ಶಿವಮೊಗ್ಗದಲ್ಲಿ ನಾಯಿ ಮೇಲೆ ಗುಂಡಿನ ದಾಳಿ, CCTVಯಲ್ಲಿ ದೃಶ್ಯ ಸೆರೆ, ಒಬ್ಬನ ವಿರುದ್ಧ ಕೇಸ್‌, ಏನಿದು ಪ್ರಕರಣ?

SHIVAMOGGA LIVE NEWS | 27 DECEMBER 2023 (ಈ ಸುದ್ದಿಯನ್ನು ಇನ್ನು 67 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

SHIMOGA : ಸಾಕು ನಾಯಿ ಒಂದರ ಮೇಲೆ ಗುಂಡು ಹಾರಿಸಿದ ವ್ಯಕ್ತಿಯೊಬ್ಬನ ವಿರುದ್ಧ ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿದೆ. ನಾಯಿಗೆ ಗುಂಡು ಹಾರಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನಾಯಿಗಳ ನಡುವೆ ಜಗಳ

ಶಿವಮೊಗ್ಗದ ಅಮೀರ್‌ ಅಹಮದ್‌ ಕಾಲೋನಿಯಲ್ಲಿ ಚಂದ್ರಿಕಾ ಎಂಬುವವರು ಕಳೆದ 8 ವರ್ಷದಿಂದ ಹೆಣ್ಣು ನಾಯಿ ಸಾಕಿದ್ದಾರೆ. ಈಚೆಗೆ ಈ ನಾಯಿ ಅದೇ ಬೀದಿಯಲ್ಲಿರುವ ವ್ಯಕ್ತಿಯೊಬ್ಬರ ಮನೆಯ ಸಾಕು ನಾಯಿಗೆ ಕಚ್ಚಿತ್ತು. ಇದರಿಂದ ಆಕ್ರೋಶಗೊಂಡ ಆತ, ಚಂದ್ರಿಕಾ ಅವರ ಮನೆ ನಾಯಿಗೆ ಕಲ್ಲು ಮತ್ತು ದೊಣ್ಣೆಯಿಂದ ಹೊಡೆಯುತ್ತಿದ್ದರು. ಹತ್ಯೆ ಮಾಡುವುದಾಗಿ ಹೇಳುತ್ತಿದ್ದರು ಎಂದು ಆರೋಪಿಸಲಾಗಿದೆ.

ಗುಂಡಿನ ದಾಳಿ, ಸಿಸಿಟಿವಿಯಲ್ಲಿ ಸೆರೆ

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ

ಡಿ.24ರಂದು ಮಧ್ಯಾಹ್ನ ಗುಂಡಿನ ಶಬ್ದ ಕೇಳಿಸಿತ್ತು. ಚಂದ್ರಿಕಾ ಅವರು ಮನೆಯಿಂದ ಹೊರ ಬಂದಾಗ ಆ ವ್ಯಕ್ತಿ ಏರ್‌ ಗನ್‌ ಹಿಡಿದು ಮನೆ ಕಡೆಗೆ ತೆರಳುತ್ತಿದ್ದ. ಅಲ್ಲದೆ ಚಂದ್ರಿಕಾ ಅವರ ಸಾಕು ನಾಯಿ ಸೊಂಟದ ಭಾಗದಲ್ಲಿ ಗಾಯವಾಗಿದ್ದು ಕಾಣಿಸಿತು. ಹಾಗಾಗಿ ಮನೆಯಲ್ಲಿ ಚಿಕಿತ್ಸೆ ನೀಡಲಾಯಿತು ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸಿಸಿಟಿವಿ ಪರಿಶೀಲಿಸಿದಾಗ ಕಾರಿನ ಕೆಳಗೆ ಮಲಗಿದ್ದ ನಾಯಿ ಮೇಲೆ ಆ ವ್ಯಕ್ತಿ ಗುಂಡು ಹಾರಿಸಿರುವ ದೃಶ್ಯ ಸೆರೆಯಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ – ಮಹಿಳೆಯರಿಗೆ ಗುಡ್‌ ನ್ಯೂಸ್‌, ಗ್ರಾಮ ಪಂಚಾಯಿತಿಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಕ್ಯಾಂಪ್‌, ಯಾವಾಗ?

ಘಟನೆ ಸಂಬಂಧ ಮುಸ್ತಫಾ ಖಾನ್‌ ಎಂಬಾತನ ವಿರುದ್ಧ ಚಂದ್ರಿಕಾ ಅವರು ಶಿವಮೊಗ್ಗ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್‌ 11ರ ಅಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೆ ಇಬ್ಬರಿಗೆ ಕೋವಿಡ್‌ ಪಾಸಿಟಿವ್‌

JOB NEWS

Jnanasudha Institutions Jobs
ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

crime name image

Leave a Comment