ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ |SHIMOGA NEWS | 21 NOVEMBER 2020
ಶಿವಮೊಗ್ಗದಲ್ಲಿ ವಾಹನ ದಟ್ಟಣೆ ಹೆಚ್ಚಾಗುತ್ತಿದೆ. ಇದರ ಬೆನ್ನಿಗೆ ಪಾರ್ಕಿಂಗ್ ಪ್ರಾಬ್ಲಂ ಕೂಡ ಬಿಗಡಾಯಿಸಿದೆ. ಶಿವಮೊಗ್ಗ ನಗರದ ಪಾರ್ಕಿಂಗ್ ಸಮಸ್ಯೆ ಕುರಿತು ಬೆಳಕು ಚಲ್ಲುವ ಪ್ರಯತ್ನ ಇದು.
ಪಾರ್ಕಿಂಗ್ ಪ್ರಾಬ್ಲಂ 1 | ಕುವೆಂಪು ರಸ್ತೆ
ನಗರದ ಪ್ರಮುಖ ರಸ್ತೆಗಳಲ್ಲಿ ಒಂದು ಕುವೆಂಪು ರಸ್ತೆ. ಇಲ್ಲಿ ವಾಹನಗಳ ಪಾರ್ಕಿಂಗ್ ಸಮಸ್ಯೆ ಉಳಿದ ಕಡೆಗಿಂತಲೂ ಹೆಚ್ಚು. ಹಾಗಾಗಿ ರಸ್ತೆ ಸಾಲದು ಅಂತಾ ಫುಟ್ ಪಾತ್ ಮೇಲೂ ವಾಹನಗಳನ್ನು ಪಾರ್ಕ್ ಮಾಡಲಾಗುತ್ತಿದೆ.
ವಾಹನ ದಟ್ಟಣೆಗೆ ಕಾರಣವೇನು?
- ನಗರದ ಪ್ರಮುಖ ಬಡಾವಣೆಗಳು, ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇದು.
- ಜಿಲ್ಲಾ ಪಂಚಾಯಿತಿ ಕಚೇರಿ, ಸರ್ಕಾರಿ, ಖಾಸಗಿ ಕಚೇರಿಗಳು, ಪ್ರಮುಖ ಆಸ್ಪತ್ರೆಗಳು ಈ ರಸ್ತೆಯಲ್ಲಿದೆ.
- ಸವಳಂಗ ರಸ್ತೆ, ಸಾಗರ ರಸ್ತೆ, ಜೈಲ್ ರೋಡ್ಗಳಿಗೆ ಸಂಪರ್ಕ ಕಲ್ಪಿಸುವುದರಿಂದ ವಾಹನಗಳ ಓಡಾಟವು ಹೆಚ್ಚು.
ರಸ್ತೆಯಲ್ಲಿ ವಾಹನ ನಿಲ್ಲಿಸಿದರೆ ಕೇಸ್
ಕುವೆಂಪು ರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶವಿಲ್ಲ. ರಸ್ತೆ ಮೇಲೆ ವಾಹನ ನಿಲ್ಲಿಸಿದರೆ ದಂಡ ಖಚಿತ. ಇಲ್ಲಿ ಕಾರು, ಭಾರೀ ವಾಹನಗಳನ್ನು ನಿಲ್ಲಿಸಿದರೆ ಪೊಲೀಸರು ಟೈರ್ಗೆ ಲಾಕ್ ಹಾಕುತ್ತಾರೆ. ಬೈಕುಗಳಾದರೆ ಟ್ರಾಫಿಕ್ ಠಾಣೆಗೆ ಕೊಂಡೊಯ್ಯಲಾಗುತ್ತದೆ.
ಫುಟ್ ಪಾತ್ನಲ್ಲೇ ವಾಹನ ಪಾರ್ಕಿಂಗ್
ದಂಡ ಬಿಸಿಯಿಂದ ಹೊಸ ರೀತಿಯ ಸಮಸ್ಯೆ ಸೃಷ್ಟಿಯಾಗಿದೆ. ವಾಹನಗಳನ್ನು ಫುಟ್ ಪಾತ್ ಮೇಲೆ ಪಾರ್ಕಿಂಗ್ ಮಾಡಲಾಗುತ್ತಿದೆ. ಕುವೆಂಪು ರಸ್ತೆಯ ಎರಡು ಬದಿಯ ಫುಟ್ ಪಾತ್ಗಳ ಮೇಲೆ ಕಾರು, ಬೈಕು, ಆಂಬುಲೆನ್ಸ್ಗಳನ್ನು ನಿಲ್ಲಿಸಲಾಗುತ್ತಿದೆ. ಹಾಗಾಗಿ ಪಾದಚಾರಿಗಳು ಫುಟ್ ರಸ್ತೆ ಮೇಲೆ ಓಡಾಡಬೇಕಾಗಿದೆ.
