ಪೆಟ್ರೋಲ್‌ ದರ ಮತ್ತೆ ಹೆಚ್ಚಳ, ಶಿವಮೊಗ್ಗದಲ್ಲಿ ಇವತ್ತು ಪ್ರತಿ ಲೀಟರ್‌ ಪೆಟ್ರೋಲ್‌ ರೇಟ್‌ ಎಷ್ಟಾಗಿದೆ?

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

ಶಿವಮೊಗ್ಗ: ಪೆಟ್ರೋಲ್ ದರದಲ್ಲಿ (Petrol price) ಮತ್ತೆ ಏರಿಕೆಯಾಗಿದೆ. ಗ್ರಾಹಕರಿಗೆ ಪುನಃ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಇನ್ನೊಂದೆಡೆ ಡೀಸೆಲ್ ದರದಲ್ಲಿ (Diesel price) ಅತ್ಯಲ್ಪ ಇಳಿಕೆ ಕಂಡುಬಂದಿದೆ.

ಶಿವಮೊಗ್ಗದಲ್ಲಿ ಎಷ್ಟಾಗಿದೆ ರೇಟ್‌?

ಸಾಮಾನ್ಯ ಪೆಟ್ರೋಲ್ ದರವು (Normal petrol) ಪ್ರತಿ ಲೀಟರ್‌ಗೆ 95 ಪೈಸೆ ಹೆಚ್ಚಳವಾಗಿದೆ. ಇದರಿಂದಾಗಿ ಶಿವಮೊಗ್ಗದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ ಬೆಲೆ ₹108.06ಗೆ ತಲುಪಿದೆ. ಹಳೆಯ ದರ ಪ್ರತಿ ಲೀಟರ್‌ಗೆ ₹107.11 ಇತ್ತು. ಪ್ರೀಮಿಯಂ ಆವೃತ್ತಿಯಾದ ಪವರ್ ಪೆಟ್ರೋಲ್ (Power petrol) ದರದಲ್ಲೂ 94 ಪೈಸೆ ಏರಿಕೆಯಾಗಿದೆ. ನಿನ್ನೆ ಪ್ರತಿ ಲೀಟರ್‌ಗೆ ₹117.05 ಇತ್ತು, ಇಂದು ಅದು ಪ್ರತಿ ಲೀಟರ್‌ಗೆ ₹117.99 ಕ್ಕೆ ತಲುಪಿದೆ.

Petrol-Price-General-Image.jpg

ಡೀಸೆಲ್ ದರ 6 ಪೈಸೆ ಇಳಿಕೆ

ಸಾಮಾನ್ಯ ಡೀಸೆಲ್ ಬೆಲೆಯಲ್ಲಿ ಪ್ರತಿ ಲೀಟರ್‌ಗೆ 6 ಪೈಸೆ ಇಳಿಕೆಯಾಗಿದೆ. ನಿನ್ನೆ ಪ್ರತಿ ಲೀಟರ್‌ಗೆ ₹95.18 ಇದ್ದ ಸಾಮಾನ್ಯ ಡೀಸೆಲ್‌ ಬೆಲೆ, ಇವತ್ತು ಪ್ರತಿ ಲೀಟರ್‌ಗೆ ₹95.12 ಆಗಿದೆ. ಆದರೆ, ಟರ್ಬೋಜೆಟ್ ಡೀಸೆಲ್ (Turbojet diesel) ದರವು ಪ್ರತಿ ಲೀಟರ್‌ಗೆ 94 ಪೈಸೆ ಹೆಚ್ಚಳವಾಗಿದೆ. ಇವತ್ತು ಇದರ ದರ ಪ್ರತಿ ಲೀಟರ್‌ಗೆ ₹99.69ಕ್ಕೆ ತಲುಪಿದೆ.

ಹೆಚ್ಚಿನ Shimoga News, Shivamogga News ಮತ್ತು SHIVAMOGGA CITY ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.
Kalleshwara-Enterprises.webp

© ಶಿವಮೊಗ್ಗ ಲೈವ್‌ : ಮೇ 19, 2026