ಶಿವಮೊಗ್ಗದಲ್ಲಿ ಪಥ ಸಂಚಲನಕ್ಕೆ ಮಹಿಳಾ ಐಪಿಎಸ್‌ ಅಧಿಕಾರಿ ನೇತೃತ್ವ, ಇದೇ ಮೊದಲು ಕನ್ನಡದಲ್ಲಿ ಆದೇಶ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 15 AUGUST 2023

SHIMOGA : ಸ್ವಾತಂತ್ರ್ಯ ದಿನಾಚರಣೆ ಪಥಸಂಚಲನಕ್ಕೆ (Parade) ಈ ಬಾರಿ ಕನ್ನಡದಲ್ಲಿ ಆದೇಶ ನೀಡಲಾಯಿತು. ಶಿವಮೊಗ್ಗದಲ್ಲಿ ಇದೆ ಮೊದಲ ಬಾರಿ ಕನ್ನಡದಲ್ಲಿ ಆದೇಶ ನೀಡಿದ್ದು, ಸಭೀಕರ ಗಮನ ಸೆಳೆಯಿತು.

ಡಿಎಆರ್‌ ಮೈದಾನದಲ್ಲಿ 77ನೇ ಸ್ವಾತಂತ್ರ್ಯೋತ್ಸವ ಹಿನ್ನೆಲೆ ಪಥ ಸಂಚಲನ ನಡೆಯಿತು. ಪ್ರೊಬೇಷನರಿ ಐಪಿಎಸ್‌ ಅಧಿಕಾರಿ ಎನ್‌.ಆರ್‌.ಬಿಂದು ಮಣಿ ಅವರು ಪಥ ಸಂಚಲನದ (Parade) ನೇತೃತ್ವ ವಹಿಸಿದ್ದರು.

ಕನ್ನಡ ಆದೇಶ ಇದೇ ಮೊದಲು

ಈವರೆಗೂ ಪರೇಡ್‌ ಕಮಾಂಡರ್‌ಗಳು ಹಿಂದಿ ಭಾಷೆಯಲ್ಲಿ ಆದೇಶಗಳನ್ನು ನೀಡುತ್ತಿದ್ದರು. ಆದರೆ ಇದೇ ಮೊದಲ ಬಾರಿ ಪ್ರೊಬೇಷನರಿಗೆ ಐಪಿಎಸ್‌ ಅಧಿಕಾರಿ ಬಿಂದು ಮಣಿ ಕನ್ನಡದಲ್ಲಿ ಆದೇಶ ನೀಡಿದರು. ತುಕಡಿಗಳ ಪರಿಶೀಲನೆ, ಪಥ ಸಂಚಲನಕ್ಕೆ ಅನುಮತಿ, ತುಕಡಿಗಳ ನಿರ್ಗಮನದ ಆದೇಶ ಮತ್ತು ಅನುಮತಿಗಳನ್ನು ಬಿಂದು ಮಣಿ ಅವರು ಕನ್ನಡದಲ್ಲಿ ನಿರ್ವಹಿಸಿದರು.

IPS Officer Bindu Mani led the Independence day parade in Shimoga

ಸರ್ಕಾರಿ ಶಾಲೆ ಮಕ್ಕಳಿಗೆ ಪ್ರಥಮ ಬಹುಮಾನ

ಪಥ ಸಂಚಲನದಲ್ಲಿ ಪಾಲ್ಗೊಳ್ಳುವ ವಿವಿಧ ಶಾಲೆ, ಕಾಲೇಜು ಮಕ್ಕಳಿಗೆ ಬಹುಮಾನ ವಿತರಿಸಲಾಗುತ್ತದೆ. ಈ ಬಾರಿ ಅತ್ಯುತ್ತಮವಾಗಿ ಪಥ ಸಂಚಲನ ಮಾಡಿದ ಸರ್ಕಾರಿ ಬಾಲ ಮಂದಿರ ಶಾಲೆ ಮಕ್ಕಳು ಮೊದಲ ಬಹುಮಾನ ಪಡೆದರು. ಗಾಜನೂರು ಮೊರಾರ್ಜಿ ವಸತಿ ಶಾಲೆ ಮಕ್ಕಳು ದ್ವಿತೀಯ, ಪ್ರಿಯದರ್ಶಿನಿ ಶಾಲೆ ಮಕ್ಕಳು ತೃತೀಯ ಸ್ಥಾನ ಪಡೆದರು. ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬಹುಮಾನ ವಿತರಿಸಿದರು.

Independence Day parade in Shimoga

ಇದೇ ವೇಳೆ, ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಪ್ರಕಟಿಸಲಾಗಿರುವ ಗ್ಯಾರಂಟಿ ಯೋಜನೆಗಳ ಪುಸ್ತಕವನ್ನು ಸಚಿವ ಮಧು ಬಂಗಾರಪ್ಪ ಬಿಡುಗಡೆ ಮಾಡಿದರು. ಬಳಿಕ ವಿವಿಧ ಶಾಲೆ, ಕಾಲೇಜು ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಇದನ್ನೂ ಓದಿ – ಶಿವಮೊಗ್ಗದಲ್ಲಿ ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದ ಮಿನಿಸ್ಟರ್‌, ಇಲ್ಲಿದೆ 6 ಪ್ರಮುಖ ಪಾಯಿಂಟ್‌

ಜಿಲ್ಲಾಧಿಕಾರಿ ಡಾ. ಸೆಲ್ವಮಣಿ, ಜಿಲ್ಲಾ ರಕ್ಷಣಾಧಿಕಾರಿ ಮಿಥುನ್‌ ಕುಮಾರ್‌, ಜಿಲ್ಲಾ ಪಂಚಾಯಿತಿ ಸಿಇಒ ಲೋಖಂಡೆ ಸ್ನೇಹಲ್‌ ಸುಧಾಕರ್‌, ಪಾಲಿಕೆ ಕಮಿಷನರ್‌ ಮಾಯಣ್ಣಗೌಡ ಸೇರಿದಂತೆ ಹಲವರು ಇದ್ದರು.

PARISHRAMA neet academy

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : August 15, 2023

Leave a Comment