ಮಾಚೇನಹಳ್ಳಿಯಲ್ಲಿ ಅಪಘಾತ, ಪ್ರಜ್ಞೆ ಕಳೆದುಕೊಂಡ ವ್ಯಕ್ತಿ, ಮಲವಗೊಪ್ಪದಲ್ಲಿ ರಾಂಗ್‌ ಸೈಡಲ್ಲಿ ಬಂದು ಯುವತಿಗೆ ಬೈಕ್ ಡಿಕ್ಕಿ

SHIVAMOGGA LIVE NEWS | 28 APRIL 2023

SHIMOGA : ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಬೈಕ್‌ ಡಿಕ್ಕಿ ಹೊಡೆದು ತಲೆ, ಭುಜ, ಕಾಲಿಗೆ ಗಾಯವಾಗಿದು ಪ್ರಜ್ಞಾಹೀನ (Unconscious) ಸ್ಥಿತಿಗೆ ತಲುಪಿದ್ದರು. ಸುಬ್ಬಯ್ಯ ಆಸ್ಪತ್ರೆಗೆ ದಾಖಲಿಸಿದ್ದು ಗಾಯಾಳು ಚೇತರಿಸಿಕೊಳ್ಳುತ್ತಿದ್ದಾರೆ.

ACCIDENT-NEWS-GENERAL-IMAGE.

ಶಿವಮೊಗ್ಗದ ಮಾಚೇನಹಳ್ಳಿ ಐಟಿ ಪಾರ್ಕ್‌ ಮುಂಭಾಗ ಶಿವಮೊಗ್ಗ – ಭದ್ರಾವತಿ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಸ್ಥಳೀಯ ನಿವಾಸಿ ನಾಗೇಂದ್ರ ಗಾಯಗೊಂಡವರು. ತಮ್ಮ ಪತ್ನಿ ಮಣಿಪಾಲಕ್ಕೆ ತೆರಳಬೇಕಿದ್ದರಿಂದ ನಾಗೇಂದ್ರ ಅವರು ಮಾಚೇನಹಳ್ಳಿಯಲ್ಲಿ ಬಸ್‌ ಹತ್ತಿಸಿ, ಮನೆಗೆ ಹಿಂತಿರುಗುತ್ತಿದ್ದರು. ಐಟಿ ಪಾರ್ಕ್‌ ಬಳಿ ರಸ್ತೆ ಡಿವೈಡರ್‌ ಬಳಿ ತೆರಳುತ್ತಿದ್ದಾಗ ಭದ್ರಾವತಿ ಕಡೆಯಿಂದ ಬಂದ ಬೈಕ್‌ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ – ಸಿಗಂದೂರಿಗೆ ತೆರಳುತ್ತಿದ್ದ ಖಾಸಗಿ ಬಸ್‌ ಶಿವಮೊಗ್ಗ – ಭದ್ರಾವತಿ ರಸ್ತೆಯಲ್ಲಿ ಪಲ್ಟಿ, ಅಪಘಾತಕ್ಕೆ ಕಾರಣವೇನು?

ಗಾಯಗೊಂಡಿದ್ದ ನಾಗೇಂದ್ರ ಅವರು ಪ್ರಜ್ಞಾಹೀನ (Unconscious) ಸ್ಥಿತಿಗೆ ತಲುಪಿದ್ದರು. ಅವರನ್ನು ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನಂತರ ಸುಬ್ಬಯ್ಯ ಆಸ್ಪತ್ರೆ ದಾಖಲು ಮಾಡಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Kalleshwara-Enterprises.webp

ರಾಂಗ್‌ ಸೈಡಲ್ಲಿ ಬಂದು ಯುವತಿ ಡಿಕ್ಕಿ

ಮಲವಗೊಪ್ಪದಲ್ಲಿ ಬಿ.ಹೆಚ್.ರಸ್ತೆ ದಾಟುತ್ತಿದ್ದ ಯುವತಿಗೆ ಬೈಕ್‌ ಡಿಕ್ಕಿ ಹೊಡೆದು ಸೊಂಟಕ್ಕೆ ಪೆಟ್ಟು ಬಿದ್ದಿದೆ. ಭದ್ರಾವತಿ ಕಡೆಯಿಂದ ರಾಂಗ್‌ ಸೈಡಿನಲ್ಲಿ ಬಂದ ಬೈಕ್‌ ದಿವ್ಯಾ (19) ಎಂಬುವವರಿಗೆ ಡಿಕ್ಕಿ ಹೊಡೆದಿದೆ. ಗಾಯಗೊಂಡಿದ್ದ ದಿವ್ಯಾಳನ್ನು ಅಶೋಕ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆ ಖರ್ಚು ವೆಚ್ಚ ಭರಿಸುವುದಾಗಿ ಬೈಕ್‌ ಸವಾರ ಭರವಸೆ ನೀಡಿದ್ದ. ಕೊನೆಗೆ ಖರ್ಚು ನೋಡಿಕೊಳ್ಳದ ಹಿನ್ನೆಲೆ ದಿವ್ಯಾಳ ಪೋಷಕರು ತಡವಾಗಿ ದೂರು ನೀಡಿದ್ದಾರೆ. ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

shivamogga live news whatsappa number

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment