ಕಲ್ಲು ಹೊಡೆದ ಆರೋಪಿಗಳ ಫೋಟೊ ರಿಲೀಸ್, ಈವರೆಗು ಏನೇನಾಯ್ತು? ಇಲ್ಲಿದೆ 10 ಪಾಯಿಂಟ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

 SHIVAMOGGA LIVE NEWS 

SHIMOGA | ಶಿವಮೊಗ್ಗ ಪೊಲೀಸರು ನಗರದಲ್ಲಿ ಮತ್ತೆ ಶಾಂತಿ ಕದಡುವ ಪ್ರಯತ್ನ ಮಾಡಿದ ಆರೋಪಿಗಳ ಹೆಡೆಮುರಿ ಕಟ್ಟಲಾಗಿದೆ. ಭರ್ಮಪ್ಪ ನಗರದಲ್ಲಿ ಯುವಕನ ತಲೆಗೆ ಕಲ್ಲಿನಿಂದ ಹೊಡೆದು ಗಾಯಗೊಳಿಸಿದ ಪ್ರಕರಣ ಸಂಬಂಧ ಮೂವರನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಅವರ ಫೋಟೊಗಳನ್ನು ಬಿಡುಗಡೆ ಮಾಡಲಾಗಿದೆ. (3 ARREST)

Shimoga Nanjappa Hospital

ಸೋಮವಾರ ರಾತ್ರಿ ಸೀಗೆಹಟ್ಟಿ, ಭರ್ಮಪ್ಪ ನಗರದಲ್ಲಿ ಘಟನೆ ಸಂಭವಿಸಿದೆ. ಆ ಬಳಿಕ ಏನೆಲ್ಲ ಬೆಳವಣಿಗೆಗಳಾದವು. ಅದರ ಟಾಪ್ ಪಾಯಿಂಟ್ ಇಲ್ಲಿದೆ.

 ಪಾಯಿಂಟ್ 1 :  ಸೋಮವಾರ ರಾತ್ರಿ ಸೀಗೆಹಟ್ಟಿ, ಭರ್ಮಪ್ಪ ನಗರದಲ್ಲಿ ಕೆಲವು ದುಷ್ಕರ್ಮಿಗಳು ಅವಾಚ್ಯ ಶಬ್ದಗಳಿಂದ ನಿಂದಿಸುತ್ತ ಬೈಕಿನಲ್ಲಿ ಸಾಗಿದರು. ಭರ್ಮಪ್ಪ ನಗರದಲ್ಲಿ ಪ್ರಕಾಶ್ (25) ಎಂಬಾತನ ತಲೆಗೆ ಇಟ್ಟಿಗೆಯಿಂದ ಹೊಡೆದು ಹಲ್ಲೆ ನಡೆಸಲಾಯಿತು. ಕುಟುಂಬದವರು, ಸ್ಥಳೀಯರು ಪ್ರಕಾಶ್ ನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಿದರು.

(3 ARREST)

 ಪಾಯಿಂಟ್ 2 :  ಘಟನೆ ಬೆನ್ನಿಗೆ ಸೀಗೆಹಟ್ಟಿ ಸರ್ಕಲ್ ನಲ್ಲಿ ಜನ ಗುಂಪುಗೂಡಿದರು. ದುಷ್ಕರ್ಮಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಪೊಲೀಸರು ದೌಡಾಯಿಸಿದರು. ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಕೂಡ ಸ್ಥಳಕ್ಕೆ ಭೇಟಿ ನೀಡಿ, ಜನರನ್ನು ಸಮಾಧಾನ ಪಡಿಸಿದರು. ಈ ವೇಳೆ ದುಷ್ಕರ್ಮಿಗಳನ್ನ ಬಂಧಿಸಬೇಕು, ಕಠಿಣ ಶಿಕ್ಷೆ ಕೊಡಬೇಕು ಎಂದು ಜನರು ಆಗ್ರಹಿಸಿದರು.

hindu harsha sister ashwini

 ಪಾಯಿಂಟ್ 3 :  ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಯಿತು. ತಕ್ಷಣದಿಂದಲೆ ತನಿಖೆ ಆರಂಭಿಸಲಾಯಿತು. ಸಿಸಿಟಿವಿ ಪರಿಶೀಲನೆ ನಡೆಸಿದ ಪೊಲೀಸರು ಶಂಕಿತರನ್ನು ವಿಚಾರಣೆಗೆ ಒಳಪಡಿಸಿದರು.

