ಸೂಳೆಬೈಲು, ಊರುಗಡೂರಿನಲ್ಲಿ ಮೇಣದ ಬತ್ತಿ ಹಿಡಿದು ಮೆರವಣಿಗೆ, ಕಾರಣವೇನು?

ಶಿವಮೊಗ್ಗ: ಊರುಗಡೂರಿನಲ್ಲಿ ಗಲಾಟೆ ಬಿಡಿಸಲು ಹೋದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಂಕೇತ್ ಹತ್ಯೆ ಪ್ರಕರಣ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬುಧವಾರ ಸಂಜೆ ಸರ್ವಧರ್ಮೀಯರು ಹಾಗೂ ಸೂಳೆಬೈಲು ಗ್ರಾಮಸ್ಥರು ಒಗ್ಗೂಡಿ ಹಂತಕರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮೇಣದ ಬತ್ತಿ (candle light march) ಹಿಡಿದು ಪ್ರತಿಭಟನಾ ಮೆರವಣಿಗೆ ನಡೆಸಿದರು. ➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಹತ್ಯೆಗೀಡಾದ ವಿದ್ಯಾರ್ಥಿ ಸಂಕೇತ್‌ಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ನೂರಾರು ಜನರು ಕೈಯಲ್ಲಿ ಮೆಣದಬತ್ತಿ ಹಿಡಿದು ಮೌನ ಮೆರವಣಿಗೆ ನಡೆಸಿದರು. ಈ ಪ್ರತಿಭಟನೆಯಲ್ಲಿ ಹಿಂದೂ-ಮುಸ್ಲಿಂ ಮುಖಂಡರು ಹಾಗೂ ಗ್ರಾಮಸ್ಥರು ಪಕ್ಷಭೇದ ಮರೆತು ಪಾಲ್ಗೊಂಡಿದ್ದು ಸಂತಾಪ ವ್ಯಕ್ತಪಡಿಸಿದರು.

Candle-Light-March-at-Sulebailu-in-Shimoga-city

ಊರುಗಡೂರು, ಸೂಳೆಬೈಲು ಪ್ರದೇಶಗಳಲ್ಲಿ ಗಾಂಜಾ ಮತ್ತು ಮಾದಕ ವಸ್ತುಗಳ ಹಾವಳಿ ಹೆಚ್ಚಾಗುತ್ತಿರುವುದೇ ಇಂತಹ ಘಟನೆಗಳಿಗೆ ಕಾರಣ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಕೂಡಲೇ ಗಾಂಜಾ ಮಾರಾಟಗಾರರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಸಂಕೇತ್ ಹತ್ಯೆ ಮಾಡಿದ ಆರೋಪಿಗಳಿಗೆ ಗರಿಷ್ಠ ಶಿಕ್ಷೆಯಾಗಬೇಕು ಎಂದು ಆಗ್ರಹಿಸಲಾಯಿತು. ಈ ಸಂಬಂಧ ಹೆಚ್ಚುವರಿ ರಕ್ಷಣಾಧಿಕಾರಿ ಕಾರಿಯಪ್ಪ ಅವರಿಗೆ ಮನವಿ ಸಲ್ಲಿಸಿದರು.

Candle-Light-March-at-Sulebailu-in-Shimoga-city

ಸೂಳೆಬೈಲು ಸರ್ಕಲ್‌ನಲ್ಲಿ ಸಂಕೇತ್ ಕುಟುಂಬಸ್ಥರನ್ನು ಭೇಟಿ ಮಾಡಿದ ಮುಖಂಡರು ಅವರಿಗೆ ಧೈರ್ಯ ತುಂಬಿ, ಸಂತಾಪ ಸೂಚಿಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

Candle-Light-March-at-Sulebailu-in-Shimoga-city
Candle-Light-March-at-Sulebailu-in-Shimoga-city

ಇದನ್ನೂ ಓದಿ – ಊರುಗಡೂರಿನ ಸಂಕೇತ್‌ ಮನೆಗೆ ಸಂಸದ ರಾಘವೇಂದ್ರ ಭೇಟಿ, ಒಂದು ಲಕ್ಷ ರುಪಾಯಿ ನೆರವು

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Leave a Comment

ಮುಂದಿನ ಸುದ್ದಿ ಓದಿ TRENDING

ಮದ್ಯ ಸೇವಿಸಿ, ಊಟ ಮಾಡಿ ಬಿಲ್‌ ಕೊಡುವ ವಿಚಾರದಲ್ಲಿ ಕಿರಿಕ್‌, ಹೊಟೇಲ್‌ ಗ್ಲಾಸ್‌ ಪೀಸ್‌ ಪೀಸ್‌