ಸೆಲ್ಲರ್ ಇಲ್ಲ, ಇದ್ದವರು ಬಿಡಲ್ಲ
ಬೃಹತ್ ಕಟ್ಟಡಗಳು, ಕಾಂಪ್ಲೆಕ್ಸ್ಗಳಲ್ಲಿ ಸೆಲ್ಲರ್ ಕಡ್ಡಾಯ. ಆದರೂ ಈ ರಸ್ತೆಯಲ್ಲಿರುವ ಹಲವು ಕಟ್ಟಡಗಳಲ್ಲಿ ಸೆಲ್ಲರ್ಗಳಿಲ್ಲ. ಇದೆ ಕಾರಣಕ್ಕೆ ಈ ಕಟ್ಟಡಗಳಿಗೆ ಬರುವವರು ವಾಹನಗಳನ್ನು ರಸ್ತೆ ಮೇಲೆ, ಫುಟ್ ಪಾತ್ ಮೇಲೆ ತಂದು ನಿಲ್ಲಿಸುತ್ತಿದ್ದಾರೆ. ಕೆಲವು ಕಟ್ಟಡಗಳಲ್ಲಿ ಸೆಲ್ಲರ್ ಇದ್ದರೂ, ವಾಹನಗಳ ನಿಲುಗಡೆಗೆ ಅವಕಾಶ ಕೊಡುತ್ತಿಲ್ಲ.
ಅಕ್ಕಪಕ್ಕದ ಸಣ್ಣ ರಸ್ತೆಗಳಲ್ಲಿ ಪಾರ್ಕಿಂಗ್
ಕುವೆಂಪು ರಸ್ತೆಯಲ್ಲಿ ವಾಹನ ನಿಲುಗಡೆ ಇಲ್ಲದಿರುವುದರಿಂದ, ಅಕ್ಕಪಕ್ಕದ ರಸ್ತೆಗಳು ಪಾರ್ಕಿಂಗ್ ಲಾಟ್ನಂತೆ ಆಗಿವೆ. ಕುವೆಂಪು ರಸ್ತೆಯ ಪಕ್ಕದ ಅಚ್ಚುತರಾವ್ ಬಡಾವಣೆಯ ಒಂದನೆ ಮತ್ತು ನಾಲ್ಕೆನೆ ಕ್ರಾಸ್ ರಸ್ತೆಯಲ್ಲಿ ವಾಹನಗಳನ್ನ ಪಾರ್ಕ್ ಮಾಡಲಾಗುತ್ತಿದೆ. ಇದೆ ರೀತಿ ದುರ್ಗಿಗುಡಿ, ತಿಲಕನಗರ ರಸ್ತೆಗಳು ಪಾರ್ಕಿಂಗ್ ಲಾಟ್ಗಳಂತಾಗಿದ್ದು, ಈ ಭಾಗದಲ್ಲಿ ವಾಸವಿರುವವರು ತಲೆನೋವಾಗಿದೆ.
ಪರಿಹಾರವೆ ಇಲ್ಲವಾಗಿದೆ
ಕುವೆಂಪು ರಸ್ತೆಯಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ಅಗತ್ಯವಿದೆ. ಈ ವ್ಯವಸ್ಥೆಯಾದರೆ ಕುವೆಂಪು ರಸ್ತೆಯ ಬಹುತೇಕ ಪಾರ್ಕಿಂಗ್ ಸಮಸ್ಯೆ ಬಗೆಹರಿಯಲಿದೆ. ಸ್ಮಾರ್ಟ್ ಸಿಟಿ ಯೋಜನೆ ಅಡಿ ಇಲ್ಲೊಂದು ಮಲ್ಟಿ ಲೆವೆಲ್ ಪಾರ್ಕಿಂಗ್ ಸ್ಥಾಪನೆಯತ್ತ ಯೋಜಿಸಬೇಕಿದೆ. ಅಲ್ಲದೆ ಈ ಭಾಗದ ಕನ್ಸರ್ವೆನ್ಸಿಗಳಲ್ಲೂ ಪಾರ್ಕಿಂಗ್ಗೆ ವ್ಯವಸ್ಥೆ ಮಾಡಿದರೆ, ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ಅನುಕೂಲ ಆಗಲಿದೆ.
ಶಿವಮೊಗ್ಗ ಲೈವ್.ಕಾಂ ವಾಟ್ಸಪ್ 7411700200
ಶಿವಮೊಗ್ಗ ಲೈವ್ ಈ ಮೇಲ್ [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422