ಗೋಪಿ ಸರ್ಕಲ್‌ನಲ್ಲಿ ನಡುರಾತ್ರಿವರೆಗೆ ಕಾರ್ಯಕ್ರಮ, ಬಳಿಕ ಸಂಭ್ರಮ, ಹೇಗಿರುತ್ತೆ ಪ್ರೋಗ್ರಾಂ ಸ್ವರೂಪ?

ಶಿವಮೊಗ್ಗ: ಭಾರತದ ಸ್ವಾತಂತ್ರ್ಯ ಮಹೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಸಂಕಲ್ಪ ಶಿವಮೊಗ್ಗ ವತಿಯಿಂದ ಆಗಸ್ಟ್‌ 14ರ ರಾತ್ರಿ 9 ರಿಂದ 12 ಗಂಟೆಯವರೆಗೆ ನಗರದ ಗೋಪಿ ವೃತ್ತದಲ್ಲಿ ಸ್ವದೇಶಿ ಮಂತ್ರ – 2026 ಶೀರ್ಷಿಕೆಯಡಿ ಸ್ವಾತಂತ್ರ್ಯ ಗೀತಗಾಯನ ಮತ್ತು ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ.➤ ಸುದ್ದಿಯ ಮುಂದಿನ 11 ಪ್ಯಾರಾಗಳು ಕೆಳಗಿವೆ.

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಕಲ್ಪ ಶಿವಮೊಗ್ಗದ ಸಂಚಾಲಕ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ, 35ಕ್ಕೂ ಹೆಚ್ಚು ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಸ್ವದೇಶಿ ಜಾಗೃತಿಗಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

C-S-Shadakshari-Press-Meet-about-Sankapla-Shivamogga-Event

ಷಡಾಕ್ಷರಿ ಏನೆಲ್ಲ ಹೇಳಿದರು? ಇಲ್ಲಿದೆ ಹೈಲೈಟ್ಸ್

#f1f1f1 - POINT 1

ಕಾರ್ಗಿಲ್‌ನಲ್ಲಿ ಸೇವೆ ಸಲ್ಲಿಸಿದ್ದ ಶಿವಮೊಗ್ಗದ ಯೋಧ ಸುಭಾಷ್ ಚಂದ್ರ ತೇಜಸ್ವಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಭಾರತದ ರಕ್ಷಣೆಗಾಗಿ ಕಾರ್ಯ ನಿರ್ವಹಿಸಿದ ಸೈನಿಕರನ್ನು ಈ ವೇಳೆ ಗೌರವಿಸಲಾಗುವುದು.

#f1f1f1 - POINT 2

ನಾಡಗೀತೆಯೊಂದಿಗೆ ಕಾರ್ಯಕ್ರಮ‌ ಆರಂಭವಾಗಲಿದೆ. 250ಕ್ಕೂ ಹೆಚ್ಚು ಕಲಾವಿದರಿಂದ ನಿರಂತರ ದೇಶಭಕ್ತಿ ಗೀತಗಾಯನ ಹಾಗೂ ವಿಶೇಷ ನೃತ್ಯ ಪ್ರದರ್ಶನವಿರಲಿದೆ. ರಾತ್ರಿ 12 ಗಂಟೆಗೆ ಸಿಡಿಮದ್ದು ಸಿಡಿಸಿ, ಸಿಹಿ ಹಂಚುವ ಮೂಲಕ ಸ್ವಾತಂತ್ರ್ಯೋತ್ಸವ ಆಚರಿಸಲಾಗುವುದು.

#f1f1f1 - POINT 3

ಇದೇ ವೇಳೆ Ask Shivamogga ಎಂಬ ಇನ್‌ಸ್ಟಾಗ್ರಾಂ ಪೆಜ್‌ ಬಿಡುಗಡೆ ಮಾಡಲಾಗುತ್ತದೆ. ಇದರ ಮೂಲಕ ಜಿಲ್ಲೆಯ ಎಲ್ಲ ಚಟುವಟಿಕೆಗಳನ್ನು ವೀಕ್ಷಿಸಬಹುದಾಗಿದೆ.