(3 ARREST)

 ಪಾಯಿಂಟ್ 4 :  ದುಷ್ಕರ್ಮಿಗಳು ಬಜರಂಗದಳ ಕಾರ್ಯಕರ್ತ, ಮೃತ ಹರ್ಷನ ಕುಟುಂಬಕ್ಕೆ ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಲಾಯಿತು. ತಮಗೆ ರಕ್ಷಣೆ ಬೇಕು ಎಂದು ಹರ್ಷನ ಕುಟುಂಬದವರು ಮಾಧ್ಯಮಗಳ ಮುಂದೆ ಅಳಲು ತೊಡಿಕೊಂಡರು.

Mithun-Kumar-IPS-Shimoga-SP-New-File

 ಪಾಯಿಂಟ್ 5 :  ‘ಸೂಕ್ಷ್ಮ ಪ್ರದೇಶಗಳಲ್ಲಿ ಚೆಕ್ ಪೋಸ್ಟ್, ಅನುಮಾನಾಸ್ಪದವಾಗಿ ಓಡಾಡುವವರ ವಿಚಾರಣೆ ಮಾಡಲಾಗುತ್ತದೆ. ಹರ್ಷನ ಕುಟುಂಬಕ್ಕೆ ರಕ್ಷಣೆ ಒದಗಿಸುತ್ತೇವೆ. ಯಾರೂ ಆತಂಕಪಡುವ ಅಗತ್ಯವಿಲ್ಲ. ಕೆ.ಎಸ್.ಆರ್.ಪಿ ಸೇರಿದಂತೆ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದರು.

 ಪಾಯಿಂಟ್ 6 :  ಹರ್ಷ ಮನೆ, ಸೀಗೆಹಟ್ಟಿ ಸರ್ಕಲ್, ಭರ್ಮಪ್ಪ ನಗರ ಸೇರಿದಂತೆ ಹಳೆ ಶಿವಮೊಗ್ಗ ಭಾಗದಲ್ಲಿ ಪೊಲೀಸ್ ಬಂದೋಬಸ್ತ್ ಹೆಚ್ಚಳ.

 ಪಾಯಿಂಟ್ 7 :  ಅಶಾಂತಿಗೆ ಕಾರಣರಾದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಒತ್ತಾಯಿಸಿದರು. ಪಿಎಫ್ಐ ಸಂಘಟನೆ ನಿಷೇಧವಾಗಿದ್ದರೂ ಅದು ಇನ್ನೂ ಜೀವಂತವಾಗಿದೆ. ಗೂಂಡಾಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

Minister KS Eshwarappa

 ಪಾಯಿಂಟ್ 8 :  ಸೀಗೆಹಟ್ಟಿ, ಭರ್ಮಪ್ಪನಗರ, ಗಾಂಧಿ ಬಜಾರ್ ಸೇರಿದಂತೆ ಹಳೆ ಶಿವಮೊಗ್ಗ ಭಾಗದಲ್ಲಿ ಪೊಲೀಸರು ರೂಟ್ ಮಾರ್ಚ್ ಮಾಡಿದರು. ಆತಂಕ ನಿವಾರಣೆಗಾಗಿ ರೂಟ್ ಮಾರ್ಚ್ ಮಾಡಿದ ಪೊಲೀಸರು.

 ಪಾಯಿಂಟ್ 9 :  ಪ್ರಕಾಶ್ ಮೇಲೆ ಹಲ್ಲೆ ನಡೆಸಿ, ಅವಾಚ್ಯವಾಗಿ ಕೂಗಿಕೊಂಡು ಬೈಕಿನಲ್ಲಿ ಸಾಗಿದ ಮೂವರನ್ನು ಬಂಧಿಸಿದ ಪೊಲೀಸರು. ಕ್ಲಾರ್ಕ್ ಪೇಟೆಯ ಮಾರ್ಕೆಟ್ ಫೌಜಾನ್ (22), ಅಜರ್ ಅಲಿಯಾಸ್ ಅಜ್ಜು (24), ಫರಾಜ್ (21) ಎಂಬುವವರನ್ನು ಬಂಧಿಸಲಾಯಿತು. ಇವರ ಫೋಟೊಗಳನ್ನು ಕೂಡ ಬಿಡುಗಡೆ ಮಾಡಲಾಯಿತು. ಇನ್ನಿಬ್ಬರು ತಲೆ ಮರೆಸಿಕೊಂಡಿದ್ದು ಅವರನ್ನು ಬಂಧಿಸಲಾಗುತ್ತದೆ ಎಂದು ಪೊಲೀಸ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Shimoga Nanjappa Hospital

ಕ್ಲಿಕ್ ಮಾಡಿ ಇದನ್ನೂ ಓದಿ ಶಿವಮೊಗ್ಗದಲ್ಲಿ ಆರೋಪಿ ಕಾಲಿಗೆ ಗುಂಡು ಹೊಡೆದ ಪೊಲೀಸರು

 ಪಾಯಿಂಟ್ 10 :  ಹಲ್ಲೆಕೋರರಿಗೆ ಪ್ರವೀಣ್ ಎಂಬಾತ ಈ ಹಿಂದೆ ಬೈದಿದ್ದ. ಇದೆ ಕಾರಣಕ್ಕೆ ಪ್ರವೀಣ್ ವಿರುದ್ಧ ಅವಾಚ್ಯವಾಗಿ ಬೈದುಕೊಂಡು ಆರೋಪಿಗಳು ರಸ್ತೆಯಲ್ಲಿ ಸಾಗಿದ್ದರು. ಪ್ರಕಾಶ್ ಎದುರಿಗೆ ಸಿಕ್ಕಾಗ ಆತನ ತಲೆಗೆ ಇಟ್ಟಿಯಿಂದ ಹೊಡೆದು ಹಲ್ಲೆ ಮಾಡಿದ್ದಾರೆ ಎಂದು ವಿಚಾರಣೆಯಿಂದ ಗೊತ್ತಾಗಿದೆ.

ಸೀಗೆಹಟ್ಟಿ, ಭರ್ಮಪ್ಪನಗರ ಮತ್ತು ಹಳೆ ಶಿವಮೊಗ್ಗ ಭಾಗದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ಮುಂದುವರೆದಿದೆ. ಅನುಮಾನಾಸ್ಪದ ವ್ಯಕ್ತಿಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಕೆಲವು ಕಡೆ ವಾಹನಗಳ ತಪಾಸಣೆ ಮಾಡಲಾಗುತ್ತಿದೆ.

Shimoga Nanjappa Hospital

ಕ್ಲಿಕ್ ಮಾಡಿ ಇದನ್ನೂ ಓದಿ ವೆಂಕಟೇಶ ನಗರದಲ್ಲಿ ವಿಜಯ್ ಕೊಲೆಗೆ ಕಾರಣವಾಯ್ತು ಕೊರಳಲ್ಲಿದ್ದ ಸರ

ADVERTISEMENT

  • ಆರೋಗ್ಯ ತುರ್ತು ಸಂದರ್ಭದಲ್ಲಿ ಹಣಕಾಸು ಹೊಂದಿಸುವುದು ಸುಲಭವೇನಲ್ಲ. ಒಂದು ವೇಳೆ INSURANCE ಇದ್ದರೆ, ನಿರಮ್ಮಳವಾಗಿರಬಹುದು ಅಲ್ಲವೆ? ಈಗಲೆ INSURANCE ಮಾಡಿಸಿ. ಒಳ್ಳೆಯ INSURANCE PLANSಗಾಗಿ ಕರೆ ಮಾಡಿ – LIC LIFE INSURANCE – ಅನಿಲ್ 9538414151, ಪ್ರಶಾಂತ್ 9972194422
  • ಸುಂದರ ಮನೆ ಕಟ್ಟಬೇಕು, ಸ್ವಂತ ಮನೆಯಲ್ಲಿ ನೆಮ್ಮದಿಯ ಬದುಕು ಸಾಗಿಸಬೇಕು ಅನ್ನವು ಆಸೆ ಯಾರಿಗಿಲ್ಲ? ಇನ್ಯಾಕೆ ತಡ? ಮನೆ ಕಟ್ಟಲು LICಯಿಂದ HOUSING LOAN ಲಭ್ಯವಿದೆ. ಇವತ್ತೇ ಸಂಪರ್ಕಿಸಿ – ಪ್ರಶಾಂತ್ 9972194422

SHIVAMOGGA LIVE WHATSAPP

ನಿಮ್ಮೂರು, ನಿಮ್ಮ ಏರಿಯಾದ ಕಾರ್ಯಕ್ರಮಗಳು, ಸಮಸ್ಯೆಗಳು ಸುದ್ದಿಯಾಗಬೇಕಾ? ನೀವೇ ವರದಿಗಾರರಾಗಿ. ವಿಡಿಯೋ, ಫೋಟೊ ಮಾಡಿ 7411700200 ಮೊಬೈಲ್ ನಂಬರ್’ಗೆ ವಾಟ್ಸಪ್ ಮಾಡಿ. ನೆನಪಿರಲಿ, ಸುದ್ದಿ ಪ್ರಕಟಣೆಗೆ ನಾವು ಹಣ ಪಡೆಯುವುದಿಲ್ಲ.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : October 26, 2022

Leave a Comment