ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 1 SEPTEMBER 2023
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
SHIMOGA : ಜಿಲ್ಲೆಗೆ ಆಗಮಿಸಿದ ಮೊದಲ ವಿಮಾನದಲ್ಲಿ (First flight) 72 ಪ್ರಯಾಣಿಕರು ಇದ್ದರು. ಮೊದಲ ಬಾರಿ ಶಿವಮೊಗ್ಗಕ್ಕೆ ವಿಮಾನದ ಮೂಲಕ ಆಗಮಿಸುತ್ತಿರುವ ಹಿನ್ನೆಲೆ ಪ್ರಯಾಣಿಕರು ಅತೀವ ಖುಷಿಪಟ್ಟರು. ಅಲ್ಲದೆ ಮಾಧ್ಯಮಗಳ ಎದುರು ತಮ್ಮ ಸಂತೋಷ ವ್ಯಕ್ತಪಡಿಸಿದರು.
ಇದನ್ನೂ ಓದಿ- ಶಿವಮೊಗ್ಗದ ಮೊದಲ ವಿಮಾನದಲ್ಲಿ 10 ಬೆಳ್ಳಿ ಕಾಯಿನ್ ಬಹುಮಾನ, ಯಾರಿಗೆ ವಿತರಿಸಲಾಯಿತು?
ಯಾರೆಲ್ಲ ಏನೇನು ಹೇಳಿದರು?
ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ : ರೈತ ಸಮುದಾಯದ ತ್ಯಾಗದಿಂದಲೆ ವಿಮಾನ ನಿಲ್ದಾಣವಾಗಿದೆ. ಮುಂದೆ ಇದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗುವ ಸಾಧ್ಯತೆ ಇದೆ. ಬೆಂಗಳೂರು ನಂತರ ಎಲ್ಲ ಸವಲತ್ತು ಇರುವ ವಿಮಾನ ನಿಲ್ದಾಣ ಇದಾಗಿದೆ. ಕೈಗಾರಿಕೋದ್ಯಮಿಗಳು ಉಪಯೋಗ ಮಾಡಿಕೊಳ್ಳಬೇಕು. ಉದ್ಯೋಗ ಸೃಷ್ಟಿಗೆ ಅನುಕೂಲವಾಗಲಿದೆ. ಬಹಳ ವರ್ಷದ ಎಲ್ಲರ ಕನಸು ನನಸಾಗಿದೆ.
ಬಿ.ವೈ.ರಾಘವೇಂದ್ರ, ಸಂಸದ : ಮಧ್ಯ ಕರ್ನಾಟಕಕ್ಕೆ ಶ್ರಾವಣ ಮಾಸದಲ್ಲಿ ಮೊದಲ ಲೋಹದ ಹಕ್ಕಿ ಹಾರಾಟ ಆರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಯೋಜನೆ ಜಾರಿಗೆ ಕಾರಣರಾದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನೈಟ್ ಲ್ಯಾಂಡಿಂಗ್‌ನ ಉಳಿದ ಕಾಮಗಾರಿಗಳನ್ನು ಆದಷ್ಟು ಬೇಗ ಮುಗಿಸುವಂತೆ ವಿಮಾನದಲ್ಲಿ ಬರುವಾಗ ಮೂಲ ಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಮನವಿ ಮಾಡಿದ್ದೇನೆ.
ಆ.ನಾ.ವಿಜಯೇಂದ್ರ, ಪ್ರಯಾಣಿಕ : ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕಾರಣರಾದ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ವಿಮಾನದಲ್ಲಿ ಬಂದಿದ್ದು ಖುಷಿಯಾಯಿತು. ಲ್ಯಾಂಡಿಂಗ್, ಟೇಕಾಫ್ ಎಲ್ಲವು ಚೆನ್ನಾಗಿತ್ತು. ವಿಮಾನ ಚಿಕ್ಕದಾಗಿ, ಚೊಕ್ಕವಾಗಿತ್ತು. ಮೊದಲ ವಿಮಾನದಲ್ಲಿ ಹಾರಾಟ ನಡೆಸಬೇಕು ಎಂಬ ಕಾರಣಕ್ಕಾಗಿಯೇ ಟಿಕೆಟ್ ಖರೀದಿಸಿದ್ದೆವು. ಮೊದಲ ವಿಮಾನದಲ್ಲಿ ಹಾರಾಟ ನಡೆಸಿದ ಹೆಮ್ಮೆಗಾಗಿ ನಾವು ವಿಮಾನದಲ್ಲಿ ಬಂದೆವು.
