SHIVAMOGGA LIVE NEWS | 18 FEBRURARY 2023
SHIMOGA : ತುಂಗಾ ನದಿ (Tunga River) ದಂಡೆಯ ಮೇಲೆ ಹಲವು ಶಿವ ದೇಗುಲಗಳನ್ನು ಕಾಣಬಹುದಾಗಿದೆ. ಶಿವರಾತ್ರಿ ಅಂಗವಾಗಿ ಎಲ್ಲಾ ದೇವಸ್ಥಾನಗಳಲ್ಲಿಯು ವಿಶೇಷ ಪೂಜೆ ನೆರವೇರಲಿದೆ. ಅದರಲ್ಲಿಯು ಕೆಲವರು ಒಂದೇ ದಿನ ‘ಪಂಚಲಿಂಗ ದರ್ಶನ’ ಪಡೆದು, ಪುನೀತರಾಗುತ್ತಾರೆ.
ತೀರ್ಥಹಳ್ಳಿ, ಶಿವಮೊಗ್ಗದಲ್ಲಿ ತುಂಗಾ ನದಿ ಹರಿಯುತ್ತದೆ. ಇದರ ದಂಡೆ ಮೇಲೆ ಸಾಲು ಸಾಲು ಶಿವ ದೇಗುಲಗಳಿವೆ. ಪ್ರತಿ ದೇವಸ್ಥಾನಕ್ಕು ಪೌರಾಣಿಕ ಮತ್ತು ಇತಿಹಾಸಕ ಹಿನ್ನೆಲೆ ಇದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಪಂಚಲಿಂಗ ದರ್ಶನ ಶ್ರೇಷ್ಠ
ತುಂಗಾ ನದಿ (Tunga River) ದಂಡೆ ಮೇಲಿರುವ ಐದು ಪುರಾತನ ದೇವಸ್ಥಾನಗಳಲ್ಲಿನ ಶಿವಲಿಂಗ ದರ್ಶನವನ್ನು ಶ್ರೇಷ್ಠ ಎಂದು ಭಕ್ತರು ನಂಬುತ್ತಾರೆ. ಶಿವರಾತ್ರಿಯಂದು ಒಂದೇ ದಿನ ಈ ಐದು ಶಿವಲಿಂಗಗಳ ದರ್ಶನ ಪಡೆಯುವ ಭಕ್ತರಿದ್ದಾರೆ.
ಇದನ್ನೂ ಓದಿ – ಹರಕೆರೆ ರಾಮೇಶ್ವರ ದೇವಸ್ಥಾನದ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ 3 ಕುತೂಹಲಕಾರಿ ಸಂಗತಿ
‘ತುಂಗಾ ನದಿ ದಂಡೆ ಮೇಲಿರುವ ಶಿವಮೊಗ್ಗದ ಪಣಿ ವೀರಭದ್ರೇಶ್ವರ ದೇವಸ್ಥಾನ, ಹರಕೆರೆಯ ಶ್ರೀ ರಾಮೇಶ್ವರ ದೇವಸ್ಥಾನ, ಕೋಟೆ ಶ್ರೀ ಭೀಮೇಶ್ವೇರ ದೇವಸ್ಥಾನ, ತೀರ್ಥಹಳ್ಳಿಗೆ ಹೋಗುವ ಮಾರ್ಗದಲ್ಲಿರುವ ಶಿವನ ದೇಗುಲ, ತೀರ್ಥಹಳ್ಳಿಯ ಶ್ರೀ ರಾಮೇಶ್ವರ ದೇವಸ್ಥಾನಗಳಲ್ಲಿ ಪಂಚಲಿಂಗ ದರ್ಶನ ಮಾಡುವುದು ಶ್ರೇಯಸ್ಕರ’ ಅನ್ನುತ್ತಾರೆ ಹರಕೆರೆ ಶ್ರೀ ರಾಮೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶಿವಸ್ವಾಮಿ ಭಟ್ಟರು.