ಕಾಶ್ಮೀರದಲ್ಲಿ ಶಿವಮೊಗ್ಗದ ರಿಯಲ್‌ ಎಸ್ಟೇಟ್‌ ಉದ್ಯಮಿ ಹತ್ಯೆ, ಪತ್ನಿ ಹೇಳಿದ್ದೇನು? ಇಲ್ಲಿದೆ ಪಾಯಿಂಟ್ಸ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ : ಕಾಶ್ಮೀರದ ಪ್ರವಾಸಿ ತಾಣದಲ್ಲಿ ಭಯೋತ್ಪಾದಕ ದಾಳಿಗೆ (attack) ಶಿವಮೊಗ್ಗದ ರಿಯಲ್‌ ಎಸ್ಟೇಟ್‌ ಉದ್ಯಮಿ ಮಂಜುನಾಥ್‌ ರಾವ್‌ ಸೇರಿದಂತೆ 28ಕ್ಕೂ ಹೆಚ್ಚು ಪ್ರವಾಸಿಗರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಘಟನೆ ಕುರಿತು ಮಂಜುನಾಥ್‌ ಅವರ ಪತ್ನಿ ಪಲ್ಲವಿ ಶಿವಮೊಗ್ಗ ಲೈವ್.ಕಾಂ ಜೊತೆಗೆ ಮಾತನಾಡಿದರು.

ಇದನ್ನೂ ಓದಿ » ಪುರಸಭೆಗೆ ಬಿಜೆಪಿಯ ಅಧ್ಯಕ್ಷ, ಕಾಂಗ್ರೆಸ್‌ನ ಉಪಾಧ್ಯಕ್ಷೆ, ಒಬ್ಬ ಬಿಜೆಪಿಯ ಸದಸ್ಯರಿಂದ ಕಾಂಗ್ರೆಸ್‌ ಪರ ಮತ

ಪಲ್ಲವಿ ಏನೆಲ್ಲ ಹೇಳಿದರು? ಇಲ್ಲಿದೆ ಪಾಯಿಂಟ್ಸ್‌

point-1ಟೂರಿಸ್ಟ್‌ ಏಜೆನ್ಸಿ ಮೂಲಕ ನಾವು ಇಲ್ಲಿಗೆ ಬಂದಿದ್ದೆವು. ನಾನು, ಪತಿ ಮಂಜುನಾಥ್‌ ಮತು ಮಗನೊಂದಿಗೆ ಪಹಾಲ್ಗಾಮ್‌ಗೆ ತೆರಳಿದ್ದೆವು. ಮಧ್ಯಾಹ್ನದ ಹೊತ್ತಿಗೆ ಘಟನೆ ಸಂಭವಿಸಿತು. ಈಗ ನಮ್ಮ ಕಾರು ಚಾಲಕ ನಮ್ಮ ಜೊತೆಗೆ ಇದ್ದಾರೆ.

pahalgam-attack-shimoga-manjunath-rao-dies-in-the-incident

point-2ಸುಮಾರು 500ಕ್ಕೂ ಹೆಚ್ಚು ಜನರು ಆ ಜಾಗದಲ್ಲಿದ್ದರು. ಮಿನಿ ಸ್ವಿಟ್ಜರ್‌ಲ್ಯಾಂಡ್‌ ಎಂಬ ಪಾಯಿಂಟ್‌ಗೆ ಹೋಗಿದ್ದೆವು. ಕುದುರೆ ಇಳಿದು ಸುಮಾರು ಹತ್ತು ನಿಮಿಷವಾಗಿತ್ತು. ಮಗ ಬೆಳಗ್ಗೆಯಿಂದ ಏನು ತಿಂದಿರಲಿಲ್ಲ. ಆತನಿಗೆ ಏನಾದರು ಕೊಡುಸೋಣ ಎಂದು ತಿರುಗಿದೆ. ಅಷ್ಟರಲ್ಲಿ ಗುಂಡಿನ ಶಬ್ದ ಕೇಳಿ ಜನರು ಓಡುತ್ತಿದ್ದರು. ಹಿಂತಿರುಗಿದಾಗ ನನ್ನ ಪತಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಲೆಗೆ ಗುಂಡು ಹೊಡೆದಿದ್ದರು (attack).