ಇದನ್ನೂ ಓದಿ- ಶಿವಮೊಗ್ಗಕ್ಕೆ ಬಂದಿದ್ದ ಮೊದಲ ವಿಮಾನದ ಬಗ್ಗೆ ನಿಮಗೆಷ್ಟು ಗೊತ್ತು? ಇಲ್ಲಿದೆ 3 ಪ್ರಮುಖ ವಿಚಾರ
ವಿಕ್ರಮ್, ಪ್ರಯಾಣಿಕ : ಮೊದಲ ದಿನ ವಿಮಾನದಲ್ಲಿ ಪ್ರಯಾಣ ಮಾಡಿದ್ದು ಖುಷಿ ಇದೆ. ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ಒಳ್ಳೆಯ ಸ್ವಾಗತ ಸಿಕ್ಕಿದೆ. ಜಿಲ್ಲೆಯು ಪ್ರವಾಸೋದ್ಯಮ ಮತ್ತು ಕೈಗಾರಿಕೆ ಕ್ಷೇತ್ರದಲ್ಲಿ ಹೆಸರು ಮಾಡಲು ಮತ್ತಷ್ಟು ಅವಕಾಶವಾಗಲಿದೆ. ಬಹಳ ಸಮಯದ ಹಿಂದೇನೆ ವಿಮಾನ ನಿಲ್ದಾಣ ಆಗಬೇಕಿತ್ತು.
ಅಖಿಲ್, ಶಿವಮೊಗ್ಗದ ಪ್ರಯಾಣಿಕ : ನಾನು ಉದ್ಯಮಿ. ಬೆಂಗಳೂರು – ಹೈದರಾಬಾದ್ ಮಧ್ಯೆ ನಿರಂತರ ಓಡಾಟ ಇರುತ್ತದೆ. ಯಾವಾಗಲು 12 ಗಂಟೆ ಪ್ರಯಾಣ ಮಾಡಿ ಹೈರಾಣಾಗಿದ್ದೆವು. ಈಗ ವಿಮಾನ ನಿಲ್ದಾಣವಾಗಿರುವುದು ಮತ್ತು ವಿಮಾನಯಾನ ಸೇವೆ ಲಭಿಸುತ್ತಿರುವುದು ಸಮಾಧಾನ ತಂದಿದೆ. ಇದರ ಸಂಪೂರ್ಣ ಕೀರ್ತಿ ಯಡಿಯೂರಪ್ಪ ಮತ್ತು ಸಂಸದ ರಾಘವೇಂದ್ರ ಅವರಿಗೆ ಸಲ್ಲಬೇಕು.
ಗೋಪಿನಾಥ್, ಜಿಲ್ಲಾಧ್ಯಕ್ಷ, ಶಿವಮೊಗ್ಗ ವಾಣಿಜ್ಯ ಮತ್ತು ಕೈಗಾರಿಕೆ ಸಂಘ : ಮೊದಲ ವಿಮಾನದಲ್ಲಿ ಪ್ರಯಾಣ ಮಾಡಿದ್ದು ಖುಷಿಯಾಯಿತು. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
16 ಸಾವಿರ ಕೊಟ್ಟು ಟಿಕೆಟ್ ಖರೀದಿ
ಶಿವಮೊಗ್ಗದ ಮೊದಲ ಫ್ಲೈಟ್‌ನಲ್ಲಿ ಹಾರಬೇಕು ಎಂದು ಹಲವರು ದುಬಾರಿ ದರದ ಟಿಕೆಟ್ ಖರೀದಿಸಿದ್ದರು. 72 ಪ್ರಯಾಣಿಕರ ಪೈಕಿ ಅತಿ ಕಡಿಮೆ ದರದ ಟಿಕೆಟ್ ಖರೀದಿಸಿದ್ದವರು ಶಿವಮೊಗ್ಗದ ಆ.ನಾ.ವಿಜಯೇಂದ್ರ. ಇವರ ಟಿಕೆಟ್ ದರ 4300 ರೂ. ಕೆಲವರು ಪ್ರತಿ ಟಿಕೆಟ್‌ಗೆ 16 ಸಾವಿರ ರೂ. ನೀಡಿದ್ದರು.