ಹೊಸ ವರ್ಷದಂದು 750 ಮಕ್ಕಳಿಂದ ಪೋಷಕರಿಗೆ ಪಾದಪೂಜೆ, ಶಿವಮೊಗ್ಗದಲ್ಲಿ ವಿಭಿನ್ನ ಕಾರ್ಯಕ್ರಮ

SHIVAMOGGA LIVE NEWS | 2 JANUARY 2023

SHIMOGA : ಹೊಸ ವರ್ಷದ ಮೊದಲ ದಿನ ಶಾಲೆಯಲ್ಲಿ ಮಕ್ಕಳು ತಮ್ಮ ಪೋಷಕರಿಗೆ ಪಾದ ಪೂಜೆ ನೆರವೇರಿಸಿದರು. ಒಮ್ಮೆಲೆ 750ಕ್ಕೂ ಹೆಚ್ಚು ಮಕ್ಕಳು ತಂದೆ, ತಾಯಿಯ ಪಾದಕ್ಕೆ ಮಂತ್ರಾಕ್ಷತೆಯೊಂದಿಗೆ ಪೂಜೆ ಸಲ್ಲಿಸಿದರು.

ಶಿವಮೊಗ್ಗದ ಅನುಪಿನಕಟ್ಟೆಯ ಶ್ರೀ ರಾಮಕೃಷ್ಣ ಗುರುಕುಲ ವಸತಿ ಶಾಲೆಯಲ್ಲಿ ಸೋಮವಾರ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹೊಸ ವರ್ಷದ ಮೊದಲ ದಿನ ಶಾಲೆಯಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಸಲಾಯಿತು. ಬಳಿಕ ಮಕ್ಕಳಿಂದ ಪೋಷಕರ ಪಾದ ಪೂಜೆ ನೆರವೇರಿಸಲಾಯಿತು. ಸಾಂಪ್ರದಾಯಿಕ ಉಡುಪು ತೊಟ್ಟು ಪೋಷಕರು ಮತ್ತು ಮಕ್ಕಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ – ಹೊಸ ವರ್ಷ, ಶಿವಮೊಗ್ಗದ ಜಿಮ್‌ಗಳು, ಯೋಗ ತರಬೇತಿ ಕೇಂದ್ರಗಳಿಗೆ ಅಡ್ಮಿಷನ್‌ ಹೆಚ್ಚಳ

ಜಡೆ ಸಂಸ್ಥಾನ ಮಠದ ಡಾ.ಮಹಾಂತ ಮಹಾಸ್ವಾಮಿಜಿ ಸಾನ್ನಿಧ್ಯ ವಹಿಸಿದ್ದರು. ಸಾಗರದ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ಜ್ಞಾನನಂದಜೀ ಮಹಾರಾಜ್ ಉಪಸ್ಥಿತರಿದ್ದರು. ಶಾಲೆಯ ಹಿರಿಯ ವಿದ್ಯಾರ್ಥಿ ಡಾ.ವಿನಯ್ ಕೆ.ಅಲಗುಂಡಿಗೆ, ವ್ಯವಸ್ಥಾಪಕ ಟ್ರಸ್ಟಿ ಶೋಭಾ ವೆಂಕಟರಮಣ, ಅರುಣ್, ತೀರ್ಥೇಶ್ ಸೇರಿದಂತೆ ಹಲವರು ಇದ್ದರು.

Paada Pooje at Shimoga Ramakrishna School

paada 2
Paada Pooje at Shimoga Ramakrishna School
ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : January 2, 2024 at 7:59 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಜನವರಿ 2, 2024

Leave a Comment