ತೀರ್ಥಹಳ್ಳಿ ಮಹಿಳೆಯರಿಗೆ ಮೊದಲ ಮೂರು ಬಹುಮಾನ, ಹೇಗಿತ್ತು ಸ್ಪರ್ಧೆ? ವಿಜೇತರು ಯಾರು?

Published On : ಮಾರ್ಚ್ 16, 2026

Published By : ನಿತಿನ್‌ ಆರ್‌.ಕೈದೊಟ್ಲು 

PACE-College-2026

ಶಿವಮೊಗ್ಗ: ಮಹಿಳೆಯರ ಚಿತ್ರಕಲೆಯಲ್ಲಿ (painting) ಪ್ರಕೃತಿಯ ಸೊಬಗು ಅನಾವರಣಗೊಳ್ಳುತ್ತಿರುವುದು ಹೆಮ್ಮೆಯ ವಿಷಯ. ಇಂತಹ ಸ್ಪರ್ಧೆಗಳು ಮಹಿಳೆಯರಲ್ಲಿ ಸುಪ್ತವಾಗಿ ಅಡಗಿರುವ ಕಲೆ ಮತ್ತು ಕೌಶಲ್ಯಕ್ಕೆ ಉತ್ತಮ ವೇದಿಕೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್ ಎನ್ ಅವರು ತಿಳಿಸಿದರು.

ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ‘ಪ್ರಕೃತಿ’ ವಿಷಯದ ಚಿತ್ರಕಲಾ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.

 painting competition for women Karnataka

ಚಿತ್ರಕಲೆ ಕೇವಲ ಕಲೆಯಾಗಿ ಉಳಿಯದೆ ಮನಸ್ಸಿಗೆ ಆನಂದ ನೀಡುವ ಮಾರ್ಗವಾಗಿದೆ. ಆಸಕ್ತರು ಇಂತಹ ವೇದಿಕೆಗಳನ್ನು ಬಳಸಿಕೊಂಡು ತಮ್ಮ ಪ್ರತಿಭೆಯನ್ನು ಹೊರಹಾಕಬೇಕು ಎಂದರು.

ಹೇಗಿತ್ತು ಸ್ಪರ್ಧೆ? ವಿಜೇತರು ಯಾರು?

 painting competition for women Karnataka Shimoga

ಚಿತ್ರಕಲಾ ಸ್ಪರ್ಧೆಗೆ ಶಿವಮೊಗ್ಗ ಜಿಲ್ಲೆಯ ಒಟ್ಟು 74 ಮಹಿಳಾ ಸ್ಪರ್ಧಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಪ್ರತಿ ಸ್ಪರ್ಧಿಗೆ 2×2.5 ಅಳತೆಯ ಕ್ಯಾನ್ವಾಸ್ ಒದಗಿಸಲಾಗಿತ್ತು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್‌ನ ವಿವಿಧ ಅಧಿಕಾರಿಗಳು ಮತ್ತು ಕಲಾ ಆಸಕ್ತರು ಪಾಲ್ಗೊಂಡಿದ್ದರು. ಸ್ಪರ್ಧೆಯಲ್ಲಿ ಅತ್ಯುತ್ತಮ ಕಲೆ ಪ್ರದರ್ಶಿಸಿದವರಿಗೆ ನಗದು ಬಹುಮಾನ ವಿತರಿಸಲಾಯಿತು.

  • ಪ್ರಥಮ ಬಹುಮಾನ (₹8,000): ಪ್ರಕೃತಿ ಶೆಣೈ, ತೀರ್ಥಹಳ್ಳಿ.
  • ದ್ವಿತೀಯ ಬಹುಮಾನ (₹6,000): ಭಾವನಾ ಹೊಳ್ಳ, ತೀರ್ಥಹಳ್ಳಿ.
  • ತೃತೀಯ ಬಹುಮಾನ (₹4,000): ಆಶಾ ಉಮೇಶ್, ತೀರ್ಥಹಳ್ಳಿ.
  • ಸಮಾಧಾನಕರ ಬಹುಮಾನ (ತಲಾ ₹2,000): ಹೇಮಲತಮ್ಮ (ಶಿಕಾರಿಪುರ), ಮನ್ವಿತಾ ಆರ್. (ಶಿವಮೊಗ್ಗ), ಶಾಲಿನಿ ನಾಯಕ್ (ಆನವಟ್ಟಿ).
  • ವಿಶೇಷ ಬಹುಮಾನ: ಸೌಜನ್ಯ ಆರ್. ಕೆ., ಶಿವಮೊಗ್ಗ.
Thirthahalli-Women-bags-First-three-prizes-in-Painting

ವಿಜೇತರಿಗೆ ಮಾರ್ಚ್ 26ರಂದು ನಡೆಯಲಿರುವ ಸಮಾರಂಭದಲ್ಲಿ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ – ಶಿವಮೊಗ್ಗ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಅಪಘಾತ, ಯುವಕನಿಗೆ ಬಸ್‌ ಡಿಕ್ಕಿ, ಆಗಿದ್ದೇನು?

Sunrise Facility Services, Sri sai Trust Shimoga
JNN College of Engineering Admissions started

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಮಾರ್ಚ್ 16, 2026

Leave a Comment