ನವಜಾತ ಶಿಶು ಸಾವು, ಆಕ್ರೋಶಗೊಂಡ ಪೋಷಕರಿಂದ ಪ್ರತಿಭಟನೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | SHIMOGA | 13 ಜುಲೈ 2022

ನವಜಾತ ಶಿಶು ಸಾವನ್ನಪ್ಪಿದ (CHILD DEATH) ಹಿನ್ನೆಲೆ ಪೋಷಕರು, ಸಂಬಂಧಿಕರು ದಿಢೀರ್ ಪ್ರತಿಭಟನೆ ನಡೆಸಿದರು. ಮೆಗ್ಗಾನ್ ಆಸ್ಪತ್ರೆಯಲ್ಲಿ ಘಟನೆ ಸಂಭವಿಸಿದೆ.

Shimoga Nanjappa Hospital

ಜನಿಸಿದ ನಾಲ್ಕೆ ದಿನಕ್ಕೆ ಶಿಶು ಮೃತಪಟ್ಟಿದೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿ ಪಾಲಕರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದರು. ಶಿಕಾರಿಪುರ ತಾಲೂಕು ಕಲ್ಮನೆ ಗ್ರಾಮದ ಶಾರದಾ ಅವರು ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆ ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಗಿತ್ತು.

ಆಸ್ಪತ್ರೆಯಲ್ಲೇ ಹೆರಿಗೆ ಆಗಿ ನಾಲ್ಕು ದಿನ ಕಳೆದಿತ್ತು. ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದರಿಂದ ನವಜಾತ ಶಿಶುವನ್ನು ಐಸಿಯುನಲ್ಲಿ ಇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಶಿಶು ಮೃತಪಟ್ಟಿದೆ. ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂದು ಆರೋಪಿಸಿ ಪಾಲಕರು ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ – ಆಗುಂಬೆ ಘಾಟಿ ಸಂಚಾರಕ್ಕೆ ಮುಕ್ತ, ಎಲ್ಲಾ ವಾಹನಗಳಿಗೂ ಇಲ್ಲ ಅವಕಾಶ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment