SHIVAMOGGA LIVE NEWS | ROBBERY | 28 ಮೇ 2022
ರಾತ್ರಿ ಬೈಕ್’ನಲ್ಲಿ ತೆರಳುತ್ತಿದ್ದ ಯುವಕನನ್ನು ಅಡ್ಡಗಟ್ಟಿ ಹಣವನ್ನು ಫೋನ್ ಪೇ ಮಾಡಿಸಿಕೊಂಡು ದರೋಡೆ ಮಾಡಲಾಗಿದೆ.
ಶಿವಮೊಗ್ಗದ ರೈಲ್ವೆ ನಿಲ್ದಾಣ ಸಮೀಪ ಘಟನೆ ಸಂಭವಿಸಿದೆ. ತಾಲೂಕಿನ ಹೊಯ್ಸನಹಳ್ಳಿ ವಿಜಯ ಕುಮಾರ್ (24) ಎಂಬುವವರನ್ನು ಅಡ್ಡಗಟ್ಟಿ ದರೋಡೆ ಮಾಡಲಾಗಿದೆ.
ಏನಿದು ಪ್ರಕರಣ?
ಸವಳಂಗ ರಸ್ತೆಯಲ್ಲಿರುವ ಪರ್ಫೆಕ್ಟ್ ಅಲಾಯ್ಸ್ ಕಂಪನಿಯಲ್ಲಿ ವಿಜಯ ಕುಮಾರ್ ಕೆಲಸ ಮಾಡುತ್ತಿದ್ದಾರೆ. ರಾತ್ರಿ ಪಾಳಿ ಇದ್ದಿದ್ದರಿಂದ ವಿಜಯ್ ಕುಮಾರ್ ಅವರು ಮನೆಯಿಂದ ರೈಲ್ವೆ ನಿಲ್ದಾಣ ಮಾರ್ಗವಾಗಿ ಸವಳಂಗ ರಸ್ತೆ ಕಡೆ ತೆರಳುತ್ತಿದ್ದರು.
ಇಲ್ಲಿನ ಅಮೀರ್ ಅಹಮದ್ ಕಾಲೋನಿ ಬಳಿ ವಿಜಯ್ ಕುಮಾರ್ ಬೈಕನ್ನು ನಾಲ್ವರು ಅಡ್ಡಗಟ್ಟಿದ್ದಾರೆ. ಪರ್ಸ್ ಕಿತ್ತುಕೊಂಡು ಹಣ ಮತ್ತು ಕೊರಳಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದೆ ಹಣವನ್ನು ಫೋನ್ ಪೇ ಮಾಡುವಂತೆ ಬೆದರಿಕೆ ಒಡ್ಡಿದ್ದು, ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿಸಿ, ಹಣ ವರ್ಗಾಯಿಸಿಕೊಂಡಿದ್ದಾರೆ.
ವಿಜಯ್ ಕುಮಾರ್ ಅವರು ಜಯನಗರ ಠಾಣೆಗೆ ದೂರು ನೀಡಿದ್ದಾರೆ. ರಾಬರಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ – ಬಾಲರಾಜ ಅರಸ್ ರಸ್ತೆ ಬಳಿ ಬೈಕ್ ಖದೀಮರ ಹಾವಳಿ
ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.