ಪೆಟ್ರೋಲ್‌, ಡೀಸೆಲ್‌ ದರ ಮತ್ತೆ ಹೆಚ್ಚಳ, ಶಿವಮೊಗ್ಗದಲ್ಲಿ ಇವತ್ತು ಎಷ್ಟಾಗಿದೆ ರೇಟ್‌?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

ಶಿವಮೊಗ್ಗ: ಪೆಟ್ರೋಲ್‌, ಡೀಸೆಲ್‌ ಬೆಲೆ ಪುನಃ ಏರಿಕೆಯಾಗಿದೆ. ಈ ತಿಂಗಳಲ್ಲಿ ಮೂರನೇ ಬಾರಿಗೆ ತೈಲೋತ್ಪನ್ನಗಳ ದರ ಹೆಚ್ಚಳವಾಗಿದೆ.

➤ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗದಲ್ಲಿ ಎಷ್ಟಾಗಿದೆ ರೇಟ್?‌

  • ಪೆಟ್ರೋಲ್ (Petrol): ನಿನ್ನೆ ₹108.06 ಇದ್ದ ಲೀಟರ್ ಪೆಟ್ರೋಲ್ ದರವು ಇಂದು ₹108.99 ಗೆ ಏರಿಕೆಯಾಗಿದೆ.
  • ಡೀಸೆಲ್ (Diesel): ನಿನ್ನೆ ₹95.12 ಇದ್ದ ಲೀಟರ್ ಡೀಸೆಲ್ ದರವು ಇಂದು ₹97.07 ತಲುಪಿದೆ.
  • ಪವರ್ ಪೆಟ್ರೋಲ್ (Power Petrol): ನಿನ್ನೆ ₹117.99 ಇದ್ದ ದರವು ಇಂದು ₹118.93 ಗೆ ಹೆಚ್ಚಳವಾಗಿದೆ.
  • ಟರ್ಬೋಜೆಟ್ (Turbojet): ನಿನ್ನೆ ₹99.69 ಇದ್ದ ದರವು ಇಂದು ₹100.64 ಗೆ ಏರಿದೆ.

ತಿಂಗಳಲ್ಲಿ ಮೂರನೇ ಬಾರಿ ಹೆಚ್ಚಳ

ಮೇ ತಿಂಗಳಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಮೂರನೇ ಬಾರಿ ಹೆಚ್ಚಳವಾಗುತ್ತಿದೆ. ಮೇ 15ರಂದು ಪೆಟ್ರೋಲ್‌ ದರ ಪ್ರತಿ ಲೀಟರ್‌ಗೆ ₹3.29 ಹೆಚ್ಚಳವಾಗಿತ್ತು. ಮೇ 19ರಂದು 95 ಪೈಸೆ ಏರಿಕೆಯಾಗಿತ್ತು.

Petrol-Price-General-Image.jpg