ಶಿವಮೊಗ್ಗದ ಸ್ಪಾ, ಪಾರ್ಲರ್‌, ಸಲೂನ್‌ಗಳಲ್ಲಿ ದಿಢೀರ್‌ ತಪಾಸಣೆ

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಸ್ಪಾ (massage parlour) ಹೆಸರಿನಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಪ್ರಮುಖರು ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕಾರಿಯಪ್ಪ ಅವರಿಗೆ ಮನವಿ ಸಲ್ಲಿಸಿದರು.

ಶಿವಮೊಗ್ಗ ನಗರದಲ್ಲಿ ಮಸಾಜ್ ಪಾರ್ಲರ್‌ಗಳು ನಾಯಿ ಕೊಡೆಗಳಂತೆ ತಲೆಯೆತ್ತಿವೆ. ಇವುಗಳಿಗೆ ಕಡಿವಾಣ ಇಲ್ಲದಂತಾಗಿದೆ. ಇಲ್ಲಿ ಅಕ್ರಮ ದಂಧೆಗಳು ನಡೆಯುತ್ತಿವೆ. ಅಮಾಯಕ ಹೆಣ್ಣು ಮಕ್ಕಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಈಗಾಗಲೇ ಸಾಕಷ್ಟು ದೂರುಗಳನ್ನು ಸಲ್ಲಿಸಿದರೂ ಕಡಿವಾಣ ಬಿದ್ದಿಲ್ಲ ಎಂದು ದೂರಿದರು.

Shivamogga spa and massage parlour illegal activities action

ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷೆ ಕವಿತಾ ರಾಘವೇಂದ್ರ, ಕೆಪಿಸಿಸಿ ಸಂಯೋಜಕರಾದ ಕವಿತಾ ತೊಟ್ಟಿನವರ್, ಮುಖಂಡರಾದ ಹರ್ಷ, ಮುರಳಿ ಸಣ್ಣಕ್ಕಿ, ಆನಂದ್‌, ಶಾರದಾ ಮತ್ತಿತರರಿದ್ದರು.

ಸ್ಪಾ, ಸಲೂನ್‌, ಪಾರ್ಲರ್‌ನಲ್ಲಿ ಪರಿಶೀಲನೆ

Shivamogga spa and massage parlour illegal activities action

ಇನ್ನೊಂದೆಡೆ, ದೊಡ್ಡಪೇಟೆ ಠಾಣೆ ಪೊಲೀಸರು ವಿವಿಧ ಸ್ಪಾ, ಸಲೂನ್‌, ಪಾರ್ಲರ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಹಿಳಾ ಸಿಬ್ಬಂದಿಯೊಂದಿಗೆ ದಿಢೀರ್‌ ಭೇಟಿ ನೀಡಿದ ಪೊಲೀಸರು, ತಪಾಸಣೆ ನಡೆಸಿದರು. ಕಾನೂನು ಬಾಹಿರ ಚಟುವಟಿಕೆ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

ಇದನ್ನೂ ಓದಿ : ನ್ಯಾಯಾಲಯದ ಸಿಬ್ಬಂದಿಗೆ ಫೋನಿನಲ್ಲಿ ‘ಮಂಗಳಮ್ಮ’ ಎಂದು ಪರಿಚಯಿಸಿಕೊಂಡು ಬೆದರಿಕೆ, ಏನಿದು ಕೇಸ್‌?

ಹೆಚ್ಚಿನ Shimoga News, Shivamogga News ಮತ್ತು SHIVAMOGGA CITY ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.

© ಶಿವಮೊಗ್ಗ ಲೈವ್‌ : ಮೇ 6, 2026