point-3ಮೂರ್ನಾಲ್ಕು ಜನ ದಾಳಿಕೋರರು ಇದ್ದರು. ‘ನನ್ನ ಪತಿಯನ್ನು ಕೊಂದಿದ್ದೀರ. ನಮ್ಮನ್ನು ಕೊಂದುಬಿಡಿ ಎಂದು ನಾನು ಮತ್ತು ಮಗ ಕೇಳಿಕೊಂಡೆವು. ಆಗ ದಾಳಿಕೋರರಲ್ಲಿ ಒಬ್ಬಾತ, ನಿಮ್ಮನ್ನು ಕೊಲ್ಲುವುದಿಲ್ಲ. ಮೋದಿಗೆ ಹೋಗಿ ಹೇಳು ಹೇಳಿʼ ಎಂದ. ಆತ ಬಂದೂಕು ಹಿಡಿದು ನನ್ನ ಪಕ್ಕದಲ್ಲೇ ನಿಂತಿದ್ದ.

pahalgam-attack-shimoga-manjunath-rao-dies-in-the-incident

point-4ಗಂಡಸರನ್ನು ಮಾತ್ರ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಮಹಿಳೆಯರು ಮತ್ತು ಮಕ್ಕಳತ್ತ ಗುಂಡು ಹಾರಿಸಿಲ್ಲ. ಹಿಂದೂಗಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ ಎಂದು ಹೇಳುತ್ತಿದ್ದಾರೆ. ಅಲ್ಲಿದ್ದ ಮೂವರು ನನ್ನನ್ನು ಮತ್ತು ನನ್ನ ಮಗನನ್ನು ರಕ್ಷಿಸಿದರು. ಬಿಸ್ಮಿಲ್ಲ.. ಬಿಸ್ಮಿಲ್ಲ.. ಎಂದು ಹೇಳಿಕೊಂಡು ಅಲ್ಲಿಂದ ಕೆಳಗೆ ಕರೆದುಕೊಂಡು ಬಂದರು.

point-5ನನ್ನ ಪತಿಯ ಪಾರ್ಥಿವ ಶರೀರವನ್ನು ನನಗೆ ಹಸ್ತಾಂತರ ಮಾಡಿದರೆ ಸಾಕು. ಇಲ್ಲಿಂದ ಮೊದಲು ಶಿವಮೊಗ್ಗಕ್ಕೆ ಹಿಂತಿರುಗಬೇಕು. ದಯವಿಟ್ಟು ವಿಮಾನದ ವ್ಯವಸ್ಥೆ ಮಾಡಿಕೊಡಿ.

ಇದನ್ನೂ ಓದಿ » ಕಾಶ್ಮೀರದಲ್ಲಿ ಭಯೋತ್ಪಾದನಾ ದಾಳಿ, ಶಿವಮೊಗ್ಗದ ರಿಯಲ್‌ ಎಸ್ಟೇಟ್‌ ಉದ್ಯಮಿ ಸಾವು

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ

ಈಗಲೇ ಕರೆ ಮಾಡಿ
9972194422

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 22, 2025

ವಿದ್ಯಾರ್ಥಿನಿಯರಿಗೆ ಉಪನ್ಯಾಸಕನಿಂದ ಮೆಸೇಜ್‌ ಆರೋಪ, ಕಾಲೇಜು ಮುಂದೆ ಆಕ್ರೋಶ

ವಿದ್ಯಾರ್ಥಿನಿಯರಿಗೆ ಉಪನ್ಯಾಸಕನಿಂದ ಮೆಸೇಜ್‌ ಆರೋಪ, ಕಾಲೇಜು ಮುಂದೆ ಆಕ್ರೋಶ

ಭದ್ರಾವತಿಯಲ್ಲಿ 20 ವರ್ಷದ ಯುವಕ ಅರೆಸ್ಟ್‌, ಈತನ ಮೇಲಿವೆ 11 ಕೇಸ್‌, ಏನೇನು?

ಭದ್ರಾವತಿಯಲ್ಲಿ 20 ವರ್ಷದ ಯುವಕ ಅರೆಸ್ಟ್‌, ಈತನ ಮೇಲಿವೆ 11 ಕೇಸ್‌, ಏನೇನು?