#f1f1f1 - POINT 4

ಎಲ್ಲರು ಶುಭ್ರ ಬಿಳಿ ಬಟ್ಟೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಬೇಕು. ಸುಮಾರು 10 ಸಾವಿರ ಜನರು ಸೇರುವ ನಿರೀಕ್ಷೆ ಇದೆ. ನೆಹರು ರಸ್ತೆಯಲ್ಲಿ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲಲ್ಲಿ ಎಲ್‌ಇಡಿ ಪರದೆಗಳನ್ನು ಅಳವಡಿಸಲಾಗುತ್ತದೆ.

ಯಾರೆಲ್ಲ ಏನೆಲ್ಲ ಹೇಳಿದರು?

ಕಾಶಿ, ಸಮನ್ವಯ ಸಂಸ್ಥೆ: 2013ರಿಂದ ಸಮನ್ವಯ ಸಂಸ್ಥೆ ವತಿಯಿಂದ ಕಾರ್ಯಕ್ರಮ ನಡೆಸಲಾಗುತ್ತಿತ್ತು. ಈಗ ವಿವಿಧ ಸಂಸ್ಥೆಗಳ ಜೊತೆಗೆ ಸೇರಿ ದೊಡ್ಡ ಮಟ್ಟದಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ.

ಕೆ.ಪಿ.ಶ್ರೀಪಾಲ್‌, ವಕೀಲ: ಇದು ಜಾತಿ, ಧರ್ಮ ಮೀರಿದ ಕಾರ್ಯಕ್ರಮ. ಎಲ್ಲ ಧರ್ಮದ ಧರ್ಮಗುರುಗಳು ಹಾಗೂ ಎಲ್ಲ ಸೈದ್ಧಾಂತಿಕ ಹಿನ್ನೆಲೆಯ ಜನರು ಭಾಗವಹಿಸಲಿದ್ದಾರೆ.

ಸುರೇಖಾ ಹೆಗಡೆ, ಗಾಯಕಿ: ಮೂರು ಗಂಟೆಗಳ ಕಾಲ ನಿರಂತರ ರಾಷ್ಟ್ರಭಕ್ತಿ ಗೀತೆಗಳ ಮೂಲಕ ಸಾಮಾನ್ಯ ಜನರೂ ದೇಶಪ್ರೇಮ ಮೆರೆಯಲಿದ್ದಾರೆ.

ರಾಘವೇಂದ್ರ, ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಿದ ಬಹುತೇಕ ನಾಯಕರು ವಕೀಲರಾಗಿದ್ದರು. ಆದ್ದರಿಂದ ನಮ್ಮ ಪಾಲ್ಗೊಳ್ಳುವಿಕೆ ಅತಿ ಮುಖ್ಯವಾಗಿದೆ.

ಎನ್‌.ಮಂಜುನಾಥ್‌, ಶಿವಮೊಗ್ಗ ಪ್ರೆಸ್‌ ಟ್ರಸ್‌ ಅಧ್ಯಕ್ಷ: ಸ್ವಾತಂತ್ರ್ಯ ಚಳವಳಿಯಲ್ಲಿ ಮುಂಚೂಣಿಯಲ್ಲಿ ಇದ್ದವರೆಲ್ಲ ವಕೀಲರು, ಪತ್ರಕರ್ತರಾಗಿದ್ದರು. ಗಾಂಧೀಜಿ, ಡಾ. ಅಂಬೇಡ್ಕರ್‌ ಸೇರಿದಂತೆ ಹಲವರು ಪತ್ರಕರ್ತರಾಗಿದ್ದರು. ಅವರನ್ನೆಲ್ಲ ಸ್ಮರಿಸುವ ಕಾರ್ಯಕ್ರಮ ಇದಾಗಲಿದೆ.

ಪತ್ರಿಕಾಗೋಷ್ಠಿಯಲ್ಲಿ ಸತೀಶ್ ಕುಮಾರ್ ಶೆಟ್ಟಿ, ಬಿ. ಗೋಪಿನಾಥ್, ವಸಂತ ಹೋಬಳಿದಾರ್, ಮೋಹನ್ ಕುಮಾರ್, ಹರ್ಷ ಭೋವಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.