆ
ವಿಮಾನ ನಿಲ್ದಾಣ ಉದ್ಘಾಟನೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ ಹೆಸರಿನ ಕುರಿತು ಒತ್ತಡಗಳು ಹೆಚ್ಚುತ್ತಿವೆ. ಇನ್ನೂ ಹಲವು ಹೆಸರುಗಳನ್ನು ಸೂಚಿಸುವ ಸಾಧ್ಯತೆ ಇದ್ದು, ಪ್ರತಿಭಟನೆಗಳು, ಸಭೆಗಳು, ಮನವಿ ನೀಡುವುದ ಮುಂದುವರೆಯಲಿದೆ. ಸಾಮಾಜಿಕ ಜಾಲತಾಣಗಳಲ್ಲಿಯು ಹೆಸರನ್ನು ಸೂಚಿಸಲಾಗುತ್ತಿದೆ. ಪರ, ವಿರೋಧ ಚರ್ಚೆಗಳು ನಡೆಯುತ್ತಿವೆ.
ಇದನ್ನೂ ಓದಿ – ಗಾಜನೂರು ರಸ್ತೆಯಲ್ಲಿ ದರೋಡೆಗೆ ಪ್ಲಾನ್, ಶಿವಮೊಗ್ಗದ ಲಾಡ್ಜ್ ನಲ್ಲಿ ಸ್ಕೆಚ್, ಐವರ ವಿರುದ್ಧ ಕೇಸ್