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆಯಾಗುತ್ತಾ? ಇಲ್ಲಿದೆ ಇಂದಿನ ಹವಾಮಾನ ವರದಿ

ಶಿವಮೊಗ್ಗ ಜಿಲ್ಲೆಯಲ್ಲಿ ಇವತ್ತೂ ಮಳೆಯಾಗುತ್ತಾ? ಇಲ್ಲಿದೆ ಇಂದಿನ ಹವಾಮಾನ ವರದಿ

ಇಂದಿನ ಪಂಚಾಂಗ – ಇವತ್ತು ಷಷ್ಠಿ, ರೋಹಿಣಿ ನಕ್ಷತ್ರದ ದಿನ, ಯಾವ್ಯಾವ ಸಮಯ ಯಾವಾಗಿದೆ?

ಇಂದಿನ ಪಂಚಾಂಗ – ಇವತ್ತು ಷಷ್ಠಿ, ರೋಹಿಣಿ ನಕ್ಷತ್ರದ ದಿನ, ಯಾವ್ಯಾವ ಸಮಯ ಯಾವಾಗಿದೆ?

ಮೈಸೂರು – ಶಿವಮೊಗ್ಗ ರೈಲು, ಎರಡು ದಿನ ಭಾಗಶಃ ರದ್ದು, ಯಾವಾಗ?

ಮೈಸೂರು – ಶಿವಮೊಗ್ಗ ರೈಲು, ಎರಡು ದಿನ ಭಾಗಶಃ ರದ್ದು, ಯಾವಾಗ?

ಮೂವರ ಮೇಲೆ ದಾಳಿ ಮಾಡಿದ್ದ ಚಿರತೆ ಅನುಮಾನಾಸ್ಪದ ಸಾವು, ಎಲ್ಲಿ?

ಮೂವರ ಮೇಲೆ ದಾಳಿ ಮಾಡಿದ್ದ ಚಿರತೆ ಅನುಮಾನಾಸ್ಪದ ಸಾವು, ಎಲ್ಲಿ?

ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಹೊಳಲೂರು ಭಾಗದಲ್ಲಿ ಆಲಿಕಲ್ಲು ಸಹಿತ ವರ್ಷಧಾರೆ

ಶಿವಮೊಗ್ಗ ಸಿಟಿಯಲ್ಲಿ ಭಾರಿ ಮಳೆ, ಹೊಳಲೂರು ಭಾಗದಲ್ಲಿ ಆಲಿಕಲ್ಲು ಸಹಿತ ವರ್ಷಧಾರೆ

ಶಿವಮೊಗ್ಗದಲ್ಲಿ ದಾವಣಗೆರೆಗಿಂತಲು ದೊಡ್ಡ BSC ಶೋರೂಂ, ಏನೇನಿರುತ್ತೆ? ಯಾವಾಗ ಶುರು?

ಶಿವಮೊಗ್ಗದಲ್ಲಿ ದಾವಣಗೆರೆಗಿಂತಲು ದೊಡ್ಡ BSC ಶೋರೂಂ, ಏನೇನಿರುತ್ತೆ? ಯಾವಾಗ ಶುರು?

ಇವತ್ತು ಸರಕು ಅಡಿಕೆ ಎಷ್ಟಿದೆ? ರಾಶಿ, ಗೊರಬಲು ಧಾರಣೆ ಹೇಗಿದೆ? – 23 ಮಾರ್ಚ್‌ 2026

ಇವತ್ತು ಸರಕು ಅಡಿಕೆ ಎಷ್ಟಿದೆ? ರಾಶಿ, ಗೊರಬಲು ಧಾರಣೆ ಹೇಗಿದೆ? – 23 ಮಾರ್ಚ್‌ 2026

ಗಾಂಧಿ ಬಜಾರ್‌ ಉದ್ಯಮಿಗೆ ಬೆದರಿಕೆ ಕರೆ, ₹5,00,000 ಹಣಕ್ಕೆ ಡಿಮಾಂಡ್‌, ಏನಿದು ಕೇಸ್‌?

ಗಾಂಧಿ ಬಜಾರ್‌ ಉದ್ಯಮಿಗೆ ಬೆದರಿಕೆ ಕರೆ, ₹5,00,000 ಹಣಕ್ಕೆ ಡಿಮಾಂಡ್‌, ಏನಿದು ಕೇಸ್‌?

Leave a